3D Printing: ಇನ್ನುಮುಂದೆ ಮನೆ ಕಟ್ಟಡ ಕಟ್ಟಲು ಇಟ್ಟಿಗೆ ಮತ್ತು ಕಲ್ಲು ಬೇಕಾಗಿಲ್ಲ, ಬಂತು ಹೊಸ ತಂತ್ರಜ್ಞಾನ.

ಇನ್ನುಮುಂದೆ ಇಟ್ಟಿಗೆ ಮತ್ತು ಕಲ್ಲು ಇಲ್ಲದೆ ಮನೆ ಮತ್ತು ಕಟ್ಟಡ ನಿರ್ಮಾಣ ಮಾಡಬಹುದು.

3D Printing Technology: ಇತ್ತೀಚಿಗೆ ತಂತ್ರಜ್ಞಾನಗಳ ಮೂಲಕ ಹೊಸ ಹೊಸ ಅವಿಷ್ಕಾರವನು ಕಂಡುಹಿಡಿಯಲಾಗುತ್ತಿದೆ. ತಂತ್ರಜ್ಞಾನಗಳ ಮೂಲಕ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸಗಳನ್ನು ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದಾಗಿದೆ. ಸಾಮಾನ್ಯವಾಗಿ ಮನೆ ಅಥವಾ ಯಾವುದೇ ಕಟ್ಟಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುವುದಂತೂ ನಿಜ.

ಸರಿಸುಮಾರು 1000 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲು ಸುಮಾರು 12 ತಿಂಗಳು ಬೇಕಾಗಬಹುದು. ಆದರೆ ಸದ್ಯ ತಂತ್ರಜ್ಞಾನದ ಸಹಾಯದಿಂದ ಒಂದು ವರ್ಷದಲ್ಲಿ ನಿರ್ಮಿಸ ಬೇಕಾದ ಕಟ್ಟಡವನ್ನು ಕೇವಲ 44 ದಿನಗಳಲ್ಲಿ ನಿರ್ಮಿಸಬಹುದಾಗಿದೆ. ಇನ್ನುಮುಂದೆ ಮನೆಗಳನ್ನು ಇಟ್ಟಿಗೆ, ಕಲ್ಲು ಇಲ್ಲದೆ ನಿರ್ಮಾಣ ಮಾಡುವಂತೆ ಹೊಸ ಆವಿಷ್ಕಾರವನ್ನು ಕಂಡು ಹಿಡಿಯಲಾಗಿದೆ.

3D Printing Technology latest update
Image Credit: Archdaily

3D Printing Technology
ಸದ್ಯ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರು ಬೆಂಗಳೂರಿನಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಮೊದಲ ಅಂಚೆ ಕಚೇರಿಯನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದಾರೆ. ಈ ಹೊಸ ಅಂಚೆ ಕಚೇರಿಯನ್ನು 3D Printing ಮೂಲಕ ಕೇವಲ 44 ದಿನಗಳಲ್ಲಿ ನಿರ್ಮಿಸಲಾಗಿದೆ. ಈ ಅಂಚೆ ಕಚೇರಿಯನ್ನು ವಿಭಿನ್ನವಾಗಿ ನಿರ್ಮಿಸಲಾಗಿದೆ. ಇದೀಗ ಸಾಮಾನ್ಯ ನಿರ್ಮಾಣಕ್ಕೆ ಹೋಲಿಸಿದರೆ ಈ 3D Printing ನಲ್ಲಿ ಕಟ್ಟಡ ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ಹಾಗೂ ಬಾಳಿಕೆಯ ಗುಣಮಟ್ಟ ಹೇಗಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

