IPL 2024: RCB ವಿರುದ್ಧ ಭರ್ಜರಿ ಶತಕ ಸಿಡಿಸಿದ ಹೆಡ್ ತನ್ನ ಬ್ಯಾಟ್ ಮೇಲೆ ಹೆಲ್ಮೆಟ್ ಇರಿಸಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ.

ಈ ಕಾರಣಕ್ಕೆ ಶತಕ ಸಿಡಿಸಿದ ನಂತರ ಬ್ಯಾಟ್ ಮೇಲೆ ಹೆಲ್ಮೆಟ್ ಇರಿಸಿದ ಟ್ರಾವಿಸ್ ಹೆಡ್

SRH v/s RCB: IPL 2024 ರಲ್ಲಿ ಸೋಮವಾರ ಸನ್ ರೈಸರ್ಸ್ ಹಾಗೂ RCB ತಂಡದ ನಡುವೆ ಹಣಾಹಣಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಸನ್ ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 3 ವಿಕೆಟ್ ಗೆ 287 ರನ್ ಹೊಡೆದು RCB ತಂಡಕ್ಕೆ ಗುರಿ ನೀಡಿತ್ತು. ಆದರೆ RCB ತಂಡ 7 ವಿಕೆಟ್ ಗೆ 262 ರನ್ ಅಷ್ಟೇ ಗಳಿಸಿತ್ತು.

ಸನ್ ರೈಸರ್ಸ್ ಹೈದರಾಬಾದ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿರುಗಾಳಿಯಂತೆ ಬ್ಯಾಟಿಂಗ್ ಮಾಡಿ ಭರ್ಜರಿ ರನ್ ಗಳಿಸಿ ಜಯ ಸಾಧಿಸಿದೆ. ಈ ಮ್ಯಾಚ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ​ ಹಿಂದೆಂದೂ ಕಂಡಿರದ ದೊಡ್ಡ ಸ್ಪೋಟಕ ಆಟವೆಂದೇ ಹೇಳಬಹುದು.

IPL 2024, SRH Vs RCB
Image Credit: Jagoindiajago

RCB ವಿರುದ್ಧ ಭರ್ಜರಿ ಶತಕ ಸಿಡಿಸಿದ ಹೆಡ್ ತನ್ನ ಬ್ಯಾಟ್ ಮೇಲೆ ಹೆಲ್ಮೆಟ್ ಇರಿಸಿದ್ದು ಯಾಕೆ…?
ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಸನ್ ರೈಸರ್ಸ್ ಬ್ಯಾಟ್ಸ್ ಮನ್ ಗಳು ಮಾಸ್ ಹಿಟ್ಟಿಂಗ್ ಮೂಲಕ ಭರ್ಜರಿ ಆಟ ಆಡಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 287 ರನ್ ಗಳಿಸಿತು. ಈ ಮೂಲಕ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಎಂಬ ಹೆಗ್ಗಳಿಕೆಗೆ ತಂಡ ಪಾತ್ರವಾಯಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಶತಕವೇ ತಂಡದ ಇನ್ನಿಂಗ್ಸ್‌ ನ ಹೈಲೈಟ್.

ಹೆಡ್ 41 ಎಸೆತಗಳಲ್ಲಿ 102 ರನ್ ಗಳಿಸಿದರು. 39 ಎಸೆತಗಳಲ್ಲಿ ಶತಕದ ಗಡಿ ತಲುಪಿದರು. ಅವರ ಇನ್ನಿಂಗ್ಸ್‌ ನಲ್ಲಿ 9 ಬೌಂಡರಿಗಳು ಮತ್ತು 8 ಬೃಹತ್ ಸಿಕ್ಸರ್‌ ಗಳಿವೆ. ಯಾವುದೇ ಬೌಲರ್‌ ಗಳನ್ನು ಲೆಕ್ಕಿಸದೆ ವಿಧ್ವಂಸಕ ಬ್ಯಾಟಿಂಗ್ ಮಾಡಿದರು. ವೇಗದ ಶತಕ ಬಾರಿಸಿದ ಹೆಡ್ ಅದನ್ನು ವಿನೂತನವಾಗಿ ಆಚರಿಸಿದರು.

SRH vs RCB
Image Credit: ipltrack

ಹೆಡ್ ವಿನೂತನ ಶತಕ ಆಚರಣೆಗೆ ಇಲ್ಲಿದೆ ಕಾರಣ
ಹೆಲ್ಮೆಟ್ ಕಳಚಿ ಬ್ಯಾಟ್ ನ ಹಿಡಿಕೆಗೆ ಸಿಕ್ಕಿಸಿಕೊಂಡು ವಿನೂತನ ಆಚರಣೆ ಮಾಡಿದರು. ಇದನ್ನು ನೋಡಿದವರು ಇದರ ಅರ್ಥವೇನು ಎಂದು ಆಶ್ಚರ್ಯ ಪಡುತ್ತಿದ್ದರು. ಆದಾಗ್ಯೂ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಇದೇ ರೀತಿಯ ಆಚರಣೆಯನ್ನು ಮೊದಲು ಮಾಡಿದರು, ಹೆಡ್ ಅಲ್ಲ. ಹೌದು ಕ್ರಿಸ್ ಗೇಲ್ ಶತಕ ಬಾರಿಸಿದ ನಂತರ ಹೀಗೆ ಸಂಭ್ರಮಿಸುತ್ತಿದ್ದರು, ಈಗ ಮತ್ತೆ ಅದನ್ನೇ ಸಂಭ್ರಮಿಸಿದ್ದಾರೆ. ಆದರೆ, ಇದರ ಹಿಂದೆ ಒಂದು ಕಾರಣವಿದೆ.

Join Nadunudi News WhatsApp Group

ಹೆಡ್ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಆದರೆ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಮುಂದಿನ ಋತುವಿನಲ್ಲಿ ಅವರನ್ನು ತಂಡದಿಂದ ತೆಗೆದುಹಾಕಲಾಯಿತು. ಈ ಸೇಡನ್ನು ನಿನ್ನೆ ಹೆಡ್ ತೀರಿಸಿಕೊಂಡಿದ್ದಾರೆ. ಅದೂ ಬೆಂಗಳೂರಿನ ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಅಷ್ಟೇ ಏಕೆ ಈ ಶತಕದ ಬಳಿಕ ಆ ತಂಡದ ಮಾಜಿ ಬ್ಯಾಟ್ಸ್ ಮನ್ ಗೇಲ್ ಅವರನ್ನು ಅನುಕರಿಸುವ ಮೂಲಕ ಆರ್ ಸಿಬಿಗೆ ತಿರುಗೇಟು ನೀಡಿದ್ದಾರೆ.

IPL 2024 Latest Update
Image Credit: Khelnow

Join Nadunudi News WhatsApp Group