SIM Card: ದೇಶಾದ್ಯಂತ ಸಿಮ್ ಕಾರ್ಡ್ ಖರೀದಿಸುವ ನಿಯಮಗಳಲ್ಲಿ ಹೊಸ ಬದಲಾವಣೆ, ಎಲ್ಲರಿಗು ಅನ್ವಯ

ಸದ್ಯ ನೀವೇನಾದರು ಹೊಸ ಸಿಮ್ ಕಾರ್ಡ್ ಪಡೆಯಲು ಯೋಚಿಸುತ್ತಿದ್ದೀರಾ ಆದರೆ ನೀವು ಇದನ್ನು ಖಚಿತವಾಗಿ ತಿಳಿದುಕೊಳ್ಳಲೇ ಬೇಕಿದೆ. ಹೌದು ಸದ್ಯ ಇದೀಗ ಹೊಸ ನಿಯಮಗಳು ಜಾರಿಗೆ ಬಂದಿದ್ದು ಇದರಿಂದಾಗಿ ವಂಚನೆಗಳನ್ನು ಪರಿಶೀಲಿಸಲಾಗುತ್ತದೆ. ಹೌದು ನಕಲಿ ದಾಖಲೆಗಳೊಂದಿಗೆ SIM Card ಪಡೆದುಕೊಂಡರೆ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿದ್ದು ಅಲ್ಲದೆ ಗುರುತಿನ ವಿವರಗಳನ್ನು ಮ್ಯಾನಿಪುಲೇಟ್ ಮಾಡಿದರೂ ಕೂಡ ಅವರು ತೊಂದರೆಗೆ ಸಿಲುಕುತ್ತಾರೆ ಅಲ್ಲದೇ ಜೈಲಿನಲ್ಲಿ ಭಾರೀ ದಂಡವನ್ನೂ ಕೂಡ ವಿಧಿಸಲಾಗುತ್ತದೆ.

ಸದ್ಯ ಭಾರತೀಯ ದೂರಸಂಪರ್ಕ ಮಸೂದೆ 2022 ರ ಕರಡು ನಿಯಮಗಳ ಪ್ರಕಾರವಾಗಿ ನಕಲಿ ದಾಖಲೆಗಳೊಂದಿಗೆ ಮೊಬೈಲ್ ಸಿಮ್ ಖರೀದಿಸುವುದು ಹಾಗೂ ವಾಟ್ಸ್ ಆಪ್ ಟೆಲಿಗ್ರಾಮ್ ಸಿಗ್ನಲ್ ಅಥವಾ ಟಾಪ್ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಗುರುತನ್ನು ತಿದ್ದುವುದು ಜೈಲು ಶಿಕ್ಷೆ ಅಥವಾ ರೂ. 50,000 ದಂಡ ವಿಧಿಸಲಾಗುವುದು. ಈ ಕಾರಣದಿಂದಾಗಿ ಇದೀಗ ಗ್ರಾಹಕರು ಈ ಬಗ್ಗೆ ಜಾಗೃತರಾಗಿರಬೇಕಿದೆ.

ಟೆಲಿಕಾಂ ಬಳಕೆದಾರರನ್ನು ಆನ್‌ಲೈನ್ ವಂಚನೆಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಂದ ರಕ್ಷಿಸಲು ಕೇಂದ್ರವು ಈ ಹೊಸ ನಿಯಮಗಳನ್ನು ತರುತ್ತಿದ್ದು ಸೈ ಬರ್ ಕ್ರಿ ಮಿನಲ್‌ಗಳು ಸಿಮ್ ಕಾರ್ಡ್‌ಗಳನ್ನು ಪಡೆಯಲು ಹೆಚ್ಚಾಗಿ ನಕಲಿ ದಾಖಲೆಗಳನ್ನು ಬಳಸುತ್ತಿದ್ದಾರೆ. ಈ ಕಾರಣದಿಂದಲೇ ವಂಚನೆ ಮಾಡುತ್ತಾರೆ. ಇನ್ನು ಅಂತಹವರು OTT ಅಪ್ಲಿಕೇಶನ್‌ಗಳಲ್ಲಿ ಗುರುತನ್ನು ಬದಲಾಯಿಸುತ್ತಲೇ ಇದ್ದು ಈ ರೀತಿ ನಕಲಿ ವಿವರಗಳೊಂದಿಗೆ ಕರೆ ಮಾಡಿ ಜನರನ್ನು ವಂಚಿಸುತ್ತಾರೆ.new sim card rules in india 2022

ಹೌದು ಸದ್ಯ ಇದನ್ನು ತಡೆಯಲು ಕೇಂದ್ರ ಹೊಸ ನಿಯಮಾವಳಿಗಳನ್ನು ತರುತ್ತಿದ್ದು ಇದು ಟೆಲಿಕಾಂ ಬಳಕೆದಾರರನ್ನು ವಂಚನೆಯಿಂದ ರಕ್ಷಿಸುತ್ತದೆ ಎನ್ನಬಹುದು. ಇನ್ನು ಹೊಸ ಟೆಲಿಕಾಂ ಮಸೂದೆಯು ಸೈಬರ್ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.

ಕರಡು ಮಸೂದೆಯ ಪರಿಚ್ಛೇದ 4 ರ ಉಪ-ವಿಭಾಗ 7 ರ ಸುಳ್ಳು ಗುರುತನ್ನು ಒಂದು ವರ್ಷದವರೆಗೂ ಜೈಲು ಶಿಕ್ಷೆಯೊಂದಿಗೆ ಶಿಕ್ಷೆಗೆ ಒಳಪಡಿಸುತ್ತದೆ. ಅಲ್ಲದೆ 50,000 ರೂ.ವರೆಗೆ ದಂಡ ವಿಧಿಸಲಾಗುತ್ತಿದ್ದು ದೂರಸಂಪರ್ಕ ಸೇವೆಗಳನ್ನೂ ಸ್ಥಗಿತಗೊಳಿಸಲಾಗುವುದು. ಹೌದು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಪೊಲೀಸರು ಅಪರಾಧಿಯನ್ನು ಬಂಧಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group