Academic Year Rule: ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಇನ್ನೊಂದು ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ಆದೇಶ.

ಶಿಕ್ಷಣ ಇಲಾಖೆಯು ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.

2024-25 Academic Year New Rule: ಸದ್ಯ ಶಾಲಾ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿದ್ದಾರೆ. ಮೇ 29 2024 ರಂದು ಶಾಲೆ ಮರು ಆರಂಭವಾಗಲಿದೆ. ಮೇ 29 ರಿಂದ 2024 -25 ನೇ ವರ್ಷದ ಶೈಕ್ಷಣಿಕ ಸಾಲು ಆರಂಭವಾಗಲಿದೆ.

ಇನ್ನು ಶಿಕ್ಷಣ ಇಲಾಖೆಯು ಈಗಾಗಲೇ 2024 -25 ವರ್ಷದ ಶೈಕ್ಷಣಿಕ ಸಾಲಿನಲ್ಲಿ ಜಾರಿಗೊಳಿಸಬಹುದಾದ ಅನೇಕ ನಿಯಮಗಳ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿದೆ. 2024 -25 ರ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಅನೇಕ ಹೊಸ ಹೊಸ ನಿಯಮಗಳನ್ನು ಪಾಲಿಸುವು ಅಗತ್ಯವಾಗಿದೆ. ಸದ್ಯ ಶಿಕ್ಷಣ ಇಲಾಖೆಯು ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.

2024-25 Academic Year New Rule
Image Credit: Shiksha

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಇನ್ನೊಂದು ಗುಡ್ ನ್ಯೂಸ್
ಕರ್ನಾಟಕ ಪಠ್ಯಪುಸ್ತಕ ಸಂಘವು 2024-25ನೇ ಸಾಲಿನ ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಮತ್ತು ದಿನಚರಿಗಳನ್ನು ಬ್ಲಾಕ್ ಮಟ್ಟದಿಂದ ಶಾಲಾ ಹಂತದವರೆಗೆ ವಿತರಿಸಲು ಸೂಚಿಸಿದೆ. ಈ ಮೂಲಕ ಶಾಲೆ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿಚಾರವಾಗಿ ಸಿಹಿ ಸುದ್ದಿ ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರ ನೀಡಿದ್ದಾರೆ.

ಸರ್ಕಾರದ ಇನ್ನೊಂದು ಆದೇಶ
2024-25ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಮತ್ತು ದಿನಚರಿಗಳ ನಿರ್ವಹಣೆಗೆ ಈಗಾಗಲೇ ಉಲ್ಲೇಖಿಸಲಾದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಲಭ್ಯವಾಗಬೇಕಾಗಿರುವುದರಿಂದ, ಈಗಾಗಲೇ ಬ್ಲಾಕ್ ಹಂತಕ್ಕೆ ಸರಬರಾಜು ಮಾಡಲಾದ ಎಲ್ಲಾ ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಮತ್ತು ದಿನಚರಿಗಳನ್ನು ಆಯಾ ಶಾಲೆಗಳ ಬೇಡಿಕೆಯಂತೆ 13.05.2024 ರಿಂದ ಆಯಾ ಶಾಲೆಗಳಿಗೆ ಸಾಗಿಸಲಾಗುವುದು ಮತ್ತು ಅವುಗಳನ್ನು ನಿಯಮಾನುಸಾರ ವಿತರಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

2024-25 Academic Year
Image Credit: Shiksha

ಪಠ್ಯಪುಸ್ತಕ ಮಾರಾಟ ಆಯಾ ಶಾಲೆಗಳ ಬೇಡಿಕೆಯಂತೆ ಶೇ.10ರಷ್ಟು ಮುಂಗಡವಾಗಿ ಪಾವತಿಸಿದ ಶಾಲೆಗಳು ಶೇ.100ರಷ್ಟು ಹಣವನ್ನು ಪಾವತಿಸಿ ಶೇ.100ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಲು, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಅಲ್ಪಸಂಖ್ಯಾತರ ಇಲಾಖೆಗಳು ಅನುಷ್ಠಾನಗೊಳಿಸಿರುವ ಶಾಲೆಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ಹಾಗೂ ಶೇ. 10 ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ಅನ್ವಯ ಶೇ. 100 ರಷ್ಟು ಹಣ ಪಾವತಿಸಿ ಖರೀದಿಸಲು ಕೋರಿದ್ದಲ್ಲಿ ಅಂತಹ ಖಾಸಗಿ ಶಾಲೆಗಳಿಗೆ ಜೇಷ್ಠತೆ ಆಧಾರದ ಮೇಲೆ ಪಠ್ಯ ಪುಸ್ತಕಗಳನ್ನು ವಿತರಿಸವು ತಿಳಿಸಿದ್ದಾರೆ.

Join Nadunudi News WhatsApp Group

New Academic Year Rule
Image Credit: Careers360

Join Nadunudi News WhatsApp Group