National Pension Scheme: ಪಿಂಚಣಿ ಹಣ ಪಡೆಯುವವರಿಗೆ ಗುಡ್ ನ್ಯೂಸ್, ನಿಯಮದಲ್ಲಿ ಆಗಿದೆ ದೊಡ್ಡ ಬದಲಾವಣೆ.

ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಲ್ಲಿ ಪಿಂಚಣಿ ಯೋಜನೆ ಕೂಡ ಒಂದು. ದೇಶದಲ್ಲಿ ಕೋಟ್ಯಾಂತರ ಜನರು ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ವೃದ್ದಾಪ್ಯ ಪಿಂಚಣಿಯನ್ನ ದೇಶದಲ್ಲಿ ಕೋಟ್ಯಂತರ ಜನರು ಪಡೆದುಕೊಳ್ಳುತ್ತಿದ್ದು ಕೆಲವು ಸಮಯದ ಹಿಂದೆ ಜಾರಿಗೆ ತಂಡ ಕೆಲವು ನಿಯಮಗಳ ಕಾರಣ ಹಲವು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಹಿಂದೆ ಪಿಂಚಣಿ ಹಣವನ್ನ ಪಡೆಯುವವರು ಜೀವನ ಪ್ರಮಾಣ ಪತ್ರವನ್ನ ಸಲ್ಲಿಸಿ ಕೆಲವು ಫಾರ್ಮ್ ಭರ್ತಿ ಮಾಡಬೇಕಾಗಿದ್ದು, ಈಗ ನಿಯಮಗಳಲ್ಲಿ ಬದಲಾವಣೆಯನ್ನ ಮಾಡಲಾಗಿದೆ. ಹಲವು ಹಲವು ನಿಯಮಗಳನ್ನ ಸರ್ಕಾರ ಜಾರಿಗೆ ತಂದಿದ್ದು ಈ ನಿಯಮಗಳ ಕರಣ ಅರ್ಹರಿಗೆ ಪಿಂಚಣಿ ಹಣ ಕೆಲವು ಸಮಯಗಳಿಂದ ಸಿಗುತ್ತಿಲ್ಲ ಅನ್ನುವ ಬೆಳಕಿಗೆ ಬಂದಿದೆ.

ಸದ್ಯ ಈಗ ದೇಶದ ಪಿಂಚಣಿ ಹಣವನ್ನ ಪಡೆಯುವ ಎಲ್ಲಾ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು National Pension Scheme ಸಿಸ್ಟಮ್ ನಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದ್ದು ಜನರು ಇನ್ನುಮುಂದೆ ಬಹಳ ಸುಲಭವಾಗಿ ಪಿಂಚಣಿ ಹಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನ ಸಲ್ಲಿಸಬಹುದು ಮತ್ತು ಕೆಲವು ಬದಲಾವಣೆಯನ್ನ ಮಾಡಬಹುದಾಗಿದೆ. ದೇಶದ ಬಹುತೇಕ ಎಲ್ಲಾ ಯೋಜನೆಯಲ್ಲಿ ಬಯೋಮೆಟ್ರಿಕ್ ಜಾರಿಯಲ್ಲಿ ಇದ್ದು ಈಗ National Pension Scheme ನಲ್ಲಿ ಕೂಡ ಬಯೋಮೆಟ್ರಿಕ್ ವ್ಯವಸ್ಥೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

National Pension Scheme

ಈಗಾಗಲೇ ಪಿಂಚಣಿ ಹಣವನ್ನ ಪಡೆಯುತ್ತಿರುವ ಜನರು ಮತ್ತು ಮುಂದಿನ ದಿನಗಳಲ್ಲಿ ಪಿಂಚಣಿ ಹಣವನ್ನ ಪಡೆಯುವ ಜನರು ಯಾವುದೇ ಪ್ರತ್ಯೇಕ ಫಾರ್ಮ್ ಭರ್ತಿ ಮಾಡುವ ಅಗತ್ಯ ಇಲ್ಲ. ಭಾರತೀಯ ವಿಮ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೆಲವು ನಿಯಮಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನ ಮಾಡಿದೆ. ಇನ್ನುಮುಂದೆ ಬಯೋಮೆಟ್ರಿಕ್ ಜನರು ಅಗತ್ಯ ದಾಖಲೆಗಳನ್ನ ಪರಿಶೀಲನೆ ಮಾಡಬಹುದಾಗಿದೆ. ಸಕ್ರಿಯಗೊಳಿಸಿರುವ ಡಿಜಿಟಲ್ ಸೇವೆಯ ಮೇಲೆ ಸರ್ಕಾರ ಉಪಕ್ರಮವಾದ ಜೀವನ ಪ್ರಮಾಣ ಪತ್ರದ ಪರಿಶೀಲನೆಗಾಗಿ ಆಧಾರ್ ಆಧಾರಿತ ಧ್ರಡೀಕರಣವನ್ನ ಅಳವಡಿಸಿಕೊಳ್ಳುವಂತೆ ವಿಮ ನಿಯಂತ್ರಕರು ವಿಮಾದಾರರಿಗೆ ತಿಳಿಸಿದ್ದಾರೆ.

ಇನ್ನುಮುಂದೆ ಜೀವನ ಪ್ರಮಾಣಪತ್ರದ ಪರಿಶೀಲನೆಗಾಗಿ ಯಾವುದೇ ಫಾರ್ಮ್ ಭರ್ತಿ ಮಾಡುವ ಅಗತ್ಯ ಇಲ್ಲ ಮತ್ತು ಜನರು ಬಯೋಮೆಟ್ರಿಕ್ ಮೂಲಕ ತಮ್ಮ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಬದಲಾವಣೆ ಹಲವು ಜನರಿಗೆ ಸಾಕಷ್ಟು ಉಪಯುಕ್ತವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಅದೆಷ್ಟೋ ಜೀವನ ಪ್ರಮಾಣ ಪತ್ರವನ್ನ ಮಾಡಲು ಪರದಾಡುತ್ತಿದ್ದು ಅವರಿಗೆ ಈ ಸಡಿಲಿಕೆ ಬಹಳ ಉಪಯುಕ್ತವಾಗಲಿದೆ. ಅದೇ ರೀತಿಯಲ್ಲಿ ಪಿಂಚಣಿ ವಿಷಯದ ಕುರಿತಂತೆ ಹಲವು ಬದಲಾವಣೆಗಳನನ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಪ್ರಾಧಿಕಾರ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group