Ola S1 X EV: ಚಾರ್ಜ್ ಖಾಲಿಯಾಗುತ್ತೆ ಅನ್ನುವ ಭಯ ಬೇಡ, 3 ಬ್ಯಾಟರಿ ಇರುವ ಹೊಸ Ola ಲಾಂಚ್, ಕಡಿಮೆ ಬೆಲೆ

ಮೂರು ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ Ola S1 X EV, ಭರ್ಜರಿ ಮೈಲೇಜ್ ನೀಡಲಿದೆ ಈ ಓಲಾ EV.

Ola S1X Electric Scooter Price And Feature: ಭಾರತೀಯ ಆಟೋ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಜೋರಾಗಿದೆ. ವಿವಿಧ ಕಂಪನಿಗಳು ಹೊಸ ಹೊಸ ವಿನ್ಯಾಸದಲ್ಲಿ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿವೆ. ಇನ್ನು ಟಿವಿಎಸ್, ಹೀರೋ, ಎಥರ್ ಕಂಪನಿಗಳು ಹೊಸ ಮಾದರಿಯ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಿರುವ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Ola ಕಂಪನಿಯು ಇದೀಗ ತನ್ನ ಹೊಚ್ಚ ಹೊಸ EV ಯನ್ನು ಪರಿಚಯಿಸಲು ಮುಂದಾಗಿದೆ.

ಇದೀಗ ಮಾರುಕಟ್ಟೆಯಲ್ಲಿ ಓಲಾ ಕಂಪನಿಯು ನೂತನವಾಗಿ ವಿಭಿನ್ನ ವೈಶಿಷ್ಟ್ಯಗಳಿರುವ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಮಾದರಿಯ ಹೆಸರು S1X Electric Scooter ಆಗಿದೆ. ಈ ಸ್ಕೂಟರ್ ನ ವಿಶೇಷತೆ ಎಂದರೆ ನೀವು ಈ ಸ್ಕೂಟರ್ ಅನ್ನು ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. 

Ola S1X Electric Scooter Price In India
Image Credit: Motorbeam

ಮೂರು ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿದೆ Ola S1 X EV
ಇದೀಗ ನಾವು ಹಲವಾರು ವೈಶಿತ್ಯಗಳಿರುವ Ola S1 X Electric Scooter ನ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ಸ್ಕೂಟರ್ ಅನ್ನು ನಿಮ್ಮ ಇಚ್ಛೆಗೆ ಅನುಗುಣವಾಗಿ ಖರೀದಿಸಬಹುದು. ಅಂದ್ರೆ ಕಂಪನಿಯು ಈ ಸ್ಕೂಟರ್ ಅನ್ನು ಮೂರು ಬ್ಯಾಟರಿ ಪ್ಯಾಕ್ ಗಳ ಆಯ್ಕೆಯಲ್ಲಿ ನೀಡುತ್ತಿದೆ. ಈ ಸ್ಕೂಟರ್ ಅನ್ನು 2 kW, 3 kW ಮತ್ತು 4 kW ಮಾದರಿಗಳಲ್ಲಿ ಖರೀದಿಸಬಹುದು. ವಿನ್ಯಾಸದ ಆಧಾರದ ಮೇಲೆ ರೂ. 69,999, ರೂ. 84,999 ಮತ್ತು ರೂ. 99,999 ಬೆಲೆ ನಿಗದಿಪಡಿಸಲಾಗಿದೆ.

ಭರ್ಜರಿ ಮೈಲೇಜ್ ನೀಡಲಿದೆ ಈ ಓಲಾ EV
ಇನ್ನು S1 X ನಲ್ಲಿನ 2 kWh ಬ್ಯಾಟರಿ ಪ್ಯಾಕ್ ನಿಮಗೆ ಒಂದೇ ಚಾರ್ಜ್‌ ನಲ್ಲಿ 91 ಕಿಮೀ ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 7.4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸ್ಕೂಟರ್ ಕೇವಲ 4.1 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯಬಹುದು. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್-ರೈಡಿಂಗ್ ಮೋಡ್‌ ಗಳನ್ನು ನೀಡುತ್ತದೆ ಮತ್ತು 85 kmph ವೇಗವನ್ನು ತಲುಪಬಹುದು. ಟಚ್‌ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ, S1 X 3.5-ಇಂಚಿನ LCD ಪರದೆಯನ್ನು ಹೊಂದಿದೆ.

Ola S1X Electric Scooter Price And Feature
Image Credit: Jagran

ಇನ್ನು 3 kWh ಆವೃತ್ತಿಯು 2 kWh ರೂಪಾಂತರದಂತೆಯೇ ಅದೇ ಚಾರ್ಜಿಂಗ್ ಸಮಯ, ರೈಡಿಂಗ್ ಮೋಡ್‌ ಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 3.3 ಸೆಕೆಂಡುಗಳಲ್ಲಿ 0 ರಿಂದ 40 ಕಿಮೀ ವೇಗವನ್ನು ಹೊಂದಬಹುದು. 90 ಕಿಮೀ ಗರಿಷ್ಠ ವೇಗವನ್ನು ಹೊಂದಿದೆ ಮತ್ತು 151 ಕಿಮೀ ಮೈಲೇಜ್ ಅನ್ನು ನೀಡುತ್ತದೆ. 4 kWh ರೂಪಾಂತರವು ಅದೇ ಕಾರ್ಯಕ್ಷಮತೆಯ ವಿಶೇಷಣಗಳನ್ನು ಉಳಿಸಿಕೊಂಡಿದೆ. ಆದರೆ 190 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಮೈಲೇಜ್ ನ ವಿಚಾರವಾಗಿ ಬೆಸ್ಟ್ ಆಗಿದೆ.

Join Nadunudi News WhatsApp Group

Ola S1X Electric Scooter Mileage
Image Credit: Jagran

Join Nadunudi News WhatsApp Group