Jackfruit: ಇಂತವರು ಯಾವುದೇ ಕಾರಣಕ್ಕೂ ಹಲಸಿನ ಹಣ್ಣು ತಿನ್ನಬಾರದು, ನಿಮ್ಮ ಪ್ರಾಣಕ್ಕೆ ಕುತ್ತು.

ಇಂತವರು ಯಾವುದೇ ಕಾರಣಕ್ಕೂ ಹಲಸಿನ ಹಣ್ಣು ತಿನ್ನಬಾರದು

Jackfruit  Eating Disadvantages: ಸಾಮಾನ್ಯವಾಗಿ ಹಣ್ಣುಗಳ ಸೇವೆನೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಒಳ್ಳೆಯ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ ಎನ್ನಬಹುದು. ಇನ್ನು ಈ ಮಳೆಗಾಲದ ಸಮಯದಲ್ಲಿ ಹಲಸಿನ ಹಣ್ಣು (Jackfruit ) ಹೆಚ್ಚಾಗಿ ಸಿಗುತ್ತದೆ. ಈ ಹಲಸಿನ ಹಣ್ಣು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆದಾಗ್ಯೂ, ಈ ಆರೋಗ್ಯ ಸಮಸ್ಯೆ ಇರುವವರಿಗೆ ಹಲಸಿನ ಹಣ್ಣು ಅಷ್ಟು ಒಳ್ಳೆಯದಲ್ಲ. ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಕೆಲ ಹಣ್ಣುಗಳ ಸೇವನೆಯಿಂದ ದೂರ ಇರಬೇಕಾಗುತ್ತದೆ. ನಾವೀಗ ಈ ಲೇಖನದಲ್ಲಿ ಯಾವ ಆರೋಗ್ಯ ಸಮಸ್ಯೆ ಇದ್ದವರು ಹಲಸಿನ ಹಣ್ಣನ್ನು ತಿನ್ನಬಾರದು ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Jackfruit Eating Disadvantages
Image Credit: Everydayhealth

ಹಲಸಿನ ಹಣ್ಣು ತಿಂದರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು…?
ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟ್ಯಾಸಿಯಮ್ ಮತ್ತು ಫೈಬರ್ ಹೇರಳವಾಗಿ ಲಭ್ಯವಿವೆ. ಆದ್ದರಿಂದ ಇದು ಆರೋಗ್ಯಕರ ಹಣ್ಣು ಎಂಬುದರಲ್ಲಿ ಸಂದೇಹವಿಲ್ಲ. ಎಷ್ಟೋ ಜನರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಹಲಸಿನ ಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಇಲ್ಲವಾದರೆ ಅಪ್ಪಿತಪ್ಪಿ ಈ ಹಣ್ಣನ್ನು ತಿಂದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

ಇಂತವರು ಯಾವುದೇ ಕಾರಣಕ್ಕೂ ಹಲಸಿನ ಹಣ್ಣು ತಿನ್ನಬಾರದು
ಹಲಸಿನ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ ಅಂಶವಿದೆ. ಯಾರು ಬೇಕಾದರೂ ಹಲಸಿನ ಹಣ್ಣನ್ನು ತಿನ್ನಬಹುದು. ಹಲಸಿನ ಹಣ್ಣಿನ ಪ್ರತಿಯೊಂದು ಭಾಗವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಲಸಿನ ಹಣ್ಣಿನ ಕಾಂಡ, ಹಲಸಿನ ಬೀಜ ಮತ್ತು ಹಣ್ಣು ಎಲ್ಲವನ್ನೂ ತಿನ್ನಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಹಲಸಿನ ಹಣ್ಣು ತಿನ್ನುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಹಲಸಿನ ಹಣ್ಣನ್ನು ತಿಂದರೆ ರಿಕೆಟ್ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ರಕ್ತಹೀನತೆಯ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ. ಆದರೆ ಕೆಲವರು ಮಾತ್ರ ಹಲಸಿನ ಹಣ್ಣನ್ನು ತಿನ್ನುವುದರಿಂದ ದೂರ ಇರಬೇಕು. ಏಕೆಂದರೆ ಅಂತಹವರು ಹಲಸು ತಿಂದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಅಜೀರ್ಣದಿಂದ ಬಳಲುತ್ತಿರುವವರು ಹಲಸಿನ ಹಣ್ಣಿನಿಂದ ದೂರವಿರಬೇಕು. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಲಸಿನ ಹಣ್ಣು ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಉಂಟುಮಾಡುತ್ತದೆ.

Join Nadunudi News WhatsApp Group

Jackfruit Eating
Image Credit: Timesofindia

Join Nadunudi News WhatsApp Group