e-Shram Card: ಈ ಕಾರ್ಡ್ ಮಾಡಿಸಿಕೊಂಡರೆ ಕೇಂದ್ರದಿಂದ ನಿಮಗೆ ಸಿಗಲಿದೆ 2 ಲಕ್ಷ ರೂ ಉಚಿತ, Online ನಲ್ಲಿ ಅರ್ಜಿ ಹಾಕಿ

E -Shram ಕಾರ್ಡ್ ಮಾಡಿಸಿಕೊಂಡರೆ ಕೇಂದ್ರದಿಂದ ಸಿಗಲಿದೆ 2 ಲಕ್ಷ ರೂ

e-Shram Card Details: ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವವರು ಉತ್ತಮವಾದ ರೀತಿಯಲ್ಲಿ ಜೀವನ ನೆಡೆಸಿತ್ತಾರೆ, ಆದರೆ ಆರ್ಥಿಕವಾಗಿ ಹಿಂದುಳಿದವರು ಈಗಿನ ದಿನಗಳಲ್ಲಿ ಜೀವನ ಸಾಗಿಸುವುದು ಕಠಿಣವಾಗಿದೆ. ಈ ಕಾರಣಕ್ಕಾಗಿಯೇ ದೇಶದಲ್ಲಿ ಮೋದಿ ಸರ್ಕಾರ ಆರ್ಥಿಕವಾಗಿ ದುರ್ಬಲರಾಗಿರುವ ಜನರನ್ನು ಸಮರ್ಥರನ್ನಾಗಿಸಲು ಹಲವು ಯೋಜನೆಗಳನ್ನು ಆರಂಭಿಸಿದೆ.

ಸದ್ಯ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಹಾಗಾದರೆ ನಾವೀಗ ಆ ಯೋಜನೆ ಯಾವುದು…? ಅದರ ಪ್ರಯೋಜನಗಳೇನು…? ಅದನ್ನು ಯಾರು ಪಡೆದುಕೊಳ್ಳಬಹುದು…? ಹಾಗೆ ಆ ಯೋಜನೆಗೆ ಅರ್ಜಿ ಸಲ್ಲಿಸುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

e-Shram Card Details
Image Credit: Studycafe

e-Shram Card
2020 ರಲ್ಲಿ Covid ಎನ್ನುವ ಮಹಾಮಾರಿ ಇಡೀ ಪ್ರಪಂಚವನ್ನೇ ಆವರಿಸಿತ್ತು. ಇಂತಹ ಸಂದರ್ಭದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಕಟ್ಟಡ ಕೆಲಸ ಮಾಡುವವರು ದಿನಗೂಲಿ ಕಾರ್ಮಿಕರು ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಯಿತು. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ 2020 ರಲ್ಲಿ ಕೇಂದ್ರದ ಮೋದಿ ಸರ್ಕಾರ e-Shram Card ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಾಗುತ್ತದೆ.

Benefits…?
•ಕಾರ್ಮಿಕ ಸಮುದಾಯದವರು ಮಕ್ಕಳ ವಿಧ್ಯಾಭ್ಯಾಸದಿಂದ ಹಿಡಿದು ಮರಣದ ಸಮಯದಲ್ಲಿ ಅಂತ್ಯಸಂಸ್ಕಾರದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸರ್ಕಾರ ಸಹಾಯಧನ ನೀಡುತ್ತದೆ.
•ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದರೆ 2 ಲಕ್ಷ ಅಪಘಾತ ವಿಮೆ ನೀಡಲಾಗುತ್ತದೆ.
•ಅಪಘಾತದಲ್ಲಿ ಶಾಶ್ವತ ಅಂಗವೈಫಲ್ಯ ಹೊಂದಿದರೆ 1 ಲಕ್ಷ ವಿಮೆಯನ್ನು ನೀಡಲಾಗುತ್ತದೆ.

e-shram card Benefits
Image Credit: Newsncr

Qualification…?
• ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುವವರು.
•ಸ್ವೀಗ್ಗಿ , ಝೋಮ್ಯಾಟೋ ಗಳಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು.
•ಆಟೋ ಚಾಲಕರು, ಅಸಂಘಟಿತ ವಲಯದ ಕಾರ್ಮಿಕರು
•18-59 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು.

Join Nadunudi News WhatsApp Group

Online ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಕೇಂದ್ರ ಸರ್ಕಾರದ ಅಧಿಕೃತ Website https://eshram.gov.in/ ಮೇಲೆ ಕ್ಲಿಕ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಬೇಕು. ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಾನ್ ಸಂಖ್ಯೆ, ಬ್ಯಾಂಕ್ ಡೀಟೇಲ್ಸ್ ನಮೂದಿಸಬೇಕು, ನಂತರ ಮೊಬೈಲ್ ಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಿ ಅಗತ್ಯವಿರುವ ದಾಖಲೆಯನ್ನು Scan ಮಾಡಿ Submit ಮಾಡಬೇಕು.

Join Nadunudi News WhatsApp Group