Gold Rate: ಜುಲೈ ಮೂರನೇ ದಿನ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಗೆ ಇದು ಉತ್ತಮ ಸಮಯ.

ಚಿನ್ನದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ.

Gold Price Decrease In July: ಇದೀಗ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಲಭಿಸಿದೆ. ಜುಲೈ ಮೊದಲ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಎರಡನೇ ದಿನ ಅದೇ ಬೆಲೆಯಲ್ಲಿ ಸ್ಥಿರತೆ ಕಂಡು ಕೊಂಡಿತ್ತು.

ಇದೀಗ ಮೂರನೇ ದಿನ ಚಿನ್ನದ ಬೆಲೆ (Gold Price) ಯಲ್ಲಿ ಇಳಿಕೆ ಕಂಡಿದೆ. ಇನ್ನು ಮುಂದಿನ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಅಧಿಕ ಮಟ್ಟದ ಏರಿಕೆ ಆಗಬಹುದು. ಆದ್ದರಿಂದ ಇಂದು ಚಿನ್ನ ಖರೀದಿಗೆ ಉತ್ತಮ ಸಮಯವಾಗಿದೆ.

ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆ (Gold price down) 
ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಹತ್ತು ಗ್ರಾಂ ಚಿನ್ನದಲ್ಲಿ 100 ರೂ ಇಳಿಕೆಯಾಗಿದೆ. ಇದು ಚಿನ್ನ ಖರೀದಿಗೆ ಉತ್ತಮ ಸಮಯವಾಗಿದೆ. ಇನ್ನು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ತಿಳಿಯೋಣ.

22 and 24 carat gold price down
Image Credit: News18

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5,405 ರೂ. ಆಗಿದೆ. ನಿನ್ನೆಗಿಂತ ಇಂದು 10 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 43,320 ರೂ. ಇದ್ದು ಇಂದು 43,240 ರೂ. ಆಗಿದೆ. ಎಂಟು ಗ್ರಾಂ ಚಿನ್ನದಲ್ಲಿ ಇಂದು 80 ರೂ. ಇಳಿಕೆಯಾಗಿದೆ.

ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 54,150 ಇದ್ದು ಇಂದು 54,050 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 100 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,41,500 ಇದ್ದು ಇಂದು 5,40,500 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,000 ರೂ. ಇಳಿಕೆಯಾಗಿದೆ.

Join Nadunudi News WhatsApp Group

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಒಂದು ಗ್ರಾಂ ಚಿನ್ನದ ಬೆಲೆ ಇಂದು 5896 ರೂ. ಆಗಿದೆ. ನಿನ್ನೆಗಿಂತ ಇಂದು 11 ರೂ ಕಡಿಮೆಯಾಗಿದೆ. ಎಂಟು ಗ್ರಾಂ ಚಿನ್ನದ ಬೆಲೆ ನಿನ್ನೆ 47,256 ಇದ್ದು, ಇಂದು 47,168 ರೂ. ಆಗಿದೆ.

22 and 24 carat gold price down
Image Credit: Pinterest

ಎಂಟು ಗ್ರಾಂ ಚಿನ್ನದಲ್ಲಿ ಇಂದು 88 ರೂ. ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ ನಿನ್ನೆ 59070 ಇದ್ದು, ಇಂದು 58960 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು 110 ರೂ.ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನದ ಬೆಲೆ ನಿನ್ನೆ 5,90,700 ಇದ್ದು, ಇಂದು 5,89,600 ರೂ. ಆಗಿದೆ. ನೂರು ಗ್ರಾಂ ಚಿನ್ನದಲ್ಲಿ ಇಂದು 1,100 ರೂ. ಇಳಿಕೆಯಾಗಿದೆ.

Join Nadunudi News WhatsApp Group