Ambassador Car: 1964 ನೇ ಇಸವಿಯಲ್ಲಿ ಅಂಬಾಸಿಡರ್ ಕಾರಿನ ಬೆಲೆ ಎಷ್ಟಿತ್ತು ಗೊತ್ತಾ, ವೈರಲ್ ಆಗಿದೆ ಬಿಲ್.

1964 ನೇ ಇಸವಿಯಲ್ಲಿ ಅಂಬಾಸಿಡರ್ ಕಾರಿನ ಬೆಲೆ ಎಷ್ಟಿತ್ತು ಗೊತ್ತಾ...?

Ambassador Car Old Bill Viral: ಪ್ರಸ್ತುತ ಭಾರತೀಯ ಆಟೋ ವಲಯಕ್ಕೆ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಹೈಫೈ ಕಾರ್ ಗಳು ಲಾಂಚ್ ಆಗಿವೆ. ಮಾರುಕಟ್ಟೆಯಲ್ಲಿ ಎಷ್ಟೇ ಹೊಸ ಹೊಸ ಮಾದರಿಯ ಕಾರ್ ಗಳು ಲಾಂಚ್ ಆಗುತ್ತಿದ್ದರು ಕೂಡ ಹಿಂದಿನ ಕಾಲದ ಕೆಲವು ಬೆಸ್ಟ್ ಮಾಡೆಲ್ ಕಾರ್ ಗಳ ಕ್ರೇಜ್ ಕಡಿಮೆ ಆಗುವುದಿಲ್ಲ ಎನ್ನಬಹುದು. ಹಳೆಯ ಮಾದರಿಯಾಗಿರುವ ಅಂಬಾಸಿಡರ್ ಕಾರ್ ಹೆಚ್ಚಿನ ಜನರ ನೆಚ್ಚಿನ ಕಾರ್ ಆಗಿದೆ.

ಈಗಲೂ ಕೂಡ ಈ ಕಾರ್ ಬಗ್ಗೆ ಹೆಚ್ಚಿನ ಜನರು ಕ್ರೇಜ್ ಇಟ್ಟುಕೊಂಡಿದ್ದಾರೆ. ಸಿನಿಮಾಗಳಲ್ಲಿ ಈ ಅಂಬಾಸಿಡರ್ ಕಾರ್ ಬಾರಿ ಮಿಂಚುತ್ತಿತ್ತು. ರಾಜಕಾರಣಿಗಳು ಹೆಚ್ಚಾಗಿ ಅಂಬಾಸಿಡರ್ ಕಾರ್ ಅನ್ನು ಬಳಸುತ್ತಿದ್ದರು. ಇನ್ನು ಅಂಬಾಸಿಡರ್ ಕಾರನ್ನು “ಭಾರತೀಯ ರಸ್ತೆಗಳ ರಾಜ” ಎಂದು ಕೂಡ ಕರೆಯಲಾಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಅಂಬಾಸಿಡರ್ ಕಾರ್ ನ ಬಿಲ್ ಒಂದು ವೈರಲ್ ಆಗುತ್ತಿದೆ. ಆ ಕಾಲದಲ್ಲಿ ಅಂಬಾಸಿಡರ್ ಕಾರ್ ನ ಬೆಲೆ ಎಷ್ಟಿದೆ ಎನ್ನುವುದು ನಿಮಗೆ ತಿಳಿದಿದ್ದರೆ ನೀವು ಅಚ್ಚರಿ ಪಡುವುದಂತೂ ನಿಜ.

