1947 Gold: 1947 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು, ಅಂದು ಸಂತೆ ಮಾರ್ಕೆಟ್ ನಲ್ಲಿ ಚಿನ್ನ ಮಾರಾಟ ಮಾಡಲಾಗುತ್ತಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಅನ್ನುವುದರ ಬಗ್ಗೆ ಮಾಹಿತಿ.

1947 Gold Price In India: ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಚಿನ್ನ ಬಾರಿ ಅಗ್ಗವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಚಿನ್ನ ಕೈಗೆಟುಕುವ ದರದಲ್ಲಿ ಲಭ್ಯವಿತ್ತು. ಆದರೆ ಪ್ರಸ್ತುತ ಚಿನ್ನದ ದರ ಐತಿಹಾಸಿಕ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆ ಕಳೆದ ವರ್ಷದಿಂದ ಗಣನೀಯವಾಗಿ ಏರಿಕೆಯಾಗುತ್ತಿದೆ. ಆಭರಣ ಖರೀದಿಗೆ ಜನರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.

ಸ್ವಾತಂತ್ರ್ಯ ನಂತರದ ವರ್ಷದಲ್ಲಿ ದುಬಾರಿ ಆಯಿತು ಚಿನ್ನ
ಚಿನ್ನದ ಮೇಲಿನ ಹೂಡಿಕೆ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚಿದ ಕಾರಣ ದಿನದಿಂದ ದಿನಕ್ಕೆ ಚಿನ್ನ ದುಬಾರಿಯಾಗುತ್ತಿದೆ.

Gold became expensive in the year after independence
Image Credit: Oneindia

ಭಾರತದಲ್ಲಿ ಕಳೆದ 75 ವರ್ಷಗಳಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡಿದೆ. ಇನ್ನು ಕಳೆದ ಡಿಸೇಂಬರ್ ನಲ್ಲಿ ಚಿನ್ನದ ಬೆಲೆ 4 ಸಾವಿರ ಗಡಿಯಲ್ಲಿತ್ತು, ಆದರೆ ಕೇವಲ 6 ತಿಂಗಳಲ್ಲಿ 5 ಸಾವಿರ ಗಡಿ ತಲುಪಿದೆ.

1947 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು
1947 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 100 ರೂ. ಗಿಂತಲೂ ಕಡಿಮೆ ಇತ್ತು. ಇದೀಗ 1947 ರಲ್ಲಿ ಚಿನ್ನದ ಬೆಲೆಯ ಬಗ್ಗೆ ವಿವರಗಳನ್ನು ತಿಳಿಯೋಣ. ಇನ್ನು 1947 ರಲ್ಲಿ ಸರಾಸರಿ ಚಿನ್ನದ ಬೆಲೆ ಹತ್ತು ಗ್ರಾಂ ಗೆ ಕೇವಲ 88.62 ರೂ. ಆಗಿತ್ತು. ಆದರೆ ಪ್ರಸ್ತುತ 2023 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 54,350 ರೂ. ಆಗಿದೆ. ಕೇವಲ ರೂಪಾಯಿ ಗಳಲ್ಲಿ ದೊರೆಯುತ್ತಿದ್ದ ಚಿನ್ನ ಇದೀಗ ಕೈಗೆಟುಕದ ದರವನ್ನು ತಲುಪಿದೆ.

Gold became expensive in the year after independence
Image Credit: Zeenews

ದೇಶದಲ್ಲಿ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಜನರ ಆರ್ಥಿಕ ಪರಿಸ್ಥಿತ ತೀರಾ ಹದೆಗೆಟ್ಟಿತ್ತು. ಆಹಾರದ ಕೊರತೆ ಕಡಿಮೆ ಉದ್ಯೋಗಾವಕಾಶದಿಂದಾಗಿ ಜನರು ಚಿನ್ನದ ಮೇಲೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಹೆಚ್ಚುತ್ತಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಸತತ ಏರಿಕೆ ಕಾಣುತ್ತಿದೆ.

Join Nadunudi News WhatsApp Group

Join Nadunudi News WhatsApp Group