Board Exam: 5, 8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷೆಯಲ್ಲಿ ಮತ್ತೆ ಬದಲಾವಣೆ, ಶಿಕ್ಷಣ ಇಲಾಖೆಯ ಸುತ್ತೋಲೆ.

5 , 8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷಾ ನಿಯಮದಲ್ಲಿ ಮತ್ತೆ ಬದಲಾವಣೆ

Board Exam Rule Change Karnataka: ಹೊಸ ವರ್ಷವೂ ಅನೇಕ ಹೊಸ ಹೊಸ ನಿಯಮಗಳೊಂದಿಗೆ ಆರಂಭವಾಗಲಿದೆ. ಹೊಸ ವರ್ಷದಲ್ಲಿ ದೇಶದಲ್ಲಿ ಅನೇಕ ನಿಯಮಗಳು ಪರಿಚಯವಾಗಲಿದೆ. ಸದ್ಯ ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಲ್ಲಿಯೇ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಕುರಿತು ಮಹತ್ವದ ಬದಲಾವಣೆ ತರಲಾಗಿದೆ.

ಸದ್ಯ ರಾಜ್ಯ ಸರ್ಕಾರ 5, 8, 9 ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿದೆ. 5, 8, 9 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ. ಮುಂದೆ ನಡೆಯಲಿರುವ ವಾರ್ಷಿಕ ಪರೀಕ್ಷೆ ಹೊಸ ನಿಯಮದಂತೆ ನಡೆಯಲಿದೆ ಎನ್ನುವುದು ವಿದ್ಯಾರ್ಥಿಗಳಿಗೆ ತಿಳಿದಿರಲಿ.

karnataka students exam update
Image Credit: Original Source

ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಸುತ್ತೋಲೆ
ಶಾಲಾ ಶಿಕ್ಷಣ ಇಲಾಖೆಯು 5, 8 ಮತ್ತು 9ನೇ ತರಗತಿ ಪರೀಕ್ಷೆಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. 5 ಮತ್ತು 8 ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ (SA-1) ಮತ್ತು ಮೌಲ್ಯಮಾಪನದ ಫಲಿತಾಂಶಗಳನ್ನು ನೀಡಬೇಕು ಎಂದು ಹೇಳಲಾಗಿದ್ದು, 9 ನೇ ತರಗತಿಯ ಫಲಿತಾಂಶವನ್ನು ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಪ್ರಕಟಿಸಲು ಸೂಚಿಸಲಾಗಿದೆ.

5 ,8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷೆಯಲ್ಲಿ ಮತ್ತೆ ಬದಲಾವಣೆ
5 ನೇ ತರಗತಿ ಬೋರ್ಡ್ ಪರೀಕ್ಷೆಗೆ, 2023-24 ನೇ ತರಗತಿಯ ಶೈಕ್ಷಣಿಕ ಮಾರ್ಗಸೂಚಿಗಳಲ್ಲಿ ನವೆಂಬರ್‌ ನಿಂದ ಫೆಬ್ರವರಿ 2024 ರವರೆಗಿನ ಪಠ್ಯ ವಸ್ತುಗಳನ್ನು ಮತ್ತು ಎಂಟನೇ ತರಗತಿಗೆ ಜೂನ್ 2023 ರಿಂದ ಫೆಬ್ರವರಿ 2024 ರ ವರೆಗಿನ ಪಠ್ಯ ವಸ್ತು ಪರಿಗಣಿಸಲು ಸೂಚಿಸಲಾಗಿದೆ.

karnataka school students board exam update
Image Credit: Original Source

9ನೇ ತರಗತಿಯ ಮೌಲ್ಯಮಾಪನದಲ್ಲಿ ಪ್ರಥಮ ಭಾಷೆಗೆ 100 ಅಂಕಗಳಿಗೆ, ದ್ವಿತೀಯ ಭಾಷೆ, ತೃತೀಯ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಬೇಕು. ಅಂತಿಮವಾಗಿ, ಆಂತರಿಕ ಮೌಲ್ಯಮಾಪನ ಅಂಕ, ಎಸ್‌ಎ-2 ಬದಲಿಗೆ ನಡೆಸಿದ ಲಿಖಿತ ಮೌಲ್ಯಮಾಪನ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group