Best Cars: ಈಗ ಬಡವರು ಕೂಡ ಕಾರ್ ಖರೀದಿಸಬಹುದು, ಬೈಕ್ ನಂತೆ ಮೈಲೇಜ್ ಕೊಡುತ್ತೆ ಈ ಅಗ್ಗದ ಕಾರ್.

ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಬೆಲೆಯ ಕಾರ್ ಗಳ ಬಗ್ಗೆ ಮಾಹಿತಿ

2024 Best Budget Car: ಸದ್ಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದ್ದು, ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಅಗ್ಗದ ಬೆಲೆಯ ಕಾರ್ ಗಳು ಲಭ್ಯವಿದೆ.

ನೀವು ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ಮಾರುಕಟ್ಟೆಯಲ್ಲಿ ನಿಮಗಾಗಿ ಉತ್ತಮ ಬಜೆಟ್ ನ ಕಾರ್ ಗಳು ಸಾಕಷ್ಟಿವೆ. ನಿಮ್ಮ ಬಳಿ ಹೊಸ ಕಾರ್ ಖರೀದಿಗೆ ಆರ್ಥಿಕ ಸಮಸ್ಯೆ ಎದುರಾದರೆ ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನೂ ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು. ಇದೀಗ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಬೆಲೆಯ ಕಾರ್ ಗಳ ಬಗ್ಗೆ ಮಾಹಿತಿ ತಿಳಿಯೋಣ.

Maruti Suzuki Alto K10 Price
Image Credit: Zigwheels

ಬೈಕ್ ನಂತೆ ಮೈಲೇಜ್ ಕೊಡುತ್ತೆ ಈ ಅಗ್ಗದ ಕಾರ್
Maruti Suzuki Alto
ಇನ್ನು Maruti Suzuki Alto ಮಾದರಿಯು ಮಾರುಕಟ್ಟೆಯಲ್ಲಿ 3.99 ರಿಂದ 5.96 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. Maruti Suzuki Alto ಮಾದರಿಯು LXI, VXI, VXI ಪ್ಲಸ್ ಸೇರಿದಂತೆ 4 ರೂಪಾಂತರಗಳಲ್ಲಿ ಲಭ್ಯವಿದೆ. ಆಲ್ಟೊ k10 ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. Maruti Suzuki Alto ಮಾದರಿಯು ಪೆಟ್ರೋಲ್ ರೂಪಾಂತರದಲ್ಲಿ 24 ಕಿಲೋಮೀಟರ್ ಮೈಲೇಜ್ ನೀಡಿದರೆ, CNG ರೂಪಾಂತರವು 33 ಕಿಲೋಮೀಟರ್ ಮೈಲೇಜ್ ನೀಡಲಿದೆ.

Maruti Suzuki Swift 2024
Image Credit: News 24

Maruti Suzuki Swift 2024
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಪ್ರತಿ ಲೀಟರ್ಗೆ ಬರೋಬ್ಬರಿ 20 ರಿಂದ 24 ಕಿಲೋಮೀಟರ್ ಮೈಲೇಜ್ ನೀಡಲಿದ್ದು, CNG ಮಾದ್ರಿಯು 30 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ನೂತನ Swift ಮಾದರಿ ಐದು ಆಸನಗಳ ಕಾರಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 5 .99 ಲಕ್ಷದಿಂದ 9 .03 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Hyundai i20 Price
Image Credit: Motor1

Hyundai i20
ಹ್ಯುಂಡೈ i20 ಫೇಸ್ ಲಿಫ್ಟ್ ಕಾರ್ ನಲ್ಲಿ ಎರಡು ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ನ್ಯಾಚುರಲ್ ಆಸ್ಪರರ್ಡ್ ಎಂಜಿನ್ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇನ್ನು 1 .2 ಲೀಟರ್ ನ್ಯಾಚುರಲ್ ಆಸ್ಪರರ್ಡ್ಎಂಜಿನ್ 83 bhp ಪವರ್ ಮತ್ತು 114 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1 .0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 bhp ಪವರ್ ಮತ್ತು 172 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಈ ಎಂಜಿನ್ ಪ್ರತಿ ಲೀಟರ್ ಗೆ 16 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹ್ಯುಂಡೈ i20 ಫೇಸ್ ಲಿಫ್ಟ್ ಕಾರ್ ನ ನವೀಕರಿಸಿದ ಆವೃತ್ತಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟಿವಿಟೀ ಕಾರ್ ಟೆಕ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group