Infinix Hot 30: 12 ಸಾವಿರಕ್ಕೆ ಖರೀದಿಸಿ 6000 mAh ಬ್ಯಾಟರಿ ಹೊಂದಿರುವ ಮೊಬೈಲ್, ಮೊಬೈಲ್ ಕೊಳ್ಳಲು ಅಂಗಡಿಯತ್ತ ಜನರು.

ಈಗ 12 ಸಾವಿರ ರೂಪಾಯಿಗೆ Infinix Hot 30 5G ಮೊಬೈಲ್ ಖರೀದಿ ಮಾಡಬಹುದು.

Infinix Hot 30 5G Smartphone: ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಹೂಸ ಹೊಸ ಸ್ಮಾರ್ಟ್ ಫೊನುಅಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಗ್ರಾಹಕರಿಗೆ ಬೇಕಾಗುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು.

ದೇಶಿಯ ಮಾರುಕಟ್ಟೆಯಲ್ಲಿ ಇನ್ ಫೀನಿಕ್ಸ್ ಕಂಪನಿ ತನ್ನ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತಲೇ ಇದೆ. ಇದೀಗ ಇನ್ ಫೀನಿಕ್ಸ್ ಕಂಪನಿ ತನ್ನ ಗ್ರಾಹಕರಿಗೆ ಉತ್ತಮವಾದ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.

Infinix Hot 30 5G smartphone launched with 6000mAh battery capacity.
Image Credit: Gizbot

ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ ನ ಬೆಲೆ
ಇನ್ ಫೀನಿಕ್ಸ್ ಕಂಪನಿ ಹೊಸ ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ ಅನ್ನು ರಿಲೀಸ್ ಮಾಡಿದೆ. ಇದು ಕೂಡ ಒಂದು ಬಜೆಟ್ ಬೆಲೆಯ ಫೋನ್ ಆಗಿದ್ದು ಬಲಿಷ್ಠ ಬ್ಯಾಟರಿ ಆಕರ್ಷಕ ಕ್ಯಾಮೆರಾ, ಪ್ರೊಸೆಸರ್ ನೀಡಲಾಗಿದೆ. ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM+ 128 GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 12,499 ರೂಪಾಯಿ ಇದೆ ಆಗಿದೆ ಮತ್ತು 8 GB RAM+ 128 GB ವೆರಿಯಂಟ್ ಗೆ 13499 ರೂಪಾಯಿ ನಿಗದಿ ಮಾಡಲಾಗಿದೆ.

ಈ ಫೋನ್ ಜೊತೆಗೆ ಇನ್ ಫೀನಿಕ್ಸ್ ವಿಶೇಷ ಆಫರ್ ನೀಡುತ್ತಿದ್ದು 1000 ರೂಪಾಯಿಗಳ ಡಿಸ್ಕೌಂಟ್ ಮತ್ತು 6 ತಿಂಗಳ ನೋ ಕಾಸ್ಟ್ ಇ ಎಂ ಐ ಆಯ್ಕೆ ಘೋಷಿಸದೆ. ಇನ್ ಫೀನಿಕ್ಸ್ ಹಾಟ್ 30 5G ಫೋನ್ ಪಸಿದ್ದ ಇ ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ಮೂಲಕ ಜುಲೈ 18 ಮಧ್ಯಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ.

Infinix Hot 30 5G smartphone launched with 6000mAh battery capacity.
Image Credit: indiatoday

ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ ನ ವಿಶೇಷತೆ
ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ 120 Hz ರಿಫ್ರೆಶ್ ದರದೊಂದಿಗೆ 6 .7-ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಇತ್ತೀಚಿನ ಆಪರೇಟಿಂಗ್ ಸಾಫ್ಟ್ವೇರ್ XOS 13 ನಾಲ್ ರನ್ ಆಗುತ್ತದೆ. ಈ ಸ್ಮಾರ್ಟ್ ಫೋನಲ್ಲಿ ಡೈಮೆನ್ಸಿಟಿ 6020 ಪ್ರೊಸೆಸರ್ ಅಳವಡಿಸಲಾಗಿದೆ. ಈ ಫೋನ್ ಡ್ಯುಯೆಲ್ ಸ್ಪೀಕರ್ ಗಳು ಮತ್ತು STS ಸೌಂಡ್ ತಂತಜ್ಞಾನವನ್ನು ಹೊಂದಿದೆ. ಇದು ಗೇಮಿಂಗ್ ಆಡಿಯೋ, ವಿಡಿಯೋಗಳ ಪ್ಲೆ ಆದಾಗ ಅದ್ಭುತ ಅನುಭವವನ್ನು ಒದಗಿಸುತ್ತದೆ.

Join Nadunudi News WhatsApp Group

Infinix Hot 30 5G smartphone launched with 6000mAh battery capacity.
Image Credit: Techsawa

ಇನ್ ಫೀನಿಕ್ಸ್ ಹಾಟ್ 30 5G ಸ್ಮಾರ್ಟ್ ಫೋನ್ 18W ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡದಾದ 6000mAh ಬ್ಯಾಟರಿಯನ್ನು ಹೊಂದಿದೆ. ಫೋನ್ ಪವರ್ ಮ್ಯಾರಥಾನ್ ತಂತ್ರಜ್ಞಾನವನ್ನು ಹೊಂದಿದೆ. 53 ಗಂಟೆಗಳ ಕರೆ, 21 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್, 13 ಗಂಟೆಗಳ ಗೇಮಿಂಗ್ ಮತ್ತು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 35 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿದೆ.

Join Nadunudi News WhatsApp Group