Gruha Lakshmi Rule: ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ರೂಲ್ಸ್ ಜಾರಿ, ಮಾಸಿಕ 2000 ಪಡೆಯಲು NPCI ಕಡ್ಡಾಯ.

ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯ

NPCI Mandatory For Gruha Lakshmi: ಸದ್ಯ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಿದ್ದರು ಕೂಡ ಸಂಪೂರ್ಣ ಮಹಿಳೆಯರಿಗೆ ಯೋಜನೆಯ ಲಾಭ ದೊರೆಯದೆ ಇರುವುದ್ರಿಂದ ಸರ್ಕಾರಕ್ಕೆ ಗೃಹ ಲಕ್ಷ್ಮಿ ಯೋಜನೆಯು ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ.

ಗೃಹ ಲಕ್ಷ್ಮಿ ಯೋಜನೆಯಲ್ಲಿ ದೋಷಗಳನ್ನು ಸರಿಪಡಿಸಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಯೋಜನೆ ಆಸ್ತಾನಗೊಂಡು ಆರು ತಿಂಗಳು ಆಗಿದ್ದರು ಕೂಡ ಯೋಜನೆಯ ಸಂಪೂರ್ಣ ಲಾಭ ಅರ್ಹರಿಗೆ ತಲುಪಿಲ್ಲ.

NPCI Mandatory For Gruha Lakshmi
Image Credit: News Next Live

ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ರೂಲ್ಸ್ ಜಾರಿ
ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದರೆ. ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯ್ದಿ 10 ಸಾವಿರ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನು ಫೆಬ್ರವರಿ ಮೊದಲ ವಾರದಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಯಾಗುವುದಾಗಿ ಮಾಹಿತಿ ಲಭಿಸಿದೆ. ಸದ್ಯ ರಾಜ್ಯ ಸರ್ಕಾರ 6 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ರೂಲ್ಸ್ ಜಾರಿಗೊಳಿಸಿದೆ. ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳು ಈ ಹೊಸ ನಿಯಮಗಳನ್ನು ತಪ್ಪದೆ ಪಾಲಿಸಬೇಕಿದೆ.

ಗೃಹ ಲಕ್ಷ್ಮಿ ಮಾಸಿಕ 2000 ಪಡೆಯಲು NPCI ಕಡ್ಡಾಯ
ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಮಾಸಿಕ 2000 ರೂ ಹಣ ಪಡೆಯಲು ಹೊಸ ನಿಯಮವನ್ನು ರೂಪಿಸಿದೆ. ಗೃಹ ಲಕ್ಷ್ಮಿ ಪಾಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಸದ್ಯ ಗೃಹ ಲಕ್ಷ್ಮಿ ಫಲಾನುಭವಿಗಳು E -KYC , ಆಧಾರ್ ಸೀಡಿಂಗ್ ಮಾಡಿಸುವುದರ ಜೊತೆಗೆ ಇನ್ನುಮುಂದೆ NPCI ಕೂಡ ಮಾಡುವುದು ಅಗತ್ಯವಾಗಿದೆ. ಏನಿದು NPCI ..? NPCI ಮಾಡಿಸುವುದು ಹೇಗೆ..? ಈ ಬಗ್ಗೆ ವಿವರ ತಿಳಿದುಕೊಳೋಣ.

Gruha Lakshmi Scheme New Rules
Image Credit: Karnataka Times

National Payment Corporation of India (NPCI) ಇನ್ನು ಮುಂದೆ ಪ್ರತಿಯೊಬ್ಬರೂ NPCI ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ. NPCI ಆಗದಿದ್ದರೆ 6 ನೇ ಕಂತಿನ ಹಣ ಜಮಾ ಆಗುವುದಿಲ್ಲ ಎನ್ನುವುದು ಫಲಾನುಭವಿಗಳಿಗೆ ತಿಳಿದಿರಲಿ.

Join Nadunudi News WhatsApp Group

Join Nadunudi News WhatsApp Group