10 ರೂಪಾಯಿ ನಾಣ್ಯದಿಂದ 6 ಲಕ್ಷದ ಕಾರ್ ಖರೀದಿಸಿದ ಭೂಪ, ಅಷ್ಟಕ್ಕೂ ಈತ ಮಾಡಿದ್ದೇನು ನೋಡಿ.

ದೇಶದಲ್ಲಿ ಹತ್ತು ರೂಪಾಯಿಯ ನಾಣ್ಯ ಜಾರಿಯಲ್ಲಿ ಇರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಕೆಲವು ಸಮಯಗಳ ಹಿಂದೆ 10 ರೂಪಾಯಿಯ ನಾಣ್ಯ ಚಾಲ್ತಿಯಲ್ಲಿ ಇರುವುದಿಲ್ಲ ಅನ್ನುವ ಸುದ್ದಿ ಸಮಜಾಯಿಕಾ ಜಾಲತಾಣದಲ್ಲಿ ಸಕತ್ ಹರಿದಾಡಿತ್ತು ಮತ್ತು ಅದೇ ರೀತಿಯಲ್ಲಿ ಕೆಲವು ಅಂಗಡಿಯವರು 10 ರೂಪಾಯಿಯ ನಾಣ್ಯವನ್ನ ತೆಗೆದುಕೊಳ್ಳದೆ ಗ್ರಾಹಕರನ್ನ ವಾಪಾಸ್ ಕಳುಹಿಸಿದ ಅದೆಷ್ಟೋ ಘಟನೆಯನ್ನ ನಾವು ನೀವೆಲ್ಲ ನೋಡಿದ್ದೇವೆ. ಇನ್ನು ಅದೇ ರೀತಿಯಲ್ಲಿ 10 ರೂಪಾಯಿಯ ನಾಣ್ಯಕ್ಕೆ ಬೆಲೆ ಇದೆ ಎಂದು ಸರ್ಕಾರ ಎಷ್ಟೇ ಹೇಳಿದರು ಅದನ್ನ ಕೇಳದ ಜನರು 10 ರೂಪಾಯಿಯ ನಾಣ್ಯವನ್ನ ತೆಗೆದುಕೊಳ್ಳುವುದೇ ಬಿಟ್ಟಿದ್ದರು.

ಇನ್ನು ಈಗ ಇಲ್ಲೊಬ್ಬ 10 ರೂಪಾಯಿಯ ನಾಣ್ಯದಿನ 6 ಲಕ್ಷ ರೂಪಾಯಿಯ ಕಾರನ್ನ ಖರೀದಿ ಮಾಡಿದ್ದು ಇದು ಜನರ ಆಶ್ಚರ್ಯ ಕಾರಣವಾಗಿದೆ. ಹಾಗಾದರೆ ಈ ಯುವಕ ಯಾರು ಮತ್ತು ಈತ 10 ರೂಪಾಯಿಯ ನಾಣ್ಯದಿಂದ ಕಾರನ್ನ ಖರೀದಿ ಮಾಡಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು 10 ರೂಪಾಯಿ ಕಾಯಿನ್ ತಗೊಳ್ಳಲ್ಲ ಅಂತ ಎಲ್ಲರೂ ಹೇಳಿದ್ದನ್ನು ಕೇಳಿ ಬೇಸತ್ತ ವ್ಯಕ್ತಿಯೊಬ್ಬ ಅಂತಹ ಕಾಯಿನ್ ಗಳನ್ನೇ ಜೋಡಿಸಿಟ್ಟು 6 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನ ಖರೀದಿಸಿದ್ದಾನೆ. ಹೌದು ತಮಿಳುನಾಡಿನ ಧರ್ಮಪುರಿಯ ವಾಹನ ಡೀಲರ್ ಉದ್ಯೋಗಿ ಆರೂರ್ ಎಂಬಾತ ಹಲವು ತಿಂಗಳ ಕಾಲ 10 ರೂಪಾಯಿ ಕಾಯಿನ್ ಜೋಡಿಸಿಟ್ಟು ಕಾರು ಖರೀದಿಸಿದ್ದಾರೆ.

 10 rupees coin

ಈತ ಹತ್ತು ರೂಪಾಯಿ ನಾಣ್ಯ ಯಾರು ತೆಗೆದುಕೊಳ್ಳುವುದಿಲ್ಲ ಮತ್ತು ಅದು ವ್ಯರ್ಥ ಎಂದು ಮಕ್ಕಳು ಹತ್ತು ರೂಪಾಯಿ ನಾಣ್ಯವನ್ನ ತೆಗೆದುಕೊಂಡು ಆಟ ಆಡುವುದನ್ನ ಗಮನಿಸಿದ ಆರೂರ್ ತಾನು ಈ ನಾಣ್ಯದಿಂದಲೇ ಕಾರು ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಾನೆ. ಇನ್ನು ಅಂದಿನಿಂದ ಹತ್ತು ರೂಪಾಯಿ ನಾಣ್ಯವನ್ನ ಕೂಡಿಡಲು ಮುಂದಾದ ಈತ ಸುಮಾರು 6 ಲಕ್ಷ ರೂಪಾಯಿಯನ್ನ ಶೇಖರಣೆ ಮಾಡುತ್ತಾನೆ.

ಆರಂಭದಲ್ಲಿ ವಾಹನದ ಷೋರೂಮ್ ನವರು ನಾಣ್ಯವನ್ನ ತೆಗೆದುಕೊಂಡು ಕಾರನ್ನ ನೀಡಲು ಒಪ್ಪುವುದಿಲ್ಲ, ಆದರೆ ನಂತರ ಇದರಿಂದ ಸಮಸ್ಯೆ ಆಗುತ್ತದೆ ಎಂದು ತಿಳಿದ ಅವರು ಕಾರು ಕೊಡಲು ಒಪ್ಪುತ್ತಾರೆ. ಕಾರು ಖರೀದಿಸಿದ ನಂತರ ಸಂತಸ ಹಂಚಿಕೊಂಡ ಆರೂರ್, ನಮ್ಮಮ್ಮ ಚಿಕ್ಕ ಅಂಗಡಿ ಇಟ್ಟುಕೊಂಡಿದ್ದಾರೆ ಮತ್ತು ಅವರಿಗೆ ಪ್ರತಿನಿತ್ಯ ಹಲವಾರು 10 ರೂಪಾಯಿ ಕಾಯಿನ್ ಗಳು ಬರುತ್ತಿದ್ದವು, ಆದರೆ ಯಾರೂ ಕೂಡ ವಾಪಸ್ ಪಡೆಯುತ್ತಿರಲಿಲ್ಲ. ಆರ್ ಬಿಐ ಕೂಡ 10 ರೂಪಾಯಿ ನಾಣ್ಯ ವ್ಯರ್ಥ ಅಲ್ಲ ಎಂದು ಹೇಳಿದ್ದರೂ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

Join Nadunudi News WhatsApp Group

 10 rupees coin

Join Nadunudi News WhatsApp Group