Railway Recruitment: ಭಾರತೀಯ ರೈಲ್ವೆಯಲ್ಲಿ 5000 ಹುದ್ದೆಗಳಿಗೆ ಭರ್ಜರಿ ನೇಮಕಾತಿ, ಆದಷ್ಟು ಬೇಗ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೆ ಅಲ್ಲಿ ಭರ್ಜರಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Railway Recruitment 2024: ಸದ್ಯ ಭಾರತೀಯ ರೈಲ್ವೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಂಡುಕೊಳ್ಳಲು ಒಂದೊಳ್ಳೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ರೈಲ್ವೆ ಇಲಾಖೆಯು ನಿರುದ್ಯೋಗಿಗಳಿಗಾಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವನ್ನು ಕಂಡುಕೊಳ್ಳಬಹುದು. ಈ ಬಾರಿ ರೈಲ್ವೆ ಇಲಾಖೆಯು ಗರಿಷ್ಟ ಸಂಖ್ಯೆಯಲ್ಲಿ ಅರ್ಜಿ ಆಹ್ವಾನ ಮಾಡಿದೆ. ಹೆಚ್ಚಿನ ನಿರುದ್ಯೋಗಿಗಳು ಇಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು.

indian railways jobs
Image Credit: Original Source

ಭಾರತೀಯ ರೈಲ್ವೆಯಲ್ಲಿ 5000 ಹುದ್ದೆಗಳಿಗೆ ಭರ್ಜರಿ ನೇಮಕಾತಿ
ಸದ್ಯ ಭಾರತೀಯ ರೈಲ್ವೆ 5696 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಅರ್ಜಿ ಆಹ್ವಾನದ ಜೊತೆಗೆ ಇಲಾಖೆಯು ಅರ್ಜಿದಾರರ ಗರಿಷ್ಟ ವಯೋಮಿತಿಯನ್ನು ಸಡಿಲಿಕೆ ಮಾಡಿದೆ. ಈ ಹಿಂದೆ ಅರ್ಜಿದಾರರ ವಯಸ್ಸಿನ ವಯೋಮಿತಿ 30 ವರ್ಷವಾಗಿತ್ತು. ಆದರೆ ಪ್ರಸ್ತುತ ರೈಲ್ವೆ ಇಲಾಖೆಯು ಈ ವಯೋಮಿತಿಯನ್ನು 33 ವರ್ಷಕ್ಕೆ ನಿಗದಿಪಡಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ
ಭಾರತೀಯ ರೈಲ್ವೆ 5696 ಹುದ್ದೆಗಳಿಗೆ ನೀವು ಫೆಬ್ರವರಿ 19 2024 ರೊಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ರೈಲ್ವೇ ನೇಮಕಾತಿ ಮಂಡಳಿ (RRB) ದೇಶಾದ್ಯಂತ ವಿವಿಧ ವಲಯಗಳಲ್ಲಿ ಒಟ್ಟು 5696 ಹುದ್ದೆಗಳನ್ನು ನೇಮಿಸಿಕೊಳ್ಳಲಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.

indian railways recruitment
Image Credit: Original Source

ಇನ್ನು ರೈಲ್ವೆ ಎಲ್‌ಪಿ ನೇಮಕಾತಿಗೆ ಅರ್ಜಿ ಸಲ್ಲಿಸುವ ಕಾಯ್ದಿರಿಸದ ಅಭ್ಯರ್ಥಿಗಳು ರೂ 500 ಪಾವತಿಸಬೇಕು. ಎಸ್‌ ಸಿ, ಎಸ್‌ ಟಿ, ಮಾಜಿ ಸೈನಿಕರು, ಮಹಿಳೆಯರು, ಟ್ರಾನ್ಸ್‌ ಜೆಂಡರ್, ಅಲ್ಪಸಂಖ್ಯಾತ ಮತ್ತು ಇಬಿಸಿ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ರೂ. 250 ನಿಗದಿಪಡಿಸಲಾಗಿದೆ. ಇನ್ನು 33 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಬಹುದು.

Join Nadunudi News WhatsApp Group

Join Nadunudi News WhatsApp Group