Gruha Lakshmi: ಈ ಮಹಿಳೆಯರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ 7 ನೇ ಕಂತಿನ 2000 ರೂ, ನಿಮ್ಮ ಹೆಸರು ಚೆಕ್ ಮಾಡಿ

ಈ ಮಹಿಳೆಯರಿಗೆ ಮಾತ್ರ ಸಿಗಲಿದೆ ಗೃಹ ಲಕ್ಷ್ಮಿ ಯೋಜನೆಯ 7 ನೇ ಕಂತಿನ ಹಣ

Gruha Lakshmi 7th Installment: ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2000 ರೂ ಹಣವನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಈಗಾಗಲೇ 6 ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ.

ಆದರೆ ಇನ್ನು 10 ರಷ್ಟು ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಇದ್ದಕ್ಕಾಗಿ ಸರ್ಕಾರ ಹಲವು ಮಾರ್ಗಗಳನ್ನು ಕಂಡುಕೊಂಡಿದೆ. ಆದರೆ ಕೂಡ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಇದೀಗ ಸರ್ಕಾರ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವ ಸಲುವಾಗಿ ಮತ್ತೊಂದು ಕಾರ್ಯವನ್ನು ಕೈಗೊಂಡಿದೆ. ಇದರ ಬಗ್ಗೆ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Gruha Lakshmi New Update
Image Credit: Karnataka Times

ಗೃಹ ಲಕ್ಷ್ಮಿ ಸರ್ವೇ ಆರಂಭ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಸಕ್ಸಸ್ ಸಮಾವೇಶವನ್ನು ನೆಡೆಸಲಾಗಿದೆ. ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಲಾಗುತ್ತಿದೆ. ಹಣ ಜಮಾ ಆಗದೆ ಇರುವ ಮಹಿಳೆಯರ ಖಾತೆಯನ್ನು ಗುರುತಿಸಿ, ಅವರನ್ನು ಕರೆದುಕೊಂಡು ಹೋಗಿ e-KYC, ಅಥವಾ ಮ್ಯಾಪಿಂಗ್ ಅಗತ್ಯವಿದ್ದರೆ ಮಾಡಿಸಿಕೊಡುತ್ತಾರೆ.

ಪೆಂಡಿಂಗ್ ಇರುವ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ
ಮಹಿಳೆಯರ ಖಾತೆಯಲ್ಲಿರುವ ಸಮಸ್ಯೆ ಪರಿಹಾರ ಆದರೆ ಅವರ ಖಾತೆಗೆ ಪೆಂಡಿಂಗ್ ಇರುವ ಹಣವನ್ನ ಜಮಾ ಮಾಡಲಾಗುತ್ತದೆ. ಗೃಹ ಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಹಾಕುವ ಪ್ರಕ್ರಿಯೆ ಆಟೋ ಮ್ಯಾಟಿಕ್ ಆಗಿದ್ದು, ನಿಮ್ಮ ಅಕೌಂಟ್ ಸರ್ಕಾರದ ಡಾಟಾದಲ್ಲಿ ಕನೆಕ್ಟ್ ಆಗಿದ್ದರೆ ನಿಮ್ಮ ಖಾತೆಗೆ ಹಣ ಬರುವುದು ಮಿಸ್ ಆಗುವುದಿಲ್ಲ.

Gruha Lakshmi 7th Installment
Image Credit: Kannada News

ಈ ದಿನ ನಿಮ್ಮ ಖಾತೆಗೆ ಬರಲಿದೆ 7 ನೇ ಕಂತಿನ ಹಣ
ಈಗಾಗಲೇ ರಾಜ್ಯದ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ 12,000 ರೂಪಾಯಿಯನ್ನ ಪಡೆದುಕೊಂಡಿದ್ದಾರೆ. ಇನ್ನು 7 ನೇ ಕಂತಿನ ಹಣ ಮಾರ್ಚ್ 15 ರಂದು ಜಮಾ ಮಾಡಲಾಗುತ್ತದೆ. ಎಲ್ಲ ಮಹಿಳೆಯರ ಖಾತೆಗೆ ಒಂದೇ ದಿನ ಹಣ ಜಮಾ ಮಾಡಲು ಸಾಧ್ಯವಿಲ್ಲ ಹೀಗಾಗಿ ಮಾರ್ಚ್ ಕೊನೆ ದಿನಾಂಕದೊಳಗೆ ಜಮಾ ಮಾಡುದಾಗಿ ಮಾಹಿತಿ ತಿಳಿದು ಬಂದಿದೆ.

Join Nadunudi News WhatsApp Group

Join Nadunudi News WhatsApp Group