Maruti Swift: ದಾಖಲೆಯ ಬುಕಿಂಗ್ ಕಂಡ ಹೊಸ ಸ್ವಿಫ್ಟ್ ಕಾರ್, ಬೇಡಿಕೆ ಕಳೆದುಕೊಂಡ ವ್ಯಾಗನಾರ್

ಹೊಸ ಸ್ವಿಫ್ಟ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ವಾನಗರ್ ಕಾರ್

Maruti Swift 2024 Special Feature: ಪ್ರಸ್ತುತ ಮಾರುಕಟ್ಟೆಯಲ್ಲಿ Maruti Swift ಮಾದರಿಗೆ ಬೇಡಿಕೆ ಜೋರಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳಿರುವ Swift ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿದೆ. ಮೇ 9 ರಂದು ಮಾರುತಿ ಕಂಪನಿಯು ತನ್ನ ಹೊಚ್ಚ ಹೊಸ ಆಕರ್ಷಕ ಡಿಸೈನ್ ನ Swift 4th Gen ಅನ್ನು ಲಾಂಚ್ ಮಾಡಿದೆ.

ಕಂಪನಿಯು ತನ್ನ ಸ್ವಿಫ್ಟ್ ನ ಬುಕಿಂಗ್ ಅನ್ನು ಕೂಡ ಆರಂಭಿಸಿದೆ. ಸ್ವಿಫ್ಟ್ ಮಾದರಿಯ ಬೆಲೆ, ಮೈಲೇಜ್, ಫೀಚರ್ಸ್ ಸೇರಿದಂತೆ ಎಲ್ಲ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಸ್ವಿಫ್ಟ್ ಮಾದರಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆ ವ್ಯಾಗನಾರ್ ಬೇಡಿಕೆ ಕಡಿಮೆ ಆಗಿದೆ ಎನ್ನಬಹುದು.

new maruti suzuki swift 2024
Image Credit: Original Source

ದಾಖಲೆಯ ಬುಕಿಂಗ್ ಕಂಡ ಹೊಸ ಸ್ವಿಫ್ಟ್ ಕಾರ್
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ Swift ಮಾದರಿ ದಾಖಲೆಯ ಬುಕಿಂಗ್ ಕಾಣುತ್ತಿದೆ. ಬಿಡುಗಡೆಗೊಂಡ ಕೆಲವೇ ಒಂದು ತಿಂಗಳಲ್ಲಿ ಹೆಚ್ಚು ಬುಕಿಂಗ್ ಆದ ಕಾರ್ ಆಗಿ ಸ್ವಿಫ್ಟ್ ಗುರುತಿಸಿಕೊಂಡಿದೆ.  ಇನ್ನು 2024 ರ ಮಾರುತಿ ಸುಜುಕಿ ಸ್ವಿಫ್ಟ್ ಹೊಸ Z- ಸರಣಿಯ ಪೆಟ್ರೋಲ್ ಎಂಜಿನ್ ಮತ್ತು ಫ್ರಾಂಕ್ಸ್-ಪ್ರೇರಿತ ಒಳಾಂಗಣವನ್ನು ಗಮನಾರ್ಹವಾಗಿ ಸುಧಾರಿತ ವಿನ್ಯಾಸದೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಹೊಸ ಎಂಜಿನ್ 3-ಸಿಲಿಂಡರ್ ಘಟಕವಾಗಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಲಭ್ಯವಿರುತ್ತದೆ.

ಇನ್ನು ಹೊಸ ಸ್ವಿಫ್ಟ್ 5,700rpm ನಲ್ಲಿ 81.6 PS ಮತ್ತು 4,300rpm ನಲ್ಲಿ 112Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸುಜುಕಿಯ Z-ಸರಣಿಯ ಗ್ಯಾಸೋಲಿನ್ ಎಂಜಿನ್ 25.72 kmpl ಮೈಲೇಜ್ ನೀಡುವ ನಿರೀಕ್ಷೆಯಿದೆ. ಕಾರಿನ ಮುಂಭಾಗವು ನವೀನ ಎಲ್ಇಡಿ ಹೆಡ್ಲೈಟ್ ಗಳು, ಎಲ್-ಆಕಾರದ ಎಲ್ಇಡಿ DLSR ಗಳು ಮತ್ತು ಸೂಚಕಗಳಲ್ಲಿ ಹ್ಯಾಲೊಜೆನ್ ಬಲ್ಬ್ ಗಳನ್ನೂ ಒಳಗೊಂಡಿದೆ. ಗ್ರಿಲ್ ಮೇಲ್ಭಾಗದಲ್ಲಿ ‘ಸುಜುಕಿ’ ಲೋಗೋವನ್ನು ಪಡೆಯುತ್ತದೆ ಮತ್ತು LED ಟೈಲ್ ಲೈಟ್ ಗಳನ್ನು ಪಡೆಯುತ್ತದೆ. ಈ ಕಾರಿನ ಸೈಡ್ ಡಿಸೈನ್ ಅತ್ಯುತ್ತಮವಾಗಿದೆ.

maruti suzuki swift 2024 model price and features
Image Credit: Original Source

ಬೇಡಿಕೆ ಕಳೆದುಕೊಂಡ ವ್ಯಾಗನಾರ್
ಸ್ವಿಫ್ಟ್ ಮಾದರಿ 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಹಿಂದಿನ ಬಾಗಿಲುಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹ್ಯಾಂಡಲ್‌ ಗಳನ್ನು ಪಡೆಯುತ್ತದೆ. ಹಿಂಭಾಗವು ಸಿ-ಆಕಾರದLED ಟೈಲ್ ದೀಪಗಳೊಂದಿಗೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಒಳಭಾಗದಲ್ಲಿಯೂ ಸಹ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ ಬ್ಯಾಕ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ಕಾರಿನಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಬಹುದು.

Join Nadunudi News WhatsApp Group

ಇದು ಹಳೆಯ ಮಾದರಿಯಂತೆಯೇ ಬೂಟ್ ಸ್ಪೇಸ್ ಅನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ ಡ್ಯಾಶ್‌ ಬೋರ್ಡ್ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ ಮೆಂಟ್ ಸ್ಕ್ರೀನ್ ಮತ್ತು ಜಬರ್ದಾಸ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವುದನ್ನು ಕಾಣಬಹುದು. ಹೊಸ ಸ್ವಿಫ್ಟ್ ಆರು ಏರ್‌ ಬ್ಯಾಗ್‌ ಗಳನ್ನು ಪ್ರಮಾಣಿತವಾಗಿ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹತ್ತಾರು ಸೇಫ್ಟಿ ಫೀಚರ್ ಅನ್ನು ಕಂಪನಿಯು ನೀಡಿದೆ. ಅತ್ಯಾಕರ್ಷಕ ಐಷಾರಾಮಿ ಫೀಚರ್ ಹೊಂದಿರುವ ಸ್ವಿಫ್ಟ್ ಮಾರುಕಟ್ಟೆಯಲ್ಲಿ ವ್ಯಾಗನಾರ್ ಬೇಡಿಕೆಯನ್ನು ಕಡಿಮೆ ಮಾಡುತ್ತಿದೆ. 2024 ರಲ್ಲಿ ಹೊಸ ಖರಿದಿಸುವ ಯೋಜನೆ ಹಾಕಿಕೊಂಡ ಬಹುತೇಕ ಜನರು ಸ್ವಿಫ್ಟ್ ಅನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

maruti susuzki swift car 2024 price and mileage details
Image Credit: Original Source

Join Nadunudi News WhatsApp Group