Rolls Royce: ಒಂದು ರೋಲ್ಸ್ ರೊಯ್ಸ್ ಕಾರ್ ತಯಾರಿಸಲು ಎಷ್ಟು ಗೂಳಿಗಳ ಚರ್ಮ ಬಳಸಲಾಗುತ್ತೆ ಗೊತ್ತಾ….?

ಐಷಾರಾಮಿ ರೋಲ್ಸ್ ರೊಯ್ಸ್ ಕಾರು ತಯಾರಿಸುವ ಸಮಯದಲ್ಲಿ ಗೂಳಿಗಳ ಚರ್ಮ ಬಳಸಲಾಗತ್ತದೆ

Rolls Royce Car Amking: ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿ ಕಾರ್ ಗಳಿಂದ ಹಿಡಿದು ಕಡಿಮೆ ಬೆಲೆಯ ಕಾರ್ ಗಳು ಸಾಕಷ್ಟಿವೆ. ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಕಾರ್ ಗಳಲ್ಲಿ Rolls Royce ಅತಿ ದುಬಾರಿ ಕಾರ್ ಆಗಿ ಗುರುತಿಸಲ್ಪಟ್ಟಿದೆ.

ಈ ಐಷಾರಾಮಿ ಕಾರನ್ನು ಅನೇಕ ಶ್ರೀಮಂತ ವ್ಯಕ್ತಿಗಳು ಬಳಸುತ್ತಾರೆ. ವಿಶ್ವದ ಅತ್ಯಂತ ದುಬಾರಿ ಕಾರ್ ಆಗಿರುವ Rolls Royce ಭಾರತೀಯ ಮಾರುಕಟ್ಟೆಯಲ್ಲಿಯೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸದ್ಯ ನಾವೀಗ ಅತಿ ದುಬಾರಿ ರೋಲ್ಸ್ ರಾಯ್ ಕಾರ್ ನ ನಿರ್ಮಾಣದ ವಿಧಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Rolls Royce Manufacturing
Image Credit: Money Yahoo

ಐಷಾರಾಮಿ ರೋಲ್ಸ್ ರಾಯ್ಸ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?
ರೋಲ್ಸ್ ರಾಯ್ಸ್ ಐಷಾರಾಮಿ ಕಾರನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ ಗೋತ್ತಾ…? ರೋಲ್ಸ್ ರಾಯ್ಸ್ ಕಾರನ್ನು ತಯಾರಿಸಲು 8 ಗೂಳಿಯ ಚರ್ಮವನ್ನು ಬಳಸಲಾಗುತ್ತದೆ. ಶ್ರೀಮಂತರು, ಉದ್ಯಮಿಗಳು, ಸೆಲೆಬ್ರಿಟಿಗಳು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಇತರರು ಇಷ್ಟಪಟ್ಟರೂ ಈ ದುಬಾರಿ ಕಾರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

ರೋಲ್ಸ್ ರಾಯ್ಸ್ ಕಾರನ್ನು ಬಹಳ ನಾಜೂಕಾಗಿ ಮತ್ತು ಸೂಕ್ಷ್ಮವಾಗಿ ತಯಾರಿಸಲಾಗುತ್ತದೆ. ಪ್ರತಿಯೊಂದು ಕಾರನ್ನು ಸಮಾನ ಕಾಳಜಿ, ಆಸಕ್ತಿ ಮತ್ತು ಗಮನದಿಂದ ನಿರ್ಮಿಸಲಾಗಿದೆ. ಇದರ ಬೆಲೆ ಕೋಟ್ಯಾಂತರ ರೂ. ಗಳಾಗಿದೆ. ವಿಶ್ವದ ಅತ್ಯಂತ ದುಬಾರಿ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಲ್ಸ್ ರಾಯ್ಸ್ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳಿವೆ.

