1940 Electricity Bill: 1940 ಕರೆಂಟ್ ಬಿಲ್ ಎಷ್ಟಿತ್ತು ಗೊತ್ತಾ…? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಳೆಯ ಬಿಲ್.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 1940 ಕರೆಂಟ್ ಬಿಲ್.

1940 old Current Bill Viral: ಪ್ರಸ್ತುತ ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರು ಆರ್ಥಿಕ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಜನರು ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಹೆಚ್ಚು ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಇನ್ನು ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದಂತೆ ಈಗಿನ ಕಾಲದ ಬಿಲ್ ಗು ಹಿಂದಿನ ಕಾಲದ ಬಿಲ್ ಗು ಹೋಲಿಕೆ ಮಾಡುವುದು ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅನೇಕ ವಿಷಯಗಳು ವೈರಲ್ ಆಗುತ್ತಿದೆ. ಸದ್ಯ 1940 ಕರೆಂಟ್ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾವೀಗ ಈ ಲೇಖನದಲ್ಲಿ 1940 ರ ಕರೆಂಟ್ ಬಿಲ್ ಎಷ್ಟಿತ್ತು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

1940 old Current Bill Virul
Image Credit: Scoopwhoop

1940 ಕರೆಂಟ್ ಬಿಲ್ ಎಷ್ಟಿತ್ತು ಗೊತ್ತಾ…?
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಬಿಲ್ ಬಾರಿ ವೈರಲ್ ಆಗಿದ್ದವು. ಹಿಂದಿನ ಕಾಲದ ಹೋಟೆಲ್ ಬಿಲ್ ಗು ಈಗಿನ ಕಾಲದ ಕೋಟೆಲ್ ಬಿಲ್ ಸಾಕಷ್ಟು ವ್ಯತ್ಯಾಸ ಇತ್ತು. ಸದ್ಯ ಇದೀಗ ಹೋಟೆಲ್ ಬಿಲ್ ನ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಕರೆಂಟ್ ಬಿಲ್ ಫೋಟೋ ವೈರಲ್ ಆಗುತ್ತಿದೆ. ಸ್ವಂತಂತ್ರ್ಯ ಪೂರ್ವದ ವಿದ್ಯುತ್ ಬಿಲ್ ಇದೀಗ ಜನರನ್ನು ಅಚ್ಚರಿಗೊಳಗಾಗಿಸುತ್ತಿದೆ. ನಾವು ಈಗ ಪಾವತಿಸಬೇಕಾದ ಬಿಲ್ ಗು ಈ ಹಿಂದಿನ ಕಾಲದ ಬಿಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಳೆಯ ಬಿಲ್
ಇನ್ನು ಇಂದಿನ ಕರೆಂಟ್ ಬಿಲ್ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಮಿನಿಮಮ್ 1,000 ರಿಂದ 2,000 ರೂ  ವರೆಗೆ ಕರೆಂಟ್ ಬಿಲ್ ಗಳು ಬರುತ್ತವೆ. ಈಗಂತೂ ಬೇಸಿಗೆಗಾಲ ಆರಂಭವಾದ ಕಾರಣ ವಿದ್ಯುತ್ ಗೆ ಹೆಚ್ಚಿನ ಬೇಡಿಕೆ ಇದೆ. ಉಚಿತ ವಿದ್ಯುತ್ ಇದ್ದರು ಕೂಡ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸುವ ಮೂಲಕ ಜನರು ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಇನ್ನು ಪ್ರಸ್ತುತ ವೈರಲ್ ಆಗಿರುವ ಕರೆಂಟ್ ಬಿಲ್ ನಲ್ಲಿ ಅತಿ ಕಡಿಮೆ ದರಗಳನ್ನು ಪಾವತಿಸಲಾಗಿದೆ.

1940 old Current Bill
Image Credit: Scoopwhoop

ಸ್ವಾತಂತ್ರ್ಯ ಪೂರ್ವದ ವಿದ್ಯುತ್ ಬಿಲ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಫೋಟೋದಲ್ಲಿ ಹಿಂದಿನ ಬಿಲ್ ಮೊತ್ತ ನೋಡಿ ಇಂದು ಜನ ಬೆಚ್ಚಿ ಬಿದ್ದಿದ್ದಾರೆ. ಆ ಕಾಲದಲ್ಲಿ ವಿದ್ಯುತ್ ಬಿಲ್ ತುಂಬಾ ಕಡಿಮೆ ಇತ್ತು. ಸದ್ಯ ವೈರಲ್ ಆಗಿರುವ ಬಿಲ್ ಸುಮಾರು 83 ವರ್ಷಗಳ ಹಿಂದಿನ ವಿದ್ಯುತ್ ಬಿಲ್ ಆಗಿದೆ. ಆಗ ಒಂದು ತಿಂಗಳ ವಿದ್ಯುತ್ ಬಳಕೆಯ ಒಟ್ಟು ಬಿಲ್ 5 ರೂಪಾಯಿ. ಈ ರಸೀದಿ ನೋಡಿ ನೆಟಿಜನ್‌ ಗಳು ಅಚ್ಚರಿಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕರೆಂಟ್ ಬಿಲ್ 1940 ಅಕ್ಟೋಬರ್ 15 ರಂದು ಮುದ್ರಿಸಲಾದ ಬಿಲ್ ಆಗಿದೆ.

Join Nadunudi News WhatsApp Group

ಈ ಬಿಲ್ ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾಮ್‌ ವೇ ಕಂಪನಿ ಲಿಮಿಟೆಡ್‌ ಗೆ ಸೇರಿದೆ. ಈ ಹಳೆಯ ಬಿಲ್ ನಲ್ಲಿ 3.10 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ. 5.2 ತೆರಿಗೆ ಸೇರಿದಂತೆ ರೂ. ಬಿಲ್ ಬಂದಿದೆ. ಆ ಕಾಲದ ವಿಶೇಷವೇನಾದರೆ ವಿದ್ಯುತ್ ಬಿಲ್ ಅನ್ನು ಕೈಯಲ್ಲೇ ಬರೆಯಲಾಗುತ್ತಿತ್ತು. ಆದರೆ ಇದೀಗ ತಂತ್ರಜ್ಞಾನಗಳ ಬೆಳವಣಿಗೆಯ ಕಾರಣ ವಿದ್ಯುತ್ ಬಿಲ್ ಮೆಷಿನ್ ಗಳ ಮೂಲಕ ಪ್ರಿಂಟ್ ಆಗುತ್ತಿದೆ. ಇತ್ತೀಚಿಗೆ ಹಿಂದಿನ ಕಾಲದ ಅನೇಕ ವಿಷಯಗಳು ವೈರಲ್ ಆಗುತ್ತಿದ್ದು, ಇದೀಗ ಕರೆಂಟ್ ಬಿಲ್ ಕೂಡ ಈ ಸಾಲಿಗೆ ಸೇರಿಕೊಂಡಿದೆ.

1940 old Current Bill Latest
Image Credit: Lokmat

Join Nadunudi News WhatsApp Group