NCERT Sylabus: 3 ರಿಂದ 6 ತರಗತಿ ಮಕ್ಕಳಿಗೆ ಜಾರಿಗೆ ಬಂತು ಹೊಸ ನಿಯಮ, ಪಠ್ಯಕ್ರಮ ಬದಲಾವಣೆ.

2024 -25 ರ ಶೈಕ್ಷಣಿಕ ಸಾಲಿನ 3 ರಿಂದ 6 ತರಗತಿ ಮಕ್ಕಳ ಪಠ್ಯಕ್ರಮದಲ್ಲಿ ಬದಲಾವಣೆ.

3rd To 6th Class NCERT Syllabus Change: ಇಂದಿನ ಕಾಲದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎನ್ನುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮಗೆ ಮಕ್ಕಳು ಹುಟ್ಟಿದ ತಕ್ಷಣ ಮಕ್ಕಳ ಶಿಕ್ಷಣದ ಬಗ್ಗೆ ಯೋಚನೆ ಮಾಡುತ್ತಾರೆ. ಇನ್ನು ದೇಶದಲ್ಲಿ ವಿವಿಧ ರೀತಿಯ ನಿಯಮಗಳು ಬದಲಾಗುತ್ತಿದ್ದಂತೆ ಶಾಲಾ ಶಿಕ್ಷಣ ನೀತಿಯಲ್ಲಿ ಕೂಡ ಅನೇಕ ರೀತಿಯ ಬದಲಾವಣೆಗಳು ಆಗುತ್ತಿವೆ.

ಕಳೆದ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿತ್ತು. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ವಿದ್ಯಾರ್ಥಿಗಳು ಈಗಾಗಲೇ ಅನೇಕ ಹೊಸ ಹೊಸ ವಿಷಯಗಳನ್ನು ಪರಿಚಯಿಸಿದೆ.

3rd To 6th Class NCERT Syllabus Change
Image Credit: Indiatodayne

ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮ ಬದಲಾವಣೆ
ಇನ್ನು ಶಿಕ್ಷಣ ಇಲಾಖೆಯು 1 ನೇ ತರಗತಿ ದಾಖಲಾತಿಗೆ 6 ವರ್ಷ ವಯಸ್ಸನ್ನು ಕೂಡ ನಿಗದಿ ಮಾಡಿದೆ. 2024 -25 ರ ಶೈಕ್ಷಣಿಕ ಸಾಲಿನಿಂದ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಧಾಖಲಾಗುವಂತಿಲ್ಲ. ಇನ್ನು 1 ನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿದ ಬೆನ್ನಲ್ಲೇ ಇದೀಗ NCERT 3 ರಿಂದ 6 ತರಗತಿ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊಸ ನಿಯಮದ ಅಡಿಯಲ್ಲಿ 2024 -25 ರ ಶೈಕ್ಷಣಿಕ ಸಾಲಿನ 3 ರಿಂದ 6 ತರಗತಿಯಾ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಬಾರಿ ಬದಲಾವಣೆ ಆಗಲಿದೆ.

3 ರಿಂದ 6 ತರಗತಿ ಮಕ್ಕಳಿಗೆ ಜಾರಿಗೆ ಬಂತು ಹೊಸ ನಿಯಮ
2024- 25ನೇ ತರಗತಿ 3ರಿಂದ 6ನೇ ತರಗತಿಯ ಪಠ್ಯಕ್ರಮ ಬದಲಾವಣೆಯನ್ನು ಮುಂಬರುವ ಶೈಕ್ಷಣಿಕ ವರ್ಷದಲ್ಲಿಯೇ ಜಾರಿಗೆ ತರಲು ಆದೇಶ ಹೊರಡಿಸಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಶೀಘ್ರದಲ್ಲೇ ಪಠ್ಯಕ್ರಮವನ್ನು ಬಿಡುಗಡೆ ಮಾಡಲಿದೆ. ಈ ನಾಲ್ಕು ತರಗತಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ತರಗತಿಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

NCERT Syllabus Change
Image Credit: NDTV

ಬ್ರಿಡ್ಜ್ ಕೋರ್ಸ್ ಅನ್ನು ತರಗತಿ III ರಿಂದ VI ವರೆಗೆ ನಡೆಸಲಾಗುವುದು, ಅಲ್ಲಿ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. ಪಠ್ಯಪುಸ್ತಕಗಳ ವಿತರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಶಿಕ್ಷಕರು ಹೊಸ ಪಠ್ಯವನ್ನು ಕಲಿಸಬೇಕು ಎಂದು ಹೇಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ, ಶಿಕ್ಷಣ ಇಲಾಖೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿ ಪಠ್ಯಕ್ರಮ ಬದಲಾವಣೆಗೆ ಸೂಚನೆ ನೀಡಿತ್ತು.

Join Nadunudi News WhatsApp Group

3rd To 6th Class NCERT Syllabus
Image Credit: Times Now News

Join Nadunudi News WhatsApp Group