SIM Card Inactive: ಇಂತಹ ಜನರ ಸಿಮ್ ಕಾರ್ಡ್ ರದ್ದು, ಕೇಂದ್ರ ಸರ್ಕಾರದಿಂದ ರಾತ್ರೋರಾತ್ರಿ ಹೊಸ ನಿರ್ಧಾರ

ದೇಶದಲ್ಲಿ 3.2 ಲಕ್ಷ ಸಿಮ್ ಕಾರ್ಡ್ ಗಳು ನಿಷ್ಕ್ರಿಯ, ಕೇಂದ್ರ ಆದೇಶ

3.2 lakh SIM Card Inactive In India: ದೇಶದಲ್ಲಿ ಹೆಚ್ಚುತ್ತಿರುವ ವಂಚನೆಯನ್ನು ತಡೆಯಲು ಸರ್ಕಾರ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇತ್ತೀಚೆಗಂತೂ Cyber Crime ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಒಂದು ರೀತಿಯ ವಂಚನೆಗೆ ಸರ್ಕಾರ ಬ್ರೇಕ್ ಹಾಕಿದರೆ ಇನ್ನೊಂದೆಡೆ ಮತ್ತೊಂದು ವಿಧಾನದಲ್ಲಿ ವಂಚನೆ ಮಾಡಲು ವಂಚರು ಸಿದ್ಧರಾಗುತ್ತಾರೆ.

ಈ ನಿಟ್ಟಿನಲ್ಲಿ ಸರ್ಕಾರ Sim Card Purchase ಮಾಡುವವರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಸರ್ಕಾರದ ನಿಯಮಾನುಸಾರ ಸಿಮ್ ಖರೀದಿ ಮಾಡಬೇಕಿದೆ. ಸದ್ಯ ಕೇಂದ್ರ ಸರ್ಕಾರ ಸೈಬರ್ ಹಗರಣದ ವಿರುದ್ಧ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಲಕ್ಷ ಲಕ್ಷ ಸಿಮ್ ಗಳನ್ನೂ ಬಂದ್ ಮಾಡಿದೆ.

SIM Card Inactive
Image Credit: Businessleague

ಸೈಬರ್ ಹಗರಣದ ವಿರುದ್ಧ ಕೇಂದ್ರ ಸರಕಾರದ ಮೊದಲ ಹೆಜ್ಜೆ
ಇತ್ತೀಚಿಗೆ ಜನರು ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸಿದ್ದು, ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇನ್ನು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಈಗಾಗಲೇ ಹೊಸ ನಿಯಮದ ಪ್ರಕಾರ ತಮ್ಮ KYC ಅನ್ನು ಮಾಡಬೇಕಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

3.2 lakh SIM Card Inactive In India
Image Credit: Hickmous

ದೇಶದಲ್ಲಿ 3.2 ಲಕ್ಷ ಸಿಮ್ ಕಾರ್ಡ್ ಗಳು ನಿಷ್ಕ್ರಿಯ
ಹೆಚ್ಚುತ್ತಿರುವ ನಕಲಿ ಸಿಮ್ ಗಳ ಬಳಕೆಯನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ, ಮಾರಾಟಗಾರರು ಪೂರ್ವ ಸಕ್ರಿಯಗೊಳಿಸಿದ ಸಿಮ್ ಗಳನ್ನೂ ಇತರರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

DoT ನ ಹೊಸ ನಿಯಮಗಳ ಪ್ರಕಾರ, ಕಾರ್ಪೊರೇಟ್ ID ಸಂಖ್ಯೆ ಅಥವಾ CIN ಸಂಖ್ಯೆಯನ್ನು ಪ್ರತಿ SIM ಕಾರ್ಡ್ ಅಂಗಡಿಗೆ ನೀಡಲಾಗುತ್ತದೆ. ಈ ಸಂಖ್ಯೆ ಇಲ್ಲದೆ ಯಾರು ಕೊಡ ಸಿಮ್ ಅನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಐಡಿ ಇಲ್ಲದೆ ಸಿಮ್ ಕಾರ್ಡ್ ಮಾರಾಟವಾದರೆ ಅಂತಹ ಐಡಿ ಯನ್ನು ನಿರ್ಬಂಧಿಸಲಾಗುತ್ತದೆ. ಅಂತಹ 3 .2 ಲಕ್ಷ ಸಿಮ್ ಕಾರ್ಡ್ ಗಳನ್ನೂ ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ದೇಶದಲ್ಲಿ ದಿಢೀರ್ 3 .2 ಲಕ್ಷ ಸಿಮ್ ಕಾರ್ಡ್ ಗಳು ನಿಷ್ಕ್ರಿಯವಾಗಿದೆ.

Join Nadunudi News WhatsApp Group