Corona Virus: ದೇಶದಲ್ಲಿ ಮತ್ತೆ ಹೆಚ್ಚಾಯಿತು ಕರೋನ, ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ.

ದೇಶದಲ್ಲಿ ಕರೋನ ಸೋಂಕು ಮತ್ತೆ ಹೆಚ್ಚಾದ ಕಾರಣ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನ ಪ್ರಕಟ ಮಾಡಿದೆ.

Covid 19: ಈ ಹಿಂದೆ ವಿಶ್ವದಾದ್ಯಂತ ಕೋವಿಡ್ 19 (Covid 19) ಹರಡಿದ್ದು ಇದರಿಂದಾಗಿ ಸಾಕಷ್ಟು ಜನರು ಮರಣ ಹೊಂದಿದ್ದರು. ಕೋವಿಡ್ 19 ನ ಕಾರಣದಿಂದಾಗಿ ಸಾವಿರಾರು ಜನರು ಸಾವು ಬದುಕಿನ ಮದ್ಯೆ ಹೋರಾಡಿದ್ದಾರೆ. ಕೆಲವರು ಸಾವನ್ನು ಗೆದ್ದು ಬಂದರೆ, ಇನ್ನು ಕೆಲವರು ಈ ಕರೋನ ವೈರಸ್ (Corona Virus) ಗೆ ಬಲಿಯಾಗಿದ್ದಾರೆ. ಇದೀಗ ಮತ್ತೆ ದೆಹಲಿಯಲ್ಲಿ (Delhi) ಕರೋನ ಭಯ ಹುಟ್ಟಿಕೊಂಡಿದೆ.

Covid 19 new rules
Image Source: Kannada Prabha

ದೆಹಲಿಯಲ್ಲಿ ಕಂಡು ಬಂದ ಕರೋನ ಪ್ರಕರಣಗಳು
ಕಳೆದ ವರ್ಷವಷ್ಟೇ ಕೋವಿಡ್ ನಿಂದ ಜನತೆ ಸ್ವಲ್ಪ ನಿರಾಳರಾಗಿದ್ದರು. ದೇಶದಲ್ಲಿ ಕೋವಿಡ್ ಸಮಸ್ಯೆಯ ಪರಿಣಾಮ ಕಡಿಮೆ ಆಗಿದ್ದವು. ಆದರೆ ಇದೀಗ ಮತ್ತೆ ಕೋವಿಡ್ ಭಯ ಹುಟ್ಟಿಕೊಂಡಿದೆ. ದೆಹಲಿಯಲ್ಲಿ ಇದೀಗ ಮತ್ತೆ ಕರೋನ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಕರೋನ ವೈರಸ್ ಪ್ರಕರಣಗಳು ಹೆಚ್ಚಿದ ಕಾರಣ ಕೇಂದ್ರ ಸರ್ಕಾರ ಮಹತ್ವದ ಸೂಚನೆ ಹೊರಡಿಸಿದ್ದಾರೆ. ಇನ್ನು ದೆಹಲಿಯಲ್ಲಿ ಎಷ್ಟು ಕೋರನ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನುವ ಬಗ್ಗೆ ತಿಳಿದುಕೊಳೋಣ.

Covid 19 new rules
Image Source: India Today

ದೆಹಲಿಯಲ್ಲಿ ಹೆಚ್ಚಾಗಿದೆ ಕರೋನ ಭೀತಿ
ಕಳೆದ 2 ವರ್ಷಗಳ ಹಿಂದೆ ಕರೋನ ಮಹಾಮಾರಿ ಸಾಕಷ್ಟು ಜನರ ಪ್ರಾಣವನ್ನು ತೆಗೆದುಕೊಂಡಿದೆ. ಇದೀಗ ಮತ್ತೆ ದೆಹಲಿಯಲ್ಲಿ ಕರೋನ ಭೀತಿ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 733 ಹೊಸ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದೆ.

ಕಳೆದ ವಾರದನ್ನು ದೆಹಲಿಯಲ್ಲಿ 6 ಸೋಂಕಿತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮಾರ್ಚ್ 30 ರಿಂದಲೇ ದೆಹಲಿಯಲ್ಲಿ ಕರೋನ ಪ್ರಕರಣಗಳು ಏರುಗತಿಯಾಗುತ್ತಿದೆ. ಏಪ್ರಿಲ್ 5 ರಂದು ಕರೋನ ಪ್ಯಾಸಿಟಿವಿಟಿ ದರವು 26 .54 ಪ್ರತಿಶತದಷ್ಟು ವರದಿಯಾಗಿದೆ.

Join Nadunudi News WhatsApp Group

Covid 19 new rules
Image Source: Tv9

ಕರೋನ ಹೆಚ್ಚಳದ ಕಾರಣ ಮಹತ್ವದ ಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ
ದೇಶದಲ್ಲಿ ಕರೋನ ಭೀತಿ ಹೆಚ್ಚಾಗಿದೆ. ಹೆಚ್ಚಾಗುತ್ತಿರುವ ಕರೋನ ಪ್ರಕರಣಗಳ ಕುರಿತು ಕೇಂದ್ರ ಆರೋಗ್ಯ ಸಚಿವ ಮುನ್ಸೂಖ್ ಮಾಂಡವಿಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಭೆ ನಡೆಸಿ ಇವರು ಕರೋನ ಹೆಚ್ಚಳದ ಪ್ರಕರಣಕ್ಕೆ ಮಹತ್ವದ ಸೂಚನೆ ಹೊರಡಿಸಿದ್ದಾರೆ. ಕೋವಿಡ್ 19 ನಿರ್ವಹಣೆಗೆ ಎಲ್ಲರೂ ಸಿದ್ಧರಾಗಿರಬೇಕು, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಎಂದಿದ್ದಾರೆ.

Covid 19 new rules
Image Source: Times Of India

Join Nadunudi News WhatsApp Group