Congress Guarantees: ಇಂತವರಿಗೆ ಕಾಂಗ್ರೆಸ್ ನ ಯಾವುದೇ ಫ್ರೀ ಭಾಗ್ಯ ಸಿಗುವುದಿಲ್ಲ, ಹೊಸ ಟ್ವಿಸ್ಟ್

ಫ್ರೀ ಭಾಗ್ಯಗಳಿಗೆ ಹೊಸ ಟ್ವಿಸ್ಟ್ ನೀಡಿದ ಕಾಂಗ್ರೆಸ್.

Karnataka Congress pre-poll guarantees: ಕರ್ನಾಟಕದಲ್ಲಿ ಸುಭದ್ರವಾಗಿದ್ದ ಬಿಜೆಪಿ ಸರ್ಕಾರ ಈಗಾಗಲೇ ಪತನವಾಗಿ ಮತದಾರ ಬಾಂಧವ ಸಂಪೂರ್ಣವಾಗಿ ಕಾಂಗ್ರೆಸ್ ಕೈ ಹಿಡಿದಿರುವುದು ಎಲ್ಲರಿಗು ತಿಳಿದಿರುವ ವಿಚಾರ. ಇನ್ನು ಕಾಂಗ್ರೆಸ್ ಸರ್ಕಾರ ರಚನೆಯಾಗುವ ಮುನ್ನವೇ ಕೆಲವೊಂದು ಪ್ರಶ್ನೆಗಳಿಗೆ ಇನ್ನು ಕೂಡ ಸರಿಯಾದ ಉತ್ತರ ಸಿಕ್ಕಿಲ್ಲ .

Congress has given a new twist to free fortunes.
Image Credit: deccanherald

ಫ್ರೀ ಭಾಗ್ಯ ಯಾರಿಗೆಲ್ಲಾ ಸಿಗುತ್ತೆ?

ಸದ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಗೆಲ್ಲಲು ಮುಖ್ಯ ಕಾರಣ ಎಂದೇ ಹೇಳಲಾಗುತ್ತಿರುವ ಫ್ರೀ ಭಾಗ್ಯಗಳು ಜನರ ಮನಸ್ಸಲ್ಲಿ ನಾನಾ ಬಗೆಯೇ ಪ್ರಶ್ನೆ ಮೂಡಿಸಿವೆ, ಹೌದು ಎಲ್ಲರಿಗು ಉಚಿತ ಕರೆಂಟ್ ಅಕ್ಕಿ ಹಾಗು ಮಹಿಳೆಯರಿಗೆ ಬಸ್ ಫ್ರೀ ಎಂದಿದ್ದ ಕಾಂಗ್ರೆಸ್ ಸರ್ಕಾರ ಯಾವುದೇ ಕಂಡೀಷನ್ ಹಾಕಿರಲಿಲ್ಲ. ಇದೀಗ ಈ ಭಾಗ್ಯಗಳಿಗೆ ಕಂಡೀಷನ್ ಇದೆ ಎನ್ನುವುದು ಜನರಿಗೆ ತಲೆ ನೋವು ತರಿಸಿದೆ.

ಇಂತಹವರಿಗೆ ಸಿಗಲ್ಲ ಬಿಟ್ಟಿ ಭಾಗ್ಯ!

ಈಗಾಗಲೇ ಸರ್ಕಾರ ಘೋಷಿಸಿರುವ ಹಲವು ಭಾಗ್ಯಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಕೋಟಿ ಕೋಟಿ ಹಣ ಬೇಕೇ ಬೇಕು, ಲೆಕ್ಕಾಚಾರದ ಪ್ರಕಾರ ಎಲ್ಲರಿಗು ಕರೆಂಟ್ ಫ್ರೀ ಕೊಟ್ಟರೆ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಮನೆಯಲ್ಲಿ ಕಾರು ಇದ್ದವರಿಗೆ ಹಾಗು ಆದಾಯ ತೆರಿಗೆ ಕಟ್ಟುವವರಿಗೆ ಮತ್ತು ಮನೆಯಲ್ಲಿ ಸರ್ಕಾರೀ ಹಾಗು ಕೇಂದ್ರ ನೌಕರರು ಇದ್ದಾರೆ ಅಂತಹವರಿಗೆ ಭಾಗ್ಯಗಳು ಸಿಗುವುದಿಲ್ಲ ಎಂದೇ ಹೇಳಲಾಗುತ್ತಿದೆ.

Join Nadunudi News WhatsApp Group

who have a car at home and those who pay income tax will not get fortunes.
Image Credit: hindustantimes

ಸರ್ಕಾರವೇ ಉತ್ತರ ಕೊಡಬೇಕು

ಹೌದು ಸದ್ಯ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್ ಕೂಡ ಇದನ್ನೇ ಹೇಳಿದ್ದಾರೆ, ಎಲ್ಲರಿಗು ಉಚಿತ ಭಾಗ್ಯ ಸಿಗೋಲ್ಲ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲಾ ಭಾಗ್ಯಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದು ಹೇಗೆ ಯಾವ ರೀತಿ ಜಾರಿಗೆ ಬರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

 

Join Nadunudi News WhatsApp Group