Vasishta Simha: ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಖರೀದಿಸಿದ ಹೊಸ ಕಾರಿನ ಬೆಲೆ ಎಷ್ಟು…? ಬಹಳ ದುಬಾರಿ ಕಾರ್

ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಖರೀದಿಸಿದ ಕಾರ್ ಬೆಲೆ ಎಷ್ಟು...?

Vasishta Simha And Haripriya Expensive Car: ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರೆಟಿಗಳು ಆಗಾಗ ತಮ್ಮ ದುಬಾರಿ ವಸ್ತುಗಳ ಖರೀದಿಯಿಂದಾಗಿ ಸುದ್ದಿಯಾಗುತ್ತಾರೆ. ಹೆಚ್ಚಾಗಿ ದುಬಾರಿ ಬೆಲೆಯ ಕಾರ್ ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಈ ಸಾಲಿನಲ್ಲಿ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸೇರಿಕೊಂಡಿದ್ದಾರೆ. ಸದ್ಯ ಸಿಂಹಪ್ರಿಯ ಜೋಡಿ ದುಬಾರಿ ಬೆಲೆಯ ಕಾರ್ ಖರೀದಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಬಾರಿ ವೈರಲ್ ಆಗುತ್ತಿದೆ.

ಇನ್ನು ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ತಮ್ಮ ಹೊಸ ಕಾರ್ ನ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಸಿಂಹಪ್ರಿಯ ಜೋಡಿಯ ನ್ಯೂ ಕಾರ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕಾರ್ ನ ಬೆಲೆಯ ಬಗ್ಗೆ ಚರ್ಚೆ ಹೆಚ್ಚಿದೆ. ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಖರೀದಿಸಿದ ಕಾರ್ ಯಾವುದು…? ಅದರ ಬೆಲೆ ಎಷ್ಟು…? ಕಾರ್ ನ ಫೀಚರ್ ಗಳೇನು..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Vasishta Simha And Haripriya Expensive Car
Image Credit: Oneindia

ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಖರೀದಿಸಿದ ಹೊಸ ಕಾರಿನ ಬೆಲೆ ಎಷ್ಟು…?
ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರು ಹೊಚ್ಚ ಹೊಸ Mercedes-Benz GLE 450d 4Matic ಖರೀದಿಸಿದ್ದಾರೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಹೊಸ ಎಸ್‌ಯುವಿ ವಿತರಣೆಯ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂಬಂಧಿಕರು, ಸ್ನೇಹಿತರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹೊಸ Mercedes-Benz GLE 450D SUV ದೇಶಿಯ ಮಾರುಕಟ್ಟೆಯಲ್ಲಿ 1.15 ಕೋಟಿ ರೂ. ಗಳ ಎಕ್ಸ್ ಶೋ ರೂಂ ಬೆಲೆ ಹೊಂದಿದೆ. ಇದು 3-ಲೀಟರ್ 6-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ ಅದು 367 PS ಗರಿಷ್ಠ ಶಕ್ತಿ ಮತ್ತು 750 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಹ ಒಳಗೊಂಡಿದೆ. ಈ ಕಾರು AWD(ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಗಂಟೆಗೆ 230 ಕಿಮೀ ವೇಗವನ್ನು ತಲುಪಲಿದೆ.

 vasishta simha expensive car
Image Credit: Drivespark

ಬಹಳ ದುಬಾರಿ ಕಾರ್ ಖರೀದಿಸಿದ ಸಿಂಹಪ್ರಿಯ ಜೋಡಿ
ಹೊಸ SUV 5 ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು 9 kmpl ಮೈಲೇಜ್ ನೀಡುತ್ತದೆ. ಪ್ರವಾಸದ ಸಮಯದಲ್ಲಿ ಸಾಮಾನುಗಳನ್ನು ಸಾಗಿಸಲು 630 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ. ಹೊಸ ಮರ್ಸಿಡಿಸ್-ಬೆಂಜ್ ಜಿಎಲ್‌ಇ 450ಡಿ ಎಸ್‌ಯುವಿಯು ಬೆಲೆಗೆ ತಕ್ಕಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಮತ್ತು ಇನ್‌ ಸ್ಟ್ರುಮೆಂಟೇಶನ್‌ ಕ್ಲಸ್ಟರ್‌ ಗಾಗಿ 12.3-ಇಂಚಿನ ಡುಯಲ್ ಡಿಸ್ಪ್ಲೇ, 4-ಜೋನ್ ಕ್ಲೆಮೇಟ್ ಕಂಟ್ರೋಲ್, ಹೆಡ್ – ಅಪ್ ಡಿಸ್ಪ್ಲೇ, 590ಡಬ್ಲ್ಯೂ 13 – ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೋಡಬಹುದು.

Join Nadunudi News WhatsApp Group

Vasishta Simha And Haripriya Purchased New Car
Image Credit: Zeenews

Join Nadunudi News WhatsApp Group