Gruha Lakshmi: ಬ್ಯಾಂಕ್ ಸಾಲ ಮಾಡಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್

ಇನ್ನುಮುಂದೆ ಗೃಹ ಲಕ್ಷ್ಮಿ ಹಣವನ್ನು ಸಾಲ ವಸೂಲಾತಿಗೆ ಕಡಿತಗೊಳಿಸಿಕೊಳ್ಳುವಂತಿಲ್ಲ

Gruha Lakshmi Latest Update: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ Gruha Lakshmi ರಾಜ್ಯದಲ್ಲಿ ಈಗಾಗಲೇ ಅರ್ಹ ಮಹಿಳೆಯರಿಗೆ ಲಭ್ಯವಾಗುತ್ತಿದೆ. ಹೌದು ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿಯನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ.

ಯೋಜನೆಯ ಲಾಭ ಸಂಪೂರ್ಣ ಮಹಿಳೆಯರಿಗೆ ಲಭ್ಯವಾಗದಿದ್ದರು ಕೂಡ 80% ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿದೆ. ಇನ್ನು ಭಾಕಿ ಉಳಿದ ಅರ್ಹ ಮಹಿಳೆಯರ ಖಾತೆಗೆ ಹಣ ಮಾಡುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ಈ ಕಾರ್ಯದಲ್ಲಿಯೇ ರಾಜ್ಯ ಸರ್ಕಾರ ಅನೇಕ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ.

Gruha Lakshmi Latest Update
Image Credit: Original Source

ಖಾತೆಗೆ 2000 ಜಮಾ ಆಗಿದ್ದರು ಮಹಿಳೆಯರ ಕೈ ಸೇರುತ್ತಿಲ್ಲ
ಇನ್ನು ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಮಹಿಳೆರ ಖಾತೆಗೆ ಜಮಾ ಆಗಿದ್ದರು ಕೂಡ ಮಹಿಳೆಯರ ಕೈ ಸೇರುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸದ್ಯ ಇದೀಗ ಮಹಿಳೆಯರ ಖಾತೆಗೆ ಜಮಾ ಆದ ಹಣ ಮಹಿಳೆಯರಿಗೆ ಯಾಕೆ ತಲುಪುತ್ತಿಲ್ಲ ಎನ್ನುವ ಪ್ರಶ್ನೆ ಇದೀಗ ಉತ್ತರ ಲಭಿಸಿದೆ. ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಮಾಸಿಕ 2000 ರೂಪಾಯಿ ಹಣವನ್ನು ನೀಡುತ್ತಿದ್ದು, ಖಾತೆಗೆ ಜಮಾ ಆದ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ವಸೂಲಾತಿಗೆ ಬಳಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಗೃಹ ಲಕ್ಷ್ಮಿ ಹಣವನ್ನು ಸಾಲ ವಸೂಲಾತಿಗೆ ಕಡಿತಗೊಳಿಸಿಕೊಳ್ಳುವಂತಿಲ್ಲ
ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ನೀಡುತ್ತಿರುವ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗೆ ಬಳಸಿಕೊಳ್ಳುತ್ತಿರುವ ಕ್ರಮ ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಸಚಿವ ಪಿಯಾಂಕ್ ಖರ್ಗೆ ಅವರು, ಗ್ಯಾರಂಟಿ ಯೋಜನೆಯಡಿ ಇದುವರೆಗೂ ಸಾಲ ವಸೂಲಾತಿಗೆ ಪಾವತಿ ಮಾಡಿಕೊಂಡ ಹಣವನ್ನು ವಾಪಾಸ್ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಈ ಮೂಲಕ ಇನ್ನುಮುಂದೆ ಗೃಹ ಲಕ್ಷ್ಮಿ ಹಣವನ್ನು ಸಾಲ ವಸೂಲಾತಿಗೆ ಕಡಿತಗೊಳಿಸಿಕೊಳ್ಳುವಂತಿಲ್ಲ ಎಂದು ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

Gruha lakshmi Money New Updates
Image Credit: Kannada News Today

ಗೃಹ ಲಕ್ಷ್ಮಿ 4 ನೇ ಕಂತಿನ ಹಣ ಜಮಾ ಮಾಡಲು ದಿನಾಂಕ ಫಿಕ್ಸ್
ರಾಜ್ಯ ಸರ್ಕಾರದಿಂದ ಈವರೆಗೆ ಮೂರು ಕಂತುಗಳ ಹಣ ಬಿಡುಗಡೆಯಾಗಿದ್ದು, ಸದ್ಯ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದೆ. ಡಿಸೇಂಬರ್ ತಿಂಗಳ ಕೊನೆಯ ವಾರದಲ್ಲಿ Gruha Lakshmi ಯೋಜನೆಯ ನಾಲ್ಕನೇ ಕಂತಿನ ಹಣ ಖಾತೆಗೆ ಜಮಾ ಆಗಲಿದೆ. ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರು ಕೂಡ ಮೊಬೈಲ್ ಗೆ ಸಂದೇಶ ಬರದೇ ಇರಬಹುದು. ಹೀಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಿಕೊಳ್ಳುವ ಮೂಲಕ 4 ನೇ ಕಂತಿನ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group