Credit Card: ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್, ಇಂದಿನಿಂದ ಹೊಸ ಸೇವೆ ಆರಂಭ.

ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ಸೇವೆ ಆರಂಭ

Credit Card New Rule: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿದೆ. ಅದರಲ್ಲೂ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು RBI ಬದಲಾಯಿಸುತ್ತಿದೆ. ಸದ್ಯ ದೇಶದಲ್ಲಿ Credit Card ನಿಯಮವನ್ನು ಬದಲಾಯಿಸಿದೆ. ಸದ್ಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಹೊಸ ಕ್ರೆಡಿಟ್ ಕಾರ್ಡ್ ಗಳನು ಪಡೆಯುವ ಯೋಜನೆಯಲ್ಲಿರುವವರಿಗೆ ಹೊಸ ನಿಯಮ ಪರಿಚಯವಾಗಿದೆ. ಈ ಹೊಸ ನಿಯಮದ ಬಗ್ಗೆ ವಿವರ ಇಲ್ಲಿದೆ.

Reserve Bank of India (RBI) ಬ್ಯಾಂಕ್‌ ಗಳು ಮತ್ತು NBFC ಗಳಿಂದ ಕ್ರೆಡಿಟ್ ಕಾರ್ಡ್‌ ಗಳನ್ನು ವಿತರಿಸಲು ಹೊಸ ಮಾರ್ಗಸೂಚಿಗಳನ್ನು ಮಾಡಿದೆ. ಆರ್ ಬಿಐನ ಹೊಸ ನಿಯಮ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದ್ದು ಇದರಿಂದ ಗ್ರಾಹಕರು ಸಾಕಷ್ಟು ಲಾಭ ಪಡೆಯಲಿದ್ದಾರೆ ಎನ್ನಲಾಗಿದೆ.

Credit Card New Rule
Image Credit: Bankofbaroda

ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್
ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ ಗಳು ಅಥವಾ NBFC ಗಳು ಅಮೇರಿಕನ್ ಎಕ್ಸ್‌ ಪ್ರೆಸ್, ಮಾಸ್ಟರ್‌ ಕಾರ್ಡ್ ಏಷ್ಯಾ, ಡೈನರ್ಸ್ ಕ್ಲಬ್ ಮತ್ತು ರುಪೇಯಂತಹ ಯಾವುದೇ ಕಾರ್ಡ್ ನೆಟ್‌ ವರ್ಕ್‌ ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು RBI ಸ್ಪಷ್ಟಪಡಿಸಿದೆ. ಗ್ರಾಹಕರು ಯಾವ ನೆಟ್‌ ವರ್ಕ್ ಕಾರ್ಡ್ ಪಡೆಯಲು ಬಯಸುತ್ತಾರೆ ಎಂಬುದರ ಆಯ್ಕೆಯನ್ನು ನೀಡುವಂತೆ ಕಾರ್ಡ್ ನೀಡುವ ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳಿಗೆ ಸೂಚನೆ ನೀಡಿದೆ. ಬ್ಯಾಂಕ್ ನ ಬದಲಾಗಿ ಇನ್ನುಮುಂದೆ ಗ್ರಾಹಕರು ಈಗ ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು.

ಇಂದಿನಿಂದ ಹೊಸ ಸೇವೆ ಆರಂಭ
ಭಾರತದಲ್ಲಿ ವೀಸಾ, ಮಾಸ್ಟರ್‌ ಕಾರ್ಡ್, ಅಮೇರಿಕನ್ ಎಕ್ಸ್‌ ಪ್ರೆಸ್, ಡೈನರ್ಸ್ ಕ್ಲಬ್, ರುಪೇ ಮುಂತಾದ ಕಾರ್ಡ್ ನೆಟ್‌ ವರ್ಕ್‌ ಗಳು ಅನೇಕ ಪ್ರಮುಖ ಬ್ಯಾಂಕ್‌ ಗಳು ಮತ್ತು NBFC ಗಳೊಂದಿಗೆ ಟೈ ಅಪ್‌ ಗಳನ್ನು ಹೊಂದಿವೆ. ಅದಾಗ್ಯೂ, ಹೊಸ RBI ನಿಯಮದ ಪ್ರಕಾರ, ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿ ಗಳು ಯಾವುದೇ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ. ಬ್ಯಾಂಕ್‌ ಗಳು ಅಥವಾ ಎನ್‌ ಬಿಎಫ್‌ ಸಿ ಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನವೀಕರಣದ ಸಮಯದಲ್ಲಿಯೂ ಕಾರ್ಡ್ ನೆಟ್‌ ವರ್ಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು.

Credit Card Latest News
Image Credit: Informalnewz

Join Nadunudi News WhatsApp Group

Join Nadunudi News WhatsApp Group