Congress Guarantee: ರಾಜ್ಯದ ಜನತೆಗೆ ಇನ್ನೊಂದು ಗುಡ್ ನ್ಯೂಸ್, ಸರ್ಕಾರದ 6 ನೇ ಗ್ಯಾರೆಂಟಿ ಘೋಷಣೆ ಮಾಡಿದ ಜಮೀರ್ ಅಹ್ಮದ್ ಖಾನ್

ಸಚಿವರಾದ ಜಮೀರ್ ಅಹ್ಮದ್ ಅವರು ಸರ್ಕಾರದ ಇನ್ನೊಂದು ಗ್ಯಾರೆಂಟಿ ಘೋಷಣೆ ಮಾಡಿದ್ದಾರೆ

Karnataka Government Free Housing Scheme 2024: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ (Congress Government) ಐದು ಪಂಚ ಗ್ಯಾರೆಂಟಿ ಯೋಜನೆಯನ್ನು ಜಾರಿಗೆ ತಂದಿದ್ದು ಹಾಗೆಯೆ ಈಗ ಇನ್ನೊಂದು ಆರನೇ ಯೋಜನೆ ಚಾಲನೆಗೆ ಸಿದ್ಧತೆ ಆಗುತ್ತಿದೆ. ವಸತಿ ರಹಿತ ಬಡ ಜನರಿಗಾಗಿ ಹೊಸ ವಸತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಇದು ರಾಜ್ಯ ಸರ್ಕಾರದ 6 ನೇ‌ ಗ್ಯಾರೆಂಟಿಯಾಗಿ ಪರಿಗಣಿಸಬಹುದಾಗಿದೆ. ಬಡ ಜನರಿಗಾಗಿ ವಸರಿ ಯೋಜನೆ ಜಾರಿಗೆ ತರುವ ಕುರಿತು ವಸತಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.

Karnataka Government Free Housing Scheme 2024
Image Credit: Zee News

ರಾಜ್ಯದಲ್ಲಿ ಹೊಸ ವಸತಿ ಯೋಜನೆ ಜಾರಿ

ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ‌ಧ್ವಜಾರೋಹಣ ನೆರವೇರಿಸಿ, ಗೌರವರಕ್ಷೆ ಸ್ವೀಕರಿಸಿ ಮಾತನಾಡಿದರು. ಫೆಬ್ರವರಿ ಅಂತ್ಯದೊಳಗೆ 36 ಸಾವಿರ ಮನೆ ಹಸ್ತಾಂತರದ ಜತೆಗೆ ಇದೇ ವರ್ಷದಲ್ಲಿ1.30 ಲಕ್ಷ ಮನೆಗಳ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆ ಹಲವು ಬಡ ಜನರ ನೆರವಿಗಾಗಿ ಜಾರಿಗೆ ತರಲಾಗುವುದು ಎಂದರು.

Free Housing Scheme 2024
Image Credit: Housing

ವಸತಿ ಯೋಜನೆಗೆ ಕೋಟಿ ಕೋಟಿ ಹಣ ಬಿಡುಗಡೆ

ವಸತಿ ಯೋಜನೆಗಳಾಗಿರುವ ಸ್ಲಂ ಬೋರ್ಡ್, ರಾಜೀವ್ ಗಾಂಧಿ ವಸತಿ ಯೋಜನೆಯಡಿ‌ ಮಂಜೂರಾಗಿರುವ ಅನೇಕ ಮನೆಗಳು ಅಪೂರ್ಣಗೊಂಡಿವೆ. ಸರ್ಕಾರದಿಂದ ಪ್ರತಿ ಮನೆಗೆ 4.50 ಲಕ್ಷ ರೂ. ಸಹಾಯಧನ ದೊರೆಯುತ್ತಿದ್ದು, ಅಷ್ಟರಲ್ಲಿ ಮನೆಗಳು ಪೂರ್ಣಗೊಳ್ಳುತ್ತಿಲ್ಲ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ 500 ಕೋಟಿ ರೂ. ಬಿಡುಗಡೆಗೆ ಕೋರಿದ್ದು ಅದರಲ್ಲಿ 300 ಕೋಟಿ ರೂ. ಬಿಡುಗಡೆ ಸಮ್ಮತಿಸಿದ್ದಾರೆ. ಅರ್ಹರಿಗೆ ಈ ಬಾರಿ 36,000 ಮನೆಗಳು ನೀಡುತ್ತಿದ್ದೇವೆ. ಈ ಪೈಕಿ ವಿಜಯನಗರ ಜಿಲ್ಲೆಯಲ್ಲಿ 1160 ಫಲಾನುಭವಿಗಳಿಗೆ ಲಾಭವಾಗಲಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎನ್ನಲಾಗಿದೆ.

Join Nadunudi News WhatsApp Group

Join Nadunudi News WhatsApp Group