E -Shram Card: ಇ-ಶ್ರಮ್ ಕಾರ್ಡ್ ಪಡೆಯಲು ಬೇಕಾಗಿರುವ ಅರ್ಹತೆಗಳು ಏನು, ಈ ದಾಖಲೆ ಇದ್ದರೆ ಮಾತ್ತ್ರ ಸಿಗಲಿದೆ ಇ-ಶ್ರಮ್ ಕಾರ್ಡ್

ಇ-ಶ್ರಮ್ ಕಾರ್ಡ್ ಪಡೆಯಲು ಈ ದಾಖಲೆಗಳು ಅಗತ್ಯ, ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

Document Required For E -Shram Card: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರನ್ನು ಸಮರ್ಥರನ್ನಾಗಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ. ಸದ್ಯ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ.

ಇನ್ನು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು E -Shram Card ಅನ್ನು ಸರ್ಕಾರ ಪರಿಚಯಿಸಿದೆ. ಇದೀಗ ನಾವು E -Shram Card ಮಾಡಿಸಲು ಇರಬೇಕಾದ ಅರ್ಹತೆಗಳೇನು..? ನೋಂದಣಿ ಹೇಗೆ..? ಬೇಕಾಗುವ ದಾಖಲೆಗಳಾವುವು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Document Required For E -Shram Card
Image Credit: Studycafe

ಅಸಂಘಟಿತ ವಲಯದ ಕಾರ್ಮಿಕರಿಗಾಗಿ E -Shram Card
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ E -Shram Card ಯೋಜನೆಯನ್ನು ಪರಿಚಯಿಸಿದೆ. ಇದಕ್ಕಾಗಿಯೇ ಸರ್ಕಾರ ಈ ಶ್ರಮ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು.

E -Shram Card ಪಡೆಯುವುದರಿಂದ ಏನು ಪ್ರಯೋಜನ
ಯೋಜನೆಯ ಲಾಭವನ್ನು ಪಡೆಯಲು ಕಾರ್ಮಿಕರು E -Shram Card ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. E -Shram Card ನ ಮೂಲಕ 60 ವರ್ಷದ ನಂತರ 3,000 ಪಿಂಚಣಿ, ವಿಮೆ ಮತ್ತು ಅಂಗವೈಫಲ್ಯ ಸಮಯದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ಗಳ ಆರ್ಥಿಕ ನೆರವು ಹಾಗೂ ಸಾವಿನ ಸಂದರ್ಭದಲ್ಲಿ 2,00,000 ರೂ. ಗಳ ಹಣಕಾಸಿನ ಸಹಾಯವನ್ನು ಪಡೆಯಬಹುದು.

E -Shram Card
Image Credit: Kanakkupillai

ಇ-ಶ್ರಮ್ ಕಾರ್ಡ್ ಪಡೆಯಲು ಬೇಕಾಗಿರುವ ಅರ್ಹತೆಗಳು ಏನು..?
•ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

Join Nadunudi News WhatsApp Group

•ಅರ್ಜಿದಾರರ ವಯಸ್ಸು 16 ರಿಂದ 59 ವರ್ಷಗಳು.

•ಮೊಬೈಲ್ ಸಂಖ್ಯೆ

•E -Shram Card ಗೆ ಅರ್ಜಿ ಸಲ್ಲಿಸಲು ಬಯಸುವವರು CSC- Common Service Centre ಅಥವಾ ಈ ಶರ್ಮಾ ಪೋರ್ಟಲ್ ನ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಈ ದಾಖಲೆ ಇದ್ದರೆ ಮಾತ್ತ್ರ ಸಿಗಲಿದೆ ಇ-ಶ್ರಮ್ ಕಾರ್ಡ್
•ಆಧಾರ್ ಕಾರ್ಡ್

•ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರಬೇಕು.

•ಬ್ಯಾಂಕ್ ಖಾತೆಯ ವಿವರ

Join Nadunudi News WhatsApp Group