Suzuki Swift: ಹೆಚ್ಚು ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್ ಕಾರು ಬಿಡುಗಡೆ, ಬೆಲೆ ಕೂಡ ಬಹಳ ಕಡಿಮೆ.

ಹೆಚ್ಚು ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್ 2023 ರ ಮಾಡೆಲ್ ಬಿಡುಗಡೆ ಆಗಿದೆ.

Maruti Suzuki: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ (Maruti Company) ಇದೀಗ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿ ತನ್ನ ಕಂಪನಿಯ ಕಾರುಗಳ ಮೇಲೆ ರಿಯಾಯಿತಿಯನ್ನು ಕೂಡ ನೀಡುತ್ತಿದೆ. ಇದೀಗ ಹೊಸ ಮಾದರಿಯ ಜನಪ್ರಿಯ ಪ್ರಾಂಕ್ಸ್ ಕಾಂಪ್ಯಾಕ್ಟ್ SUV ಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮಾರುತಿ ಸುಜುಕಿ ತಯಾರಿಯಲ್ಲಿದೆ.

Maruti suzuki 2023
Image Source: HT Auto

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) 
ಮಾರುತಿ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಕರ್ಷಕ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷದಿಂದ 9.03 ಲಕ್ಷ ಆಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನಿಮಗೆ 22 .38 ರಿಂದ 22 .56 kmpl ಮೈಲೇಜ್ ನೀಡುತ್ತದೆ.

ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಆಟೋ ಎಶಿ ಮತ್ತು ಎಲ್ ಇಡಿ ಹೆಡ್ ಲೈಟ್ಸ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Maruti suzuki 2023
Image Source: HT Auto

ಮಾರುತಿ ಸುಜುಕಿ ಡಿಸೈರ್ (Maruti Suzuki Dzire)
ಮಾರುತಿ ಸುಜುಕಿ ಕಂಪನಿ ಮಾರುತಿ ಸುಜುಕಿ ಡಿಸೈರ್ ಅನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಮಾರುತಿ ಸುಜುಕಿ ಡಿಸೈರ್ ನ ಬೆಲೆ 6.51 ಲಕ್ಷದಿಂದ 9.39 ಲಕ್ಷದ ವರೆಗೆ ಇರುತ್ತದೆ. ಮಾರುತಿ ಸುಜುಕಿ ಡಿಸೈರ್ ಕಾರ್ ಸಾಕಷ್ಟು ಫೀಚರ್ ಅನ್ನು ಒಳಗೊಂಡಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ 90 PS ಪವರ್, 113 Nm ಪೀಕ್ ತಾರ್ಕ್ ಉತ್ಪಾದಿಸುತ್ತದೆ. ಅದರ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ. CNG ಕಿಟ್ ಅನ್ನು ಕೂಡ ಹೊಂದಿದೆ. ಮಾರುತಿ ಸುಜುಕಿ ಡಿಸೈರ್ ಕಾರ್ ನಿಮಗೆ 22 .41 ರಿಂದ 22 .61kmpl ಮೈಲೇಜ್ ನೀಡುತ್ತದೆ.

Join Nadunudi News WhatsApp Group

Maruti suzuki 2023
Image Source: HT Auto

Join Nadunudi News WhatsApp Group