ಐಷಾರಾಮಿ ರೋಲ್ಸ್ ರಾಯ್ಸ್ ಕಾರಿನ ನಿರ್ಮಾಣಕ್ಕಾಗಿ 8 ಗೂಳಿಗಳನ್ನು ಬಳಸಲಾಗುತ್ತದೆ…!
ರೋಲ್ಸ್ ರಾಯ್ಸ್ ಕಂಪನಿಯು ಐಷಾರಾಮಿ ಕಾರನ್ನು ನಿರ್ಮಿಸುವಾಗ 8 ಬುಲ್ ಹೈಡ್‌ ಗಳನ್ನು ಬಳಸುತ್ತದೆ. ರೋಲ್ಸ್ ರಾಯ್ಸ್ ಕಾರ್ ಸೀಟುಗಳು, ಕುಶನ್, ಸೀಟ್ ತುಂಬಾ ಆರಾಮದಾಯಕವಾಗಿದೆ. ಈ ಕಾರಿನಲ್ಲಿ ಪ್ರಯಾಣ ಮಾಡುವುದು ತುಂಬಾ ಸ್ವಾಗತಾರ್ಹ. ಆದರೆ ಈ ಮೃದುವಾದ ಕುಶನ್ ಸೀಟ್ ಮತ್ತು ಕಾರಿನ ಒಳಭಾಗದಲ್ಲಿ, ಕಂಪನಿಯು 8 ಬುಲ್ ಹೈಡ್‌ ಗಳನ್ನು ಬಳಸುತ್ತದೆ.

Join Nadunudi News WhatsApp Group

ಕಾರಿನ ನಿರ್ಮಾಣಕ್ಕಾಗಿ 8 ಗೂಳಿಗಳನ್ನು ಬಲಿ ನೀಡಲಾಗುತ್ತದೆ. ರೋಲ್ಸ್ ರಾಯ್ಸ್ ಆಸನಗಳನ್ನು ಒಳಗೊಂಡಂತೆ ಒಳಭಾಗದಲ್ಲಿ ಬುಲ್ ಹೈಡ್‌ ಗಳನ್ನು ಮಾತ್ರ ಬಳಸುತ್ತದೆ. ಆರಂಭದಲ್ಲಿ ಹಸುವಿನ ಚರ್ಮವನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಗೂಳಿಗಳ ಚರ್ಮವನ್ನು ಬಳಸಲಾಗುತ್ತದೆ ಏಕೆಂದರೆ ಹಸುಗಳ ಗರ್ಭಾವಸ್ಥೆಯಲ್ಲಿ ಚರ್ಮವನ್ನು ಹಿಗ್ಗಿಸುವುದರಿಂದ ಸ್ಟ್ರೆಚ್ ಮಾರ್ಕ್ ಇರುತ್ತವೆ.

Rolls Royce Interior View
Image Credit: Rollsroycelongisland

ರೋಲ್ಸ್ ರಾಯ್ಸ್ ಬಳಸುವ ಚರ್ಮವು ಯುರೋಪಿಯನ್ ಬುಲ್ ತಳಿಗಳಿಂದ ಮಾತ್ರ. ಈ ಗೂಳಿಗಳು ಸೊಳ್ಳೆ ಮತ್ತು ಇತರ ಕೀಟಗಳ ಕಡಿತದಿಂದ ಮುಕ್ತವಾಗಿವೆ. ಹೀಗಾಗಿ ಇಂಟೀರಿಯರ್ ಕೆಲಸಗಳನ್ನು ಅತ್ಯಂತ ನಾಜೂಕಾಗಿ ಮುಗಿಸಲು ಸಾಧ್ಯ. ರೋಲ್ಸ್ ರಾಯ್ಸ್ ಕಾರುಗಳು ಸುಮಾರು 6.95 ಕೋಟಿ ರೂ. ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಲ್ಲಿನಾನ್ ಮತ್ತು ಫ್ಯಾಂಟಮ್ ಕಾರುಗಳು ಅತ್ಯಂತ ದುಬಾರಿ ಕಾರುಗಳಾಗಿವೆ. ಗರಿಷ್ಠ 9.5 ಕೋಟಿ ರೂ. ಆಗಿದೆ.

Rolls Royce Car Price In India
Image Credit: Rollsroycelongisland

Join Nadunudi News WhatsApp Group