Gold Price 2025: 2025 ರ ಅಂತ್ಯದಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ ಗೊತ್ತಾ…? ಯಾರೂ ಕೂಡ ಖರೀದಿಸಲು ಸಾಧ್ಯವಿಲ್ಲ.

2025 ರಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾಗಲಿದೆ ಗೊತ್ತಾ...?

Gold Price In 2025: ಭಾರತದಲ್ಲಿ ಚಿನ್ನವನ್ನು ಧರಿಸುವುದು ಒಂದು ರೀತಿಯಲ್ಲಿ ವಿಶೇಷ ಸಂಪ್ರದಾಯ ಎನ್ನಬಹುದು. ಯಾವುದೇ ವಿಶೇಷ ಕಾರ್ಯಕ್ಕೆ ಹೋಗಬೇಕಿದ್ದರು ಕೂಡ ಚಿನ್ನ ಧರಿಸುವುದು ಸಹಜ. ಅದರಲ್ಲೂ ಮಹಿಳೆಯರು ಚಿನ್ನದ ಮೇಲೆ ಹೆಚ್ಚಿನ ಒಲವನ್ನು ತೋರುತ್ತಾರೆ. ನಿಮಗೆ ತಿಳಿದಿರುವ ಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.

ಕಳೆದ ವರ್ಷದಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಏರಿಕೆ ಆಗಿದೆ ಎನ್ನಬಹುದು. ಸದ್ಯ ಬಡವರ ಕೈಗೆ ಚಿನ್ನ ಸಿಗದಂತಾಗಿದೆ ಎಂದರೆ ತಪ್ಪಗಲಾರದು. ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಇಳಿಕೆ ಕಂಡು ಬಂದಿಲ್ಲ ಎನ್ನಬಹುದು. ಅದರಲ್ಲೂ 2024 ರ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಬರುತ್ತಿದೆ.

Gold Price In 2025
Image Credit: Karnatakatimes

66 ಸಾವಿರ ಗಡಿ ದಾಟಿದೆ ಚಿನ್ನದ ಬೆಲೆ…!
ಇನ್ನು ಸಾಮಾನ್ಯವಾಗಿ ಜನರು ಚಿನ್ನವನ್ನು ಖರೀದಿಸಲು ಚಿನ್ನದ ಬೆಲೆಯ ಇಳಿಕೆಯ ಬಗ್ಗೆ ಹೆಚ್ಚು ನಿರೀಕ್ಷಿಸುತ್ತಾರೆ. ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತದೆ ಎಂದು ತಿಳಿಯಲು ದಿನನಿತ್ಯ ಚಿನ್ನದ ಬೆಲೆಯ ವ್ಯತ್ಯಾಸವನ್ನು ನೋಡುವವರು ಸಾಕಷ್ಟು ಜನರಿದ್ದಾರೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಒಂದು ವರ್ಷದಲ್ಲಿ ಚಿನ್ನದ ಬೆಲೆ ಮುಗಿಲು ಮುಟ್ಟಿರುವುದಂತೂ ನಿಜ. ಇನ್ನು ಡಿಸೇಂಬರ್ 2022 ರಲ್ಲಿ ಚಿನ್ನದ ಬೆಲೆ 50,600 ರೂ. ನಲ್ಲಿತ್ತು. 2022 ರಲ್ಲಿ 50 ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ 2023 ರಲ್ಲಿ 60 ಸಾವಿರದ ಗಡಿಯ ಹತ್ತಿರ ತಲುಪಿತ್ತು.

ಚಿನ್ನದ ಬೆಲೆಯ ಸತತ ಏರಿಕೆಯು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯನ್ನು ತಂದಿದೆ. ಇನ್ನು ಇದೀಗ ಚಿನ್ನದ ಬೆಲೆ 2024 ರಲ್ಲಿ 66 ಸಾವಿರದ ಗಡಿ ದಾಟಿದೆ. ಆದಾಗ್ಯೂ, 24 ಕ್ಯಾರೆಟ್ ಚಿನ್ನದ ಬೆಲೆಯಂತು 72 ಸಾವಿರ ಗಡಿ ದಾಟಿದೆ. ಇನ್ನು ಇಂದಿನ ಬೆಲೆಯಲ್ಲಿ ನೀವು ಹತ್ತು ಗ್ರಾಂ ಚಿನ್ನವನ್ನು ಖರೀದಿಸಲು ಹೋದರೆ 66,550 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಅದೇ ರೀತಿ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯೂ 72,600 ರೂ. ತಲುಪಿದೆ ಎನ್ನಬಹುದು.

gold price per gram
Image Credit: Zeenews

2025 ರ ಅಂತ್ಯದಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ ಗೊತ್ತಾ…?
ಇನ್ನು ವರ್ಷದ ಆರಂಭದಿಂದ ಚಿನ್ನದ ಬೆಲೆಯ ಏರಿಕೆಯನ್ನು ಲೆಕ್ಕಾಚಾರ ಹಾಕಿದರೆ ವರ್ಷದ ಅಂತ್ಯದಲ್ಲಿ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ ಎನ್ನುವುದು ತಿಳಿಯುತ್ತದೆ. ಇನ್ನು 2022 ರಿಂದ 2024 ರಲ್ಲಿ ಚಿನ್ನದ ಬೆಲೆಯ ಪ್ರಮಾಣದ ಬಾರಿ ಏರಿಕೆಯಾಗಿದೆ. 50 ಸಾವಿರದ ಗಡಿಯಲ್ಲಿದ್ದ ಚಿನ್ನದ ಬೆಲೆ ಇದೀಗ 66 ಸಾವಿರ ಗಡಿ ದಾಟಿದೆ. ಇನ್ನು ಇದೆ ರೀತಿಯಲ್ಲಿ ಚಿನ್ನದ ಬೆಲೆ ಏರಿಕೆ ಆದರೆ ಚಿನ್ನ ಖರೀದಿ ಅಸಾಧ್ಯ ಆಗುವುದಂತೂ ನಿಜ. ಬಡವರ ಪಾಲಿಗೆ ಚಿನ್ನ ಖರೀದಿ ಇನ್ನುಮುಂದೆ ಕನಸಾಗಿಯೇ ಉಳಿಯುತ್ತದೆ.

Join Nadunudi News WhatsApp Group

ಈಗಂತೂ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯಲ್ಲಿ ಇಳಿಕೆ ಕಂಡು ಬರುತ್ತಿಲ್ಲ. ಒಂದೊಂದು ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಆದರೆ ಅದರ ಮರುದಿನ ಮತ್ತೆ ದುಪ್ಪಟ್ಟು ಚಿನ್ನದ ಬೆಲೆ ಏರಿಕೆಯಾಗುತ್ತದೆ. ಇದೆ ರೀತಿ ಚಿನ್ನದ ಬೆಲೆ ಏರಿಕೆಯಾಗುತ್ತ ಬಂದರೆ 2025 ರ ಅಂತ್ಯದಲ್ಲಿ ಚಿನ್ನದ ಬೆಲೆ 85,000 ರೂ ಗಡಿ ದಾಟುವದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುರುವ ಕಾರಣ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಬಹುದು.

Gold Price Latest Update
Image Credit: Business-Standard

Join Nadunudi News WhatsApp Group