ಇನ್ನುಮುಂದೆ ಕಟ್ಟಡಗಳನ್ನು ಇಟ್ಟಿಗೆ, ಕಲ್ಲುಗಳಿಲ್ಲದೆ ನಿರ್ಮಿಸಬಹುದು
ಇನ್ನು 3D Printing Technology ಎಂದರೆ ಪ್ರಿಂಟರ್‌ ಗೆ ಸಂಬಂಧಿಸಿರುತ್ತದೆ ಎಂದು ಎಲ್ಲರು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ಇದರಲ್ಲಿ ರೋಬೋಟಿಕ್ಸ್ ಮೂಲಕ ಗೋಡೆ, ಛಾವಣಿ ಮತ್ತು ನೆಲವನ್ನು ಪದರದಿಂದ ನಿರ್ಮಿಸಲಾಗುತ್ತದೆ. ಅಂದರೆ ತಯಾರಿಕೆ ಮತ್ತು ವಿನ್ಯಾಸದ ಸೂಚನೆಗಳನ್ನು ನೀಡಿದಂತೆಯೇ ಯಂತ್ರವು ಸ್ವಯಂಚಾಲಿತವಾಗಿ ಅದನ್ನು ತಯಾರಿಸುತ್ತದೆ. ಈ ಯಂತ್ರವು ಅನೇಕ ರೀತಿಯಲ್ಲಿ ಮನೆಯನ್ನು ಸಿದ್ಧಪಡಿಸುವಲ್ಲಿ ಸಹಾಯ ಮಾಡುತ್ತದೆ.

3D Printing Technology
Image Credit: Newsforkids

3D Printing ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ..?
*3d ಪ್ರಿಂಟಿಂಗ್ ತಂತ್ರಜಾನವು ನಕ್ಷೆಯನ್ನು ಅನುಸರಿಸುವುದಿಲ್ಲ. ಬದಲಾಗಿ ಇದರಲ್ಲಿ ಎಲ್ಲವೂ ಗಣಕೀಕರಣಗೊಂಡಿದೆ.

Join Nadunudi News WhatsApp Group

*ಕಂಪ್ಯೂಟರ್‌ ಗೆ ಫೀಡ್ ಮಾಡಿದ ನಕ್ಷೆಯು ರೊಬೊಟಿಕ್ಸ್ ಸಹಾಯದಿಂದ ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ.

*ಗೋಡೆಯ ಅಗಲ ಎಷ್ಟು, ಅದರ ಎತ್ತರ ಎಷ್ಟು ಮತ್ತು ಒಳಭಾಗದಲ್ಲಿ ಏನು ನಿರ್ಮಿಸಬೇಕು, ಇದೆಲ್ಲವನ್ನೂ ರೊಬೊಟಿಕ್ ಸಿಸ್ಟಮ್ ನಿರ್ಧರಿಸುತ್ತದೆ.

*ಇದರ ನಳಿಕೆಯು ಅತ್ಯಂತ ಮುಖ್ಯವಾದ ಭಾಗವಾಗಿದೆ, ಇದು ನಿರ್ಮಾಣಕ್ಕಾಗಿ ಕೆಲಸ ಮಾಡುತ್ತದೆ.

3D printed house in India
Image Credit: Housing

*ಮುದ್ರಕದ ಸಹಾಯದಿಂದ ಮಾತ್ರ ನಿರ್ಮಾಣ ಸಾಮಗ್ರಿಯನ್ನು ಉತ್ಪಾದಿಸುವುದನ್ನು ಮುಂದುವರಿಸಲಾಗುತ್ತದೆ ಮತ್ತು ಕಟ್ಟಡವನ್ನು ನಿರ್ಮಿಸುವುದನ್ನು ಮುಂದುವರಿಸಲಾಗುತ್ತದೆ.

*ಇನ್ನು ಸಾಮಾನ್ಯ ನಿರ್ಮಾಣಕ್ಕೆ ಹೋಲಿಸಿದರೆ 3D ಪ್ರಿಂಟಿಂಗ್ ನಲ್ಲಿನ ನಿರ್ಮಾಣವು ಖರ್ಚನ್ನು ಕಡಿಮೆ ಮಾಡುತ್ತದೆ.

Join Nadunudi News WhatsApp Group