ಬೇವಿನ ಎಲೆಗಳನ್ನು ಈ ರೀತಿ ಬಳಸಿದರೆ ಹೃದಯಾಘಾತವೇ ಆಗೋಲ್ಲ, ನೋಡಿ ಈ ಮಾಹಿತಿ

ಇಂಡೋ ಮಲೇಶಿಯನ್ ಪ್ರದೇಶದ ಮೂಲವಾಗಿರುವ ಬೇವು ಆಫ್ರಿಕಾ ಮತ್ತು ಏಷ್ಯಾದಂತಹ ಉಷ್ಣ ವಲಯ ಮತ್ತು ಉಪ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತದಲ್ಲಿ ಬೇವನ್ನು ಬೆಳೆಸುವುದು ತುಂಬಾ ಸುಲಭವಾದ್ದರಿಂದ 120 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.ಬೇವು ಅದರ ವೈದ್ಯಕೀಯ ಗುಣಗಳಿಂದ ಶ್ರೇಷ್ಠವಾಗಿದ್ದು 12-15 ಮೀಟರ್ ಎತ್ತರದಲ್ಲಿ ಇದು ಬೆಳೆಯುತ್ತದೆ. ವೈದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೇವನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ವಾತಾವರಣ ಕೂಡ ಸ್ವಚ್ಛವಾಗಿರುತ್ತದೆ ಎಂಬ ಪ್ರತೀತಿ ಇದೆ.

ಬೇವಿನ ಮರದ ಹಣ್ಣುಗಳನ್ನು ರೋಗಕ್ಕೆ ಔಷಧವಾಗಿ ಬಳಸಲಾಗುತ್ತದೆ. ಚರ್ಮ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹಕ್ಕೆ ರಾಮಬಾಣವಾಗಿರುವ ಬೇವು ಹಲವಾರು ಸೌಂದರ್ಯ ಉತ್ಪನ್ನಗಳಲ್ಲಿ ಕೂಡ ಬಳಸಲಾಗುತ್ತದೆ.ಬೇವಿನ ಎಲೆಗಳಲ್ಲಿರೋ ಔಷಧೀಯ ಗುಣಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಬೇವಿನ ಎಲೆಗಳನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಹೃದಯವನ್ನು ಆರೋಗ್ಯವಾಗಿರಿಸುವುದರ ಜೊತೆಗೆ ಇನ್ನು ಹಲವಾರು ಕಾಯಿಲೆಗಳನ್ನು ನಮ್ಮಿಂದ ದೂರವಿಡುತ್ತದೆ. ಇದರ ಹೊರತಾಗಿಯೂ ಬೇವಿನ ಎಲೆಯಿಂದ ಹಲವು ಪ್ರಯೋಜನಗಳಿವೆ.Organic Fresh Neem Leaves – GreenDNA® India

ಬೇವಿನ ಎಲೆಗಳನ್ನು ಕುಷ್ಠರೋಗಕ್ಕೂ ಮದ್ದಾಗಿ ಬಳಸಲಾಗುತ್ತದೆ. ಇದರ ಬಳಕೆಯಿಂದ ದೃಷ್ಟಿ ಚುರುಕಾಗುತ್ತದೆ. ಕರುಳು ಬೇನೆ, ಹೊಟ್ಟೆ ನೋವು, ಹಸಿವಾಗದಿರುವುದು, ಚರ್ಮದ ಹುಣ್ಣುಗಳಂತಹ ಕಾಯಿಲೆಗಳಿಗೂ ಬೇವಿನ ಎಲೆಯಿಂದ ಪರಿಹಾರ ಸಿಗುತ್ತದೆ.ಬೇವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಕುಡಿಯುವುದು ಉತ್ತಮ. ಇಲ್ಲದೇ ಹೋದರೆ ನೀವು ಬೇವಿನ ಎಲೆಗಳಿಂದ ಮಾಡಿದ ಚಹಾವನ್ನು ಸಹ ಸೇವನೆ ಮಾಡಬಹುದು.

ಕುಡಿಯುವಾಗ ಕಹಿ ಎನಿಸಿ ಕಷ್ಟವಾದರೂ ಅದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕಜ್ಜಿ, ತುರಿಕೆಯಂತಹ ಚರ್ಮ ಸಂಬಂಧಿ ಸಮಸ್ಯೆ ಇರುವವರು ಬೇವಿನ ಸೊಪ್ಪನ್ನು ಬಳಸಬೇಕು. ಬಿಸಿ ಬಿಸಿ ನೀರಿಗೆ ಬೇವಿನ ಸೊಪ್ಪನ್ನು ಹಾಕಿ ಸ್ನಾನ ಮಾಡಬಹುದು. ನಿಯಮಿತವಾಗಿ ಹೀಗೆ ಮಾಡುತ್ತ ಬಂದರೆ ಚರ್ಮದ ಅಲರ್ಜಿ ಸಮಸ್ಯೆ ಕೂಡ ಪರಿಹಾರವಾಗುತ್ತದೆ.10 Wonderful Benefits and Uses of Neem: A Herb That Heals - NDTV Food

Join Nadunudi News WhatsApp Group

Join Nadunudi News WhatsApp Group