Note Ban: ನೋಟುಗಳ ಚಲಾವಣೆ ಬಗ್ಗೆ ಮತ್ತೊಂದು ನಿಯಮ, ಜನಸಾಮಾನ್ಯರಿಗೆ ಸಂಕಷ್ಟ
ಇಂದಿಂದ 2000 ರೂ. ನೋಟುಗಳನ್ನು ಇಲ್ಲಿ ಬಳಸುವಂತಿಲ್ಲ.
Amazon India 2000 Rs Note: ದೇಶದಲ್ಲಿ 2023 ರ ಮೇ 19 ರಂದು RBI 2000 ರೂ. ನೋಟ್ ಬ್ಯಾನ್ ಮಾಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈಗಾಗಲೇ ಆರ್ ಬಿಐ ಹೊಸ 2000 ರೂ ನೋಟುಗಳ ರದ್ದತಿ ಹಾಗು ವಿನಿಮಯದ ಬಗ್ಗೆ ಘೋಷಣೆ ಹೊರಡಿಸಿದೆ. 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆದೇಶವನ್ನು ನೀಡಲಾಗಿದ್ದು, ಜನಸಾಮಾನ್ಯರಿಗೆ ನೋಟು ವಿನಿಮಯ ಹಾಗೂ ಠೇವಣಿ ಮಾಡುವಂತೆ ಸೂಚನೆ ನೀಡಿದೆ.
ನೋಟು ವಿನಿಮಯಕ್ಕೆ ಇನ್ನು ಕೇವಲ 12 ದಿನಗಳು ಬಾಕಿ
ದೇಶದಲ್ಲಿ ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ RBI ಸೆಪ್ಟೆಂಬರ್ ನ ವರೆಗೂ ಕಾಲಾವಕಾಶವನ್ನು ನೀಡಿದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಇನ್ನು ಕೇವಲ 12 ದಿನಗಳು ಮಾತ್ರ 2,000 ರೂ.ನೋಟುಗಳ ವಿನಿಮಯ ಹಾಗೂ ಠೇವಣಿಗೆ ಅವಕಾಸಹವಿದೆ. October 1 ರಿಂದ 2000 ರೂ. ನೋಟುಗಳಿಗೆ ದೇಶದಲ್ಲಿ ಯಾವುದೇ ಮೌಲ್ಯ ಇರುವುದಿಲ್ಲ.
ಇಂದಿಂದ 2000 ರೂ. ನೋಟುಗಳನ್ನು ಇಲ್ಲಿ ಬಳಸುವಂತಿಲ್ಲ
Amazon India 2,000 ರೂ.ಗಳ ನೋಟುಗಳನ್ನು ಸ್ವೀಕರಿಸುವುದನ್ನು ಇಂದಿನಿಂದ ನಿಲ್ಲಿಸುತ್ತದೆ. ಇನ್ನುಮುಂದೆ 2000 ನೋಟುಗಳನ್ನು ಪಾವತಿಗಾಗಿ ಅನುಮತಿಸಿಲ್ಲವಾದರೂ, ಥರ್ಡ್ ಪಾರ್ಟಿ ಕೊರಿಯರ್ ಸೇವೆಗಳು ಅದನ್ನು ಸ್ವೀಕರಿಸಬಹುದು ಎಂದು Amazon ಹೇಳಿಕೊಂಡಿದೆ. Amazon ಇಂಡಿಯಾ RBI ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ ಮೊದಲೇ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ.
ಬ್ಯಾಂಕುಗಳಲ್ಲಿ ನೋಟು ವಿನಿಮಯ ಹಾಗು ಠೇವಣಿಗೆ ಅವಕಾಶಾವಿದೆ
ಇನ್ನೂ ನಿಮ್ಮ ಬಳಿ 2000 ರೂಪಾಯಿಯ ನೋಟು ಇದ್ದರೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೋಟು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಳಬಹುದು. ನೋಟುಗಳನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಲು ಚೀಟಿಯನ್ನು ಪಡೆದು, ಸ್ಲಿಪ್ ನಲ್ಲಿ ಎಷ್ಟು ನೋಟುಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಗೊತ್ತುಪಡಿಸಿದ ಕೌಂಟರ್ಗೆ ಹೋಗಿ ಮತ್ತು ಸ್ಲಿಪ್ನೊಂದಿಗೆ ನಿಮ್ಮ 2,000 ರೂಪಾಯಿ ನೋಟುಗಳನ್ನು ಜಮಾ ಮಾಡಬಹುದಾಗಿದೆ.