Ambassador Car Old Bill Viral
Image Credit: Idreampost

1964 ನೇ ಇಸವಿಯಲ್ಲಿ ಅಂಬಾಸಿಡರ್ ಕಾರಿನ ಬೆಲೆ ಎಷ್ಟಿತ್ತು ಗೊತ್ತಾ…?
ಇತ್ತೀಚೆಗೆ, 1964 ರ ಅಂಬಾಸಿಡರ್ ಕಾರಿನ ಇನ್ವಾಯ್ಸ್ ಅಥವಾ ಬಿಲ್ ವೈರಲ್ ಆಗಿದೆ. 1964ರಲ್ಲಿ ಅಂಬಾಸಿಡರ್ ಕಾರು 16,495 ರೂ. ಬೆಳೆಯನ್ನು ಹೊಂದಿದೆ. ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹಳೆಯ ಬಿಲ್ ಪ್ರಕಾರ, ಕಾರನ್ನು 1964 ರಲ್ಲಿ ಮದ್ರಾಸ್‌ ನಲ್ಲಿರುವ ಗುಪ್ತಾ ಸ್ಟೇಟ್ಸ್ ಹೋಟೆಲ್‌ ಗೆ ತಲುಪಿಸಲಾಯಿತು. ಈ ಕಾರನ್ನು ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಮದ್ರಾಸ್‌ ಗೆ ತಲುಪಿಸಲಾಯಿತು. ಕಾರಿನ ಮೂಲ ಬೆಲೆ ರೂ. 13,787, ಸರ್ಚಾರ್ಜ್ ರೂ.255, ಸಾರಿಗೆ ಶುಲ್ಕ ರೂ.897, ಮದ್ರಾಸ್ ಜನರಲ್ ಸೇಲ್ಸ್ ಟ್ಯಾಕ್ಸ್ ರೂ.1,493, ನೋಂದಣಿ ರೂ.54 ಮತ್ತು ನಂಬರ್ ಪ್ಲೇಟ್ ರೂ.7. ಒಟ್ಟು ರೂ.16,495. ಕಾರಿಗೆ ನೀಡಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಿಲ್ ಬಾರಿ ವೈರಲ್ ಆಗುತ್ತಿದೆ.

ವೈರಲ್ ಆಗಿದೆ ಬಿಲ್
ಹಿಂದೂಸ್ತಾನ್ ಮೋಟಾರ್ಸ್ 1957 ರಲ್ಲಿ ಅಂಬಾಸಿಡರ್ ಕಾರನ್ನು ಬಿಡುಗಡೆ ಮಾಡಿತು. ಇದು ಬ್ರಿಟಿಷ್ ಕಾರನ್ನು ಆಧರಿಸಿದೆ. ಈ ಕಾರು 80 ರ ದಶಕದವರೆಗೂ ಜನರ ಹೃದಯವನ್ನು ಆಳಿತು. ಈ ಕಾರುಗಳಲ್ಲಿ ಹೆಚ್ಚಿನವು ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿದ್ದವು. ಮಾರುಕಟ್ಟೆಯಲ್ಲಿ ಎಷ್ಟೇ ಮಾದರಿಯ ಕಾರುಗಳು ಲಭ್ಯವಿದ್ದರೂ ಅಂಬಾಸಿಡರ್ ಕಾರು ವಿಭಿನ್ನ ಕ್ರೇಜ್ ಹೊಂದಿತ್ತು. ಆದರೆ ಮಾರುತಿ ಸುಜುಕಿ ಬಂದ ನಂತರ ಅದರ ಜನಪ್ರಿಯತೆ ಕುಸಿಯಿತು. ಆದರೆ ಈ ಕಾರ್ ಜರ್ನಿ ಇಂದಿಗೂ ಅನೇಕರಿಗೆ ಪ್ಯಾಶನ್ ಆಗಿದೆ. ಸದ್ಯದ ಟ್ರೆಂಡ್ ಗೆ ತಕ್ಕಂತೆ ಈ ಕಾರು ಅಪ್ ಡೇಟ್ ಆಗದ ಕಾರಣ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಹಿಂದೂಸ್ತಾನ್ ಮೋಟಾರ್ಸ್ ಈ ಕಾರಿನ ಉತ್ಪಾದನೆಯನ್ನು 2014 ರಲ್ಲಿ ನಿಲ್ಲಿಸಿತು.

Ambassador Car Price
Image Credit: Mangaloremerijaan

Join Nadunudi News WhatsApp Group

Join Nadunudi News WhatsApp Group