2024 Budget: ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ಏನೇನು ಲಾಭ ಸಿಗಲಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈ ಬಾರಿಯ ಬಜೆಟ್ ಮಂಡನೆಯ ವೇಳೆ ರೈತರಿಗೆ ಯಾವ ಯಾವ ಲಾಭ ಸಿಗಲಿದೆ..?

2024 Budget Update: ಸದ್ಯ ಕೇಂದ್ರ ಸರ್ಕಾರಬ್ 2024 ರಲ್ಲಿ ಸಾಕಷ್ಟು ಬದಲಾವಣೆಯನ್ನು ತರಲು ಬಜೆಟ್ ಘೋಷಣೆಗಾಗಿ ಕಾಯುತ್ತಿದೆ. ಸತತ ಆರನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು 2024 ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಸಾಕಷ್ಟು ಘೋಷಣೆ ಆಗಲಿದೆ. ಸದ್ಯ ಕೇಂದ್ರದಿಂದ ದೇಶದ ಎಲ್ಲಾ ರೈತರಿಗೆ ಬಜೆಟ್ ನಲ್ಲಿ ಮಹತ್ವದ ಘೋಷಣೆ ಹೊರಬೀಳಲಿದೆ. ಈ ಬಾರಿಯ ಬಜೆಟ್ ಮಂಡನೆಯ ವೇಳೆ ರೈತರಿಗೆ ಯಾವ ಯಾವ ಲಾಭ ಸಿಗಲಿದೆ..? ಎನ್ನುವ ಬಗ್ಗೆ ತಿಳಿಯೋಣ. 
Pradhan Mantri Kisan Amount Hike
Image Credit: Cnbctv18
ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ಏನೇನು ಲಾಭ ಸಿಗಲಿದೆ…? 
•ಕಿಸಾನ್ ಸಮ್ಮಾನ್ ನಿಧಿಯ ಮೊತ್ತ ಹೆಚ್ಚಳ 
Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇದೀಗ Lokasabha Election 2024  ಮುನ್ನ ಕೇಂದ್ರ ಸರ್ಕಾರ PM Kisan ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಕಿಸಾನ್ ಯೋಜನೆಯ ಹಣ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ.
Kisan ಯೋಜನೆಯಡಿ ರೈತರ ಖಾತೆಗೆ ಈವರೆಗೆ 6000 ರೂ ಹಣ ಜಮಾ ಆಗುತ್ತಿತ್ತು. ಆದರೆ ಸರ್ಕಾರ ಇದೀಗ ಹಣವನ್ನು ಹೆಚ್ಚಿಸಲು ನಿರ್ಧರಿಸಿದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ PM Kisan ಯೋಜನೆಯ ಅಡಿಯಲ್ಲಿ ವರ್ಷಕ್ಕೆ 6000 ರೂಪಾಯಿ ಬದಲಾಗಿ ಇನ್ನುಮುಂದೆ 8000 ರೂಪಾಯಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2024 ರ ಬಜೆಟ್ ಮಂಡನೆಯ ವೇಳೆ ಇದರ ಬಗ್ಗೆ ಘೋಷಣೆ ಆಗಲಿದೆ.
Mahatma Gandhi Gramina Udyog Khatri Yojana
Image Credit: Original Source
•ಪ್ರಧಾನ್ ಮಂತ್ರಿ MGNREGS ಮೊತ್ತ ಹೆಚ್ಚಳ 
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (Mahatma Gandhi National Rural Employment Guarantee Scheme) ಅಡಿಯಲ್ಲಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಲಾಗಿದೆ. 2024 ರ ಬಜೆಟ್ ಮಂಡನೆಯ ವೇಳೆ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡಲಾಗುವ ಮೊತ್ತ ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು ಈ ಹೆಚ್ಚಳವು 2024-25 ರ ಹಣಕಾಸು ವರ್ಷಕ್ಕೆ ಅನ್ವಯಿಸುತ್ತದೆ. ಈ ಘೋಷಣೆಯಿಂದ MGNRGA ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆದಾಯ ಹೆಚ್ಚಳವಾಗಲಿದೆ.

Join Nadunudi News WhatsApp Group