Sewing Machine Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಉಚಿತ ಹೊಲಿಗೆ ಯಂತ್ರಕ್ಕೆ ಈಗಲೇ ಅರ್ಜಿ ಸಲ್ಲಿಸಿ.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ...? ದಾಖಲೆ...?

Free Sewing Machine For Women’s: ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ವರ್ಷ Vishwakarma ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ದೇಶದ ಬಡ ಜನತೆಗೆ ಸಹಾಯವಾಗಲು ಸಾಕಷ್ಟು ಸೌಲಭ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಸದ್ಯ ಮಹಿಳೆಯಯರು ಸ್ವಉದ್ಯೋಗವನ್ನು ಕಂಡುಕೊಳ್ಳಲು ಈ ವಿಶೇಷ ಯೋಜನೆಯಯು ಸಹಕಾರಿಯಾಗಲಿದೆ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉದ್ದೇಶದಿಂದ ವಿಶ್ವಕರ್ಮ ಯೋಜನೆಯಡಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಡಿ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು. ಸದ್ಯ ನಾವೀಗ ಈ ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ…? ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು…? ಅರ್ಹತೆಗಳೇನು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Free Sewing Machine For Women's
Image Credit: Hopeforhumanitymd

ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರವು ರೂ. 15,000 ನೀಡುತ್ತದೆ ಮತ್ತು ಈ ಹಣವನ್ನು ನೇರವಾಗಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದಲ್ಲದೆ ಸ್ವಂತ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಉದ್ಯೋಗ ಮಾಡಲು ಬಯಸುವವರಿಗೆ 20000 ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಹೊಲಿಗೆ ಕೆಲಸ ಮಾಡಿ ಮಹಿಳೆಯರು ತನ್ನ ಆದಾಯವನ್ನು ತಾವೇ ಗಳಿಸಿಕೊಳ್ಳಬಹುದು. ಹೊಸ ಉದ್ಯಮವನ್ನು ಆರಂಭಿಸಲು ಬಯಸುವವರನ್ನು ಉತ್ತೇಜಿಸಲು ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಅಧಿಕೃತ ವೆಬ್ ಸೈಟ್ https://pmvishwakarma.gov.in ಗೆ ಭೇಟಿ ನೀಡುವ ಮೂಲಕ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Free Sewing Machine Scheme 2024
Image Credit: Digitalindiagov

ಇಂತವರು ಉಚಿತ ಹೊಲಿಗೆ ಯಂತ್ರಕ್ಕೆ ಈಗಲೇ ಅರ್ಜಿ ಸಲ್ಲಿಸಿ
•ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.

Join Nadunudi News WhatsApp Group

•ಅರ್ಜಿದಾರರು ಭಾರತ ದೇಶದ ಪ್ರಜೆಯಾಗಿದ್ದು ಆರ್ಥಿಕ ದುರ್ಬಲರಾಗಿರಬೇಕು.

•ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 1,20,000 ರೂಪಾಯಿ ಮೀರಿರಬಾರದು.

•ಇನ್ನು ವಿಧವೆ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
*ಪಾಸ್ ಪೋರ್ಟ್ ಸೈಸ್ ಫೋಟೋ.

*ಜಾತಿ ಪ್ರಮಾಣ ಪತ್ರ.

*ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ.

*ರೇಷನ್ ಕಾರ್ಡ್ ಅಥವಾ ವೋಟರ್ ಐಡಿ.

Free Sewing Machine Scheme Apply
Image Credit: Krishijagran

Join Nadunudi News WhatsApp Group