Gold Rate: ಸತತ ಎರಡನೆಯ ದಿನವೂ ಕೂಡ ಇಳಿಕೆಯಾದ ಚಿನ್ನದ ಬೆಲೆ, ಚಿನ್ನದ ಖರೀದಿಗೆ ಇದು ಬೆಸ್ಟ್ ಟೈಮ್

ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ, ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್

25th January Gold Rate: ದೇಶದಲ್ಲಿ ಚಿನ್ನದ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಇಳಿಕೆಯಾದರೆ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಪ್ರಸ್ತುತ ದೇಶದಲ್ಲಿ 2023 ರಲ್ಲಿ ಚಿನ್ನದ ಬೆಲೆ ಬಹುತೇಕ ಏರಿಕೆ ಕಾಣುತ್ತ ಬಂದಿದೆ. ಒಂದು ತಿಂಗಳಿನ ಲೆಕ್ಕಾಚಾರ ಹೇಳುವುದಾದರೆ, ಚಿನ್ನದ ಬೆಲೆ ತಿಂಗಳಿನಲ್ಲಿ ಇಳಿಕೆಯಾಗಿದ್ದಕ್ಕಿಂತ ಹೆಚ್ಚು ದಿನ ಏರಿಕೆ ಕಾಣುತ್ತಿತ್ತು.

Gold Price Down In India
Image Credit: Hamariweb

ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ಬೆಲೆ ಇಳಿಕೆ
ಆದರೆ ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆಯ ಏರಿಕೆ ಮತ್ತು ಇಳಿಕೆ ಬದಲಾಗಿದೆ. ಹೊಸ ತಿಂಗಳ ಆರಂಭದಿಂದ ಚಿನ್ನದ ಬೆಲೆಯಲ್ಲಿ ಏರಿಕೆಯ ಪ್ರಮಾಣಕ್ಕಿಂತ ಇಳಿಕೆಯ ಪ್ರಮಾಣವೇ ಹೆಚ್ಚಾಗಿದೆ ಎನ್ನಬಹುದು. ಡಿಸೆಂಬರ್ ಕೊನೆಯ ದಿನದಲ್ಲಿ 58,550 ರೂ. ಇದ್ದ ಚಿನ್ನದ ಬೆಲೆ 2024 ರ ಜನವರಿಯಲ್ಲಿ ಸತತ ಇಳಿಕೆಯೊಂದಿಗೆ ಇಂದಿಗೆ ಭರ್ಜರಿ 850 ರೂ. ಗಳ ಇಳಿಕೆಯನ್ನು ಕಂಡಿದೆ. ಇನ್ನು ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಇಂದು ಮತ್ತೆ ಚಿನ್ನದ ಬೆಲೆ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ನಿನ್ನೆ 5,775 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 5 ರೂ. ಇಳಿಕೆಯಾಗುವ ಮೂಲಕ 5,770 ರೂ. ತಲುಪಿದೆ.

•ನಿನ್ನೆ 46,200 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 50 ರೂ. ಇಳಿಕೆಯಾಗುವ ಮೂಲಕ 46,160 ರೂ. ತಲುಪಿದೆ.

•ನಿನ್ನೆ 57,750 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 40 ರೂ. ಇಳಿಕೆಯಾಗುವ ಮೂಲಕ 57,700 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 5,77,500 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 5,00 ರೂ. ಇಳಿಕೆಯಾಗುವ ಮೂಲಕ 5,77,000 ರೂ. ತಲುಪಿದೆ.

22 And 24 Carat Gold Rate Today
Image Credit: News9 Live

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಎಷ್ಟು ವ್ಯತ್ಯಾಸವಾಗಿದೆ..?
•ನಿನ್ನೆ 6,300 ರೂ. ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಇಂದು 5 ರೂ. ಇಳಿಕೆಯಾಗುವ ಮೂಲಕ 6,295 ರೂ. ತಲುಪಿದೆ.

•ನಿನ್ನೆ 50,400 ರೂ. ಇದ್ದ ಎಂಟು ಗ್ರಾಂ ಚಿನ್ನದ ಬೆಲೆ ಇಂದು 40 ರೂ. ಇಳಿಕೆಯಾಗುವ ಮೂಲಕ 50,360 ರೂ. ತಲುಪಿದೆ.

•ನಿನ್ನೆ 63,000 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಇಂದು 50 ರೂ. ಇಳಿಕೆಯಾಗುವ ಮೂಲಕ 62,950 ರೂ. ತಲುಪಿದೆ.

•ನಿನ್ನೆ 6,30,000 ರೂ. ಇದ್ದ ನೂರು ಗ್ರಾಂ ಚಿನ್ನದ ಬೆಲೆ ಇಂದು 5,00 ರೂ. ಇಳಿಕೆಯಾಗುವ ಮೂಲಕ 6,29,500 ರೂ. ತಲುಪಿದೆ.

Join Nadunudi News WhatsApp Group