Gas Price Down: ಮೇ ತಿಂಗಳ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಇಳಿಕೆ, ಗ್ಯಾಸ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್

ದೇಶದ ಜನತೆಗೆ ಗುಡ್ ನ್ಯೂಸ್, ಮೇ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ.

Gas Price Down In May 1st: ಇದೀಗ 2024 ರ ಏಪ್ರಿಲ್ ತಿಂಗಳು ಮುಗಿದು ಇದೀಗ ಮೇ ತಿಂಗಳು ಆರಂಭವಾಗಿದೆ. ಮೇ ತಿಂಗಳಿನಿಂದ ದೇಶದಲ್ಲಿ ಹಲವಾರು ಬದಲಾವಣೆ ಆಗಲಿದೆ. ನಿಯಮಗಳ ಬದಲಾವಣೆಯ ಜೊತೆಗೆ ಹಲವು ವಸ್ತುಗಳ ಬೆಲೆ ಕೂಡ ಬದಲಾಗುತ್ತಿದೆ. ಸದ್ಯ ಹೊಸ ತಿಂಗಳ ಆರಂಭವು ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಖುಷಿ ನೀಡಿದೆ.

ಕಾರಣ ಹಲವು ತಿಂಗಳುಗಳಿಂದ ಏರಿಕೆ ಕಾಣುತ್ತಿರುವ ಸಿಲಿಂಡರ್ ಬೆಲೆ ಇದೀಗ ಮೇ ತಿಂಗಳಲ್ಲಿ ಇಳಿಕೆಯಾಗಿದೆ. ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಮೇ ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು ಇಳಿಕೆಯಾಗಿದೆ..? ಎನ್ನುವ ಬಗ್ಗೆ ವಿವರ ಇಲ್ಲಿದೆ.

gas cylinder price down
Image Credit: Original Source

ದೇಶದ ಜನತೆಗೆ ಗುಡ್ ನ್ಯೂಸ್
ದೇಶದ ಜನತೆ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಗ್ಯಾಸ್ ಸಿಲಿಂಡರ್ ಬೆಲೆ ಯಾವಾಗ ಇಳಿಕೆ ಯಾಗುತ್ತದೆ ಎಂದು ಕಾಯುತ್ತಿದ್ದರು. ಸದ್ಯ ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಈ ಮೂಲಕ ದೇಶದ ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಬಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಎಷ್ಟು ಕಡಿಮೆ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಮೇ ಮೊದಲ ದಿನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ತೈಲ ಕಂಪನಿಗಳು ಮೇ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 19 ರೂ. ಕಡಿಮೆ ಮಾಡಿದೆ. IOC ಪ್ರಕಾರ, ಮೇ 1 ರಿಂದ ದೆಹಲಿಯಲ್ಲಿ 19 ಕೆಜಿ ಇಂಡೇನ್ ಎಲ್ಪಿಜಿ ಸಿಲಿಂಡರ್ ರೂ. 1764.50 ರ ಬದಲಿಗೆ ರೂ. 1745.50 ಕ್ಕೆ ಲಭ್ಯವಿರುತ್ತದೆ. ಮಾರ್ಚ್ ನಲ್ಲಿ ಇದು ರೂ. 1795 ಪಡೆಯುತ್ತಿದೆ.

ಕೋಲ್ಕತ್ತಾದಲ್ಲಿ ಈಗ ರೂ. 1879.00 ರ ಬದಲು ರೂ. 1859.00 ಗೆ ಲಭ್ಯವಿದೆ. ಇಲ್ಲಿ ಎಲ್‌ಪಿಜಿ ಬೆಲೆ 20 ರೂಪಾಯಿ ಇಳಿಕೆಯಾಗಿದೆ. ಮುಂಬೈನಲ್ಲಿ ಈಗ 1717.50 ರೂಪಾಯಿ ಬದಲಿಗೆ 1698.50 ರೂಪಾಯಿಗೆ ಲಭ್ಯವಿದೆ. ಚೆನ್ನೈನಲ್ಲಿ, ವಾಣಿಜ್ಯ LPG ಸಿಲಿಂಡರ್ ಈಗ 1930.00 ರೂ. ಬದಲಿಗೆ 1911 ರೂ. ಗಳಲ್ಲಿ ಲಭ್ಯವಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

Join Nadunudi News WhatsApp Group

 

Gas Cylinder price down may 1st
Image Credit: original Source

Join Nadunudi News WhatsApp Group