4G Network: ಗ್ರಾಮೀಣ ಭಾಗದ ಜನರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಪ್ರತಿ ಹಳ್ಳಿಗೂ 4G ಸೇವೆ ಆರಂಭ.

ರಾಜ್ಯದ ಪ್ರತಿ ಹಳ್ಳಿಗಳಿಗೂ 4g ಬರುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ.

Network Issue: ದೇಶದ ಹಲವು ಜಿಲ್ಲೆಗಳಲ್ಲಿ ನೆಟ್ ವರ್ಕ್ ಸಮಸ್ಯೆಗಳು (Network Issue) ಹೆಚ್ಚಾಗಿವೆ. ಯಾವುದೇ ರೀತಿಯ ತುರ್ತು ಕರೆ ಮಾಡಲು ಕೂಡ ನೆಟ್ ವರ್ಕ್ ಇಲ್ಲದ ಅನೇಕ ಗ್ರಾಮೀಣ ಪ್ರದೇಶಗಳಿವೆ. ಇದೀಗ ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿನ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ.

4G Network
Image Source: India today

ಗ್ರಾಮೀಣ ಪ್ರದೇಶದ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ದೇಶದಲ್ಲಿಯೇ ಸಾಕಾಷ್ಟು ಜನಪ್ರಿಯತೆ ಪಡೆದಿರುವ ಮೋದಿ ಅವರ ಮನ್ ಕಿ ಬಾತ್ (Man Ki Baat) ಕಾರ್ಯಕ್ರಮ ಭಾನುವಾರದಂದು ತನ್ನ 100 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಮನ್ ಕಿ ಬಾತ್ 100 ಸಂಚಿಕೆಯ ಸಂಭಾರಂಭದಲ್ಲಿ ಗ್ರಾಮೀಣ ಪದೇಶದ ಜನತೆಗೆ ಟೆಲಿಕಾಂ ರಾಜ್ಯ ಸಚಿವರಾದ ದೇವುಸಿನ್ಹ್ ಚೌಹಾಣ್ ಸಿಹಿ ಸುದ್ದಿ ನೀಡಿದ್ದಾರೆ.

ದೇಶದ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಲ್ಲಿಯೂ 2024 ರ ವೇಳೆಗೆ 4G ನೆಟ್ ವರ್ಕ್ ಸಂಪರ್ಕ ನೀಡುವಂತೆ ದೇವುಸಿನ್ಹ್ ಚೌಹಾಣ್ (Devusinh Chauhan) ಘೋಷಣೆ ಹೊರಡಿಸಿದ್ದಾರೆ.

The government gave good news to the people of rural areas
Image Credit: facebook

2024 ರಲ್ಲಿ ಪ್ರತಿ ಹಳ್ಳಿಯಲ್ಲೂ 4G ಸೇವೆ ಲಭ್ಯ
PTI ಸಚಿವರಾದ ದೇವುಸಿನ್ಹ್ ಚೌಹಾಣ್ ಅವರು ಮಾತನಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಪ್ರತಿಯೊಬ್ಬರನ್ನು ಹೆಚ್ಚು ಸಾಧಿಸಲು ಪ್ರೇರೇಪಿಸುತ್ತಾರೆ. ಅವರ ಮನ್ ಕಿ ಬಾತ್ ಸಂಚಿಕೆಗಳು ಕೊನೆಯ ಸ್ತರದಲ್ಲಿರುವ ಜನರಿಗೂ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳನ್ನು ನೀಡಲು ಮತ್ತಷ್ಟು ಪ್ರೇರೇಪಿಸುತ್ತದೆ’ ಎಂದು ಹೇಳಿದ್ದಾರೆ.

2024 ರ ವೇಳೆಗೆ 4G ಸ್ಯಾಚುರೇಶನ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಟೆಲಿಕಾಂ ರಾಜ್ಯ ಸಚಿವರಾದ ದೇವುಸಿನ್ಹ್ ಚೌಹಾಣ್ ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group