Students Bag: ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಬ್ಯಾಗ್ ತೂಕದಲ್ಲಿ ಇಳಿಕೆ ಮಾಡಲು ಸರ್ಕರದ ನಿರ್ಧಾರ

ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಹೊಸ ನಿಯಮ ಜಾರಿಗೆ ತಂದ ಶಿಕ್ಷಣ ಸರ್ಕಾರ

Students Bag Weight Decrease: ದಿನಬೆಳಗೆದ್ದು ಶಾಲೆಗೆ ಹೋಗುವ ಮಕ್ಕಳಿಗೆ ತುಂಬ ದೊಡ್ಡ ತಲೆನೋವೆಂದರೆ ಬ್ಯಾಗ್ ಹೊತ್ತು ಹೋಗುವುದು, ಹೌದು ಇಂದಿನ ವಿದ್ಯಾರ್ಥಿಗಳಿಗೆ ಬ್ಯಾಗ್ ಬಹಳ ಹೊರೆ ಆಗಿದ್ದು, ಎಲ್ಲಾ ಪಠ್ಯಪುಸ್ತಕಗಳನ್ನು ಹೊತ್ತೊಗಳೇ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಮಾತ್ರ ವಲ್ಲದೇ ಪೋಷಕರು ಸಹ ಈ ವಿಚಾರವಾಗಿ ಬಹಳ ಚಿಂತೆ ಪಡುವುದನ್ನು ನೋಡಬಹುದು.

ಆದರೆ ಇನ್ನು ಮುಂದೆ ಈ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಒಂದು ಮಹತ್ವದ ಕ್ರಮವನ್ನು ಜಾರಿಗೆ ತಂದಿದೆ ಅದೇನೆಂದರೆ ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಪ್ರತಿ ವಿಷಯವನ್ನು ಸಂಕಲನಾತ್ಮಕ ಮೌಲ್ಯಮಾಪನವಾರು ವಿಭಾಗಿಸಲಾಗುವುದು.

Students Bag Weight Decrease
Image Credit: Bangaloremirror

ವಿದ್ಯಾರ್ಥಿಗಳ ಬ್ಯಾಗ್ ಹೊರೆ ಕುರಿತು ಚರ್ಚೆ

ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಭಾರ ಹೆಚ್ಚಾಗಿರುವ ಕುರಿತು ನಿರ್ದೇಶಕರು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ, ಮಲ್ಲೇಶ್ವರಂ, ಬೆಂಗಳೂರುರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು. ಆಡಳಿತ ಮಂಡಳಿಯಲ್ಲಿ ಹಾಜರಿದ ಸದರಿ ಸಮಿತಿಯ ಅಧ್ಯಕ್ಷರೊಂದಿಗೆ ಆಡಳಿತ ಮಂಡಳಿಯು ಚಿರ್ಚಿಸಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಪ್ರಸ್ತುತ ಇರುವ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯ ಮಾಪನ 1 ಮತ್ತು 2 ಮಾದರಿಯಲ್ಲಿ ಸಿದ್ದಪಡಿಸಿದ್ದಲ್ಲಿ ಇರುವ ಅನುಕೂಲತೆಗಳ ಬಗ್ಗೆ ವರದಿಯನ್ನು ಸಲ್ಲಿಸಿರುವುದಾಗಿ ಆಡಳಿತ ಮಂಡಳಿಗೆ ವಿವರಿಸಿದರು.

ಪಠ್ಯಪುಸ್ತಕಗಳ ಹೊರೆ ಕಡಿಮೆ ಮಾಡುವ ಕುರಿತು ಪ್ರಸ್ಥಾಪನೆ

Join Nadunudi News WhatsApp Group

ಶಾಲಾ ಬ್ಯಾಗ್ ನಲ್ಲಿ ಮಕ್ಕಳು ಕೊಂಡೊಯ್ಯುವ ಪಠ್ಯಪುಸ್ತಕಗಳ ತೂಕ ಕಡಿಮ ಮಾಡುವ ಉದ್ದೇಶದಿಂದ 1 ರಿಂದ 10ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ರೂವಣಾತ್ಮಕ ‘ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಮೌಲ್ಯಮಾಪನವಾರು ವಿಂಗಡಿಸುವ ಕುರಿತು ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು, ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆರವರು ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು ಸಮಿತಿಯು ದಿನಾಂಕ: 06.10.2023 ರಂದು ಸಭೆ ಸೇರಿ ಸರ್ಕಾರಿ ಆದೇಶದಲ್ಲಿ ಆಯಾ ತರಗತಿಗಳಿಗೆ ನಿರ್ಧರಿಸಿರುವ ಶಾಲಾ ಬ್ಯಾಗ್‌ನ ನಿರ್ದಿಷ್ಟ ಸುಮಾರು ಅರ್ಧದಷ್ಟು ತೂಕವು ಪಠ್ಯಪುಸ್ತಕಗಳಾಗಿರುವುದರಿಂದ, ಪಠ್ಯಪುಸ್ತಕಗಳ ತೂಕವನ್ನು ಕಡಿಮೆ ಮಾಡುವ ಕುರಿತು ಚರ್ಚಿಸಲಾಯಿತು.

1 To 10 Standard Students Bag Weight
Image Credit: Arabnews

ಪಠ್ಯಪುಸ್ತಕಗಳ ತೂಕದ ಹೊರೆಯನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ಅನುಸರಿಸಬಹುದು

ಪಠ್ಯಪುಸ್ತಕ ತೂಕವನ್ನು ಅಂದಾಜು 50% ರಷ್ಟು ಕಡಿಮೆ ಮಾಡಲು ಪ್ರತಿ ಪಠ್ಯಪುಸ್ತಕವನ್ನು ಭಾಗ-1 ಮತ್ತು ಭಾಗ-2 ಗಳನ್ನಾಗಿ ವಿಂಗಡಿಸಬಹುದು. 1 ರಿಂದ 10ನೇ ತರಗತಿಗಳ ವಿಷಯವಾರು ಎಲ್ಲಾ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಪ್ರತಿ ವಿಷಯವನ್ನು ಸಂಕಲನಾತ್ಮಕ ಮೌಲ್ಯಮಾಪನವಾರು ವಿಭಾಗಿಸಬಹುದು.

(FAT FA2 SAI ಮತ್ತು FA3 FAT SA2) ಉದಾಹರಣೆಗೆ:-ಯಾವುದಾದರೊಂದು ಪಠ್ಯಪುಸ್ತಕದ FA1 ಮತ್ತು FA2 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SAI ಒಂದು ಪಠ್ಯಪುಸ್ತಕವಾಗಿ ಮುದ್ರಿಸಬಹುದು. ಅದೇ ರೀತಿ FAB ಮತ್ತು FA4 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SA2 ಒಂದು ಪಠ್ಯಪುಸ್ತಕ ಮುದ್ರಿಸಬಹುದು ಆಗ ವರ್ಷಕ್ಕೆ ಎರಡು ಪಠ್ಯ ಪುಸ್ತಕಗಳು ಆಗುತ್ತವೆ. ಮಗುವು ಪಠ್ಯವುಸ್ತಕದ ಭಾಗ-1 ನ್ನು ಮೊದಲ ಅರ್ಧ ವಾರ್ಷಿಕಕ್ಕೆ ಹಾಗೂ ಪಠ್ಯ ಪುಸ್ತಕದ ಭಾಗ-2 ನ್ನು ಎರಡನೇ ಅರ್ಧ ವಾರ್ಷಿಕಕ್ಕೆ ಬಳಕೆ ಮಾಡಬಹುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

Join Nadunudi News WhatsApp Group