Volvo C40 : 530 Km ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ 2 ಲಕ್ಷ ಡಿಸ್ಕೌಂಟ್, ಇಂದೇ ಬುಕ್ ಮಾಡಿ.

530 Km ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ 2 ಲಕ್ಷ ಡಿಸ್ಕೌಂಟ್

Volvo C40 Electric Car Discount: ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯಲ್ಲಿ ನೂತನ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಆಕರ್ಷಕ ಲುಕ್ ನ ಸಾಕಷ್ಟು ಕಾರ್ ಗಳಿವೆ.

ಇದೀಗ ಜನಪ್ರಿಯ ಕಾರ್ ತಯಾರಕ ಕಂಪನಿಯಾಗಿರುವ ವೋಲ್ವೋ (Volvo) ನೂತನ ಸುಧಾರಿತ ವಿನ್ಯಾಸದ ಹೊಸ ಕಾರ್ ಅನ್ನು ಬಿಡುಗಡೆ ಮಾಡಿದ್ದು, ಈ ಕಾರ್ ಖರೀದಿಗೆ ಗ್ರಹಕ್ರಿಗೆ ಒಂದೊಳ್ಳೆ ರಿಯಾಯಿತಿಯನ್ನು ಘೋಷಿಸಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ವೋಲ್ವೋ ಈ ನೂತನ ಮಾದರಿಯನ್ನು ಖರೀದಿಸಬಹುದು.

Volvo C40 Electric Car Discount
Image Credit: Cardekho

ಮಾರುಕಟ್ಟೆಗೆ ಬಂತು ನೂತನ Volvo C40 Electric Car 
ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಡ್ಯುಯಲ್ ಮೋಟಾರ್ ಆಲ್ ವೀಲ್ ಡ್ರೈವ್ ಸೆಟಪ್ ನಲ್ಲಿ ಬರಲಿದೆ. ಈ C40 ರಿಚಾರ್ಜ್ ಕಾರ್ 78kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 405 bhp ಮತ್ತು 660 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅನೇಕ ಏರ್‌ ಬ್ಯಾಗ್‌ ಗಳು, ಮುಂಭಾಗದ ಸೀಟುಗಳಿಗೆ ವಿಪ್ಲ್ಯಾಶ್ ರಕ್ಷಣೆ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ ನಂತಹ ADAS ಫೀಚರ್ಸ್ ಗಳನ್ನೂ ಸುರಕ್ಷತೆಗಾಗಿ ಅಳವಡಿಸಲಾಗಿದೆ.

Volvo C40 Electric Car Price
Image Credit: Carandbike

530 Km ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ 2 ಲಕ್ಷ ಡಿಸ್ಕೌಂಟ್
ಇನ್ನು ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಗೆ 59 ರಿಂದ 60 ಲಕ್ಷ ಬೆಲೆಯನ್ನುಕಂಪನಿಯು ನಿಗದಿಪಡಿಸಿದೆ. ಈ ಕಾರ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕೇವಲ 30 ರಿಂದ 40 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಕಾರ್ 4.7 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆಯಲಿದ್ದು ಈ ಕಾರಿನ ಟಾಪ್ ಸ್ಪೀಡ್ 180 ಕಿಲೋಮೀಟರ್ ಆಗಿದೆ.

Join Nadunudi News WhatsApp Group

C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ 19 ಇಂಚಿನ ಅಲಾಯ್ ವೀಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಆರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ರೂ. 2 ಲಕ್ಷ ರಿಯಾಯಿತಿಯನ್ನು ಹೊಂದಿದೆ. ಈ ರಿಯಾಯಿತಿಯು 2023 ವೋಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್ ಮಾದರಿಯಲ್ಲಿ ಸ್ಟಾಕ್‌ ಗಳಿರುವಾಗ ಮಾತ್ರ ಮಾನ್ಯವಾಗಿರುತ್ತದೆ. ನೀವು ಈ ಆಫರ್ ಅನ್ನು ಬಳಸಿಕೊಂಡರೆ ವೋಲ್ವೋ C40 ಮಾದರಿಯ ಖರೀದಿಯಲ್ಲಿ 2 ಲಕ್ಷ ಹಣವನ್ನು ಉಳಿಸಬಹುದು.

Volvo C40 Electric Car Features
Image Credit: Thequint

Join Nadunudi News WhatsApp Group