Baharat Rice: ಇನ್ಮುಂದೆ ಇಂತವರಿಗೆ ಸಿಗಲ್ಲ ಮೋದಿ ಭಾರತ್ ರೈಸ್, ಕೇಂದ್ರ ಸರ್ಕಾರದ ಹೊಸ ರೂಲ್ಸ್

ಇನ್ಮುಂದೆ ಇಂತವರಿಗೆ ಸಿಗಲ್ಲ ಮೋದಿ ಭಾರತ್ ರೈಸ್

Baharat Rice Cancellation: ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿಯ ಬೆಲೆಯ ನಿಯಂತ್ರಣಕ್ಕಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಮೂಲಕ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಅಕ್ಕಿಯ ಬೆಲೆಯ ವಿಚಾರವಾಗಿ ಸರ್ಕಾರ ಬಿಗ್ ರಿಲೀಫ್ ನೀಡಿತ್ತು. ಜನರು ಭಾರತ್ ರೈಸ್ ಅನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದ್ದರು.

ಭಾರತ್ ಬ್ರಾಂಡ್ ನ ಮೂಲಕ ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಭಾರತ್ ರೈಸ್ ಖರೀದಿಸುವವರಿಗೆ ಶಾಕ್ ನೀಡಿದೆ.

Bharat Rice Cancellation
Image Credit: Varthabharati

ಇನ್ಮುಂದೆ ಇಂತವರಿಗೆ ಸಿಗಲ್ಲ ಮೋದಿ ಭಾರತ್ ರೈಸ್
ಲೋಕಸಭೆ ಚುನಾವಣೆಗೂ ಮುನ್ನ ಆರಂಭಿಸಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಯೋಜನೆ ಜುಲೈನಿಂದ ಸ್ಥಗಿತಗೊಂಡಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ರಹಿತ ಜನಸಾಮಾನ್ಯರಿಗೆ ಅನುಕೂಲಕರವಾದ ಪಡಿತರ ವ್ಯವಸ್ಥೆಯಿಂದಾಗಿ  ಅನ್ನು ಅಮಾನತುಗೊಳಿಸಲಾಗಿದೆ. ಇನ್ನುಮುಂದೆ ಜನಸಾಮಾನ್ಯರು ಕಡಿಮೆ ದರದಲ್ಲಿ ಭಾರತ್ ಅಕ್ಕಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಕೇಂದ್ರ ಸರ್ಕಾರದ ಹೊಸ ರೂಲ್ಸ್
ಯೋಜನೆಯಡಿ ಪ್ರತಿ ಕೆಜಿ ಅಕ್ಕಿಗೆ 29 ರೂ. 27.50 ರೂ. ಗೆ ಗೋಧಿ ಹಿಟ್ಟು, ಕಡೆಲೆಕಾಯಿಗೆ 60 ರೂಪಾಯಿಗೆ ವಿತರಿಸಲಾಯಿತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸುವ ಯೋಜನೆ ಇದಾಗಿತ್ತು. ಭಾರತ್ ಅಕ್ಕಿಗೂ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಇದ್ದಕ್ಕಿದ್ದಂತೆ ಯೋಜನೆ ರದ್ದಾಗಿದೆ. ಕೇಂದ್ರದ ಆದೇಶದಂತೆ ಜೂ.10 ರವರೆಗೆ ಸಾಮಗ್ರಿ ಪೂರೈಕೆಯಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ವಿತರಣೆ ಸ್ಥಗಿತಗೊಳಿಸಲಾಗಿದೆ.

Bharat Rice Cancellation News
Image Credit: Indiamart

Join Nadunudi News WhatsApp Group

Join Nadunudi News WhatsApp Group