Tax Exemption: ಹೊಸ ವರ್ಷದಿಂದ ಈ 5 ಆದಾಯಗಳ ಮೇಲೆ ಯಾವದೇ ತೆರಿಗೆ ಇಲ್ಲ, ಕೇಂದ್ರದ ಘೋಷಣೆ

ಆದಾಯ ಇಲಾಖೆಯು ಈ ಐದು ಆದಾಯದ ಮೂಲಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ

5 Non -Taxable Income 2024: ಪ್ರಸ್ತುತ 2024 ಆರಂಭವಾಗಿದೆ. ಜನರು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾ 2023 ಗೆ ವಿದಾಯ ಹೇಳಿ 2024 ಅನ್ನು ಸ್ವಾಗತಿಸಿದ್ದಾರೆ. ಹೊಸ ವರ್ಷಕ್ಕೆ ಆದಾಯ ತೆರಿಗೆ ನಿಯಮಗಳು ಇನ್ನಷ್ಟು ಕಠಿಣಗೊಳ್ಳುತ್ತದೆ. 2022 -23 ITR Filling ಕೊನೆಯ ದಿನಾಂಕ ನಿನ್ನೆಗೆ ಮುಗಿದಿದೆ.

ಜನರು ನಿಗದಿತ ಸಮಯದೊಳಗೆ ವಿಳಂಬ ಪಾವತಿ ಶುಲ್ಕದೊಂದಿಗೆ ITR ಸಲ್ಲಿಕೆ ಮಾಡಿದ್ದಾರೆ. ಇನ್ನು 2023 -24 ರ ITR ಸಲ್ಲಿಕೆಯ ಗಡುವು ಹತ್ತಿರವಾಗುತ್ತಿದೆ. ಈ ಹಿನ್ನಲೆ ITR ಸಲ್ಲಿಕೆಯ ನಿಯಮಗಳು ಇನ್ನಷ್ಟು ಬಿಗಿಗೊಳ್ಳಲಿದೆ. ಇನ್ನು ಹೊಸ ವರ್ಷದ ಆರಂಭಕ್ಕೆ ಆದಾಯ ತೆರಿಗೆ ಕಟ್ಟುವವರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಆದಾಯ ಇಲಾಖೆಯು ಈ ಐದು ಆದಾಯದ ಮೂಲಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.

Tax Exemption In India
Image Credit: Indiafilings

ಹೊಸ ವರ್ಷದಿಂದ ಈ 5 ಆದಾಯಗಳ ಮೇಲೆ ಯಾವುದೇ ತೆರಿಗೆ ಇಲ್ಲ
*ದೇಶದ ರೈತರು ಕೃಷಿಯಿಂದ ಗಳಿಸಿದ ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2 ) ಅಡಿಯಲ್ಲಿ, ಹಿಂದೂ ಅವಿಭಜಿತ ಕುಟುಂಬದಿಂದ ಪಿತ್ರಾರ್ಜಿತ ರೂಪದಲ್ಲಿ ಪಡೆದ ಆದಾಯವು ತೆರಿಗೆ ಮುಕ್ತ ಆಗಿರುತ್ತದೆ.

*ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ. ಆದರೆ ನಿಮ್ಮ ಸಂಬಂಧಿ ಹೊರತುಪಡಿಸಿ ಬೇರೆ ಯಾರಾದರೂ ಉಡುಗೊರೆಯಾಗಿ ನೀಡಿದರೆ 50,000 ರೂ. ವರೆಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.

*ಸರ್ಕಾರೀ ನೌಕರರ ಮರಣದ ನಂತರ ಪಡೆದ ಗ್ರಾಚುಟಿಯ (Gratuity) ಮೇಲಿಯ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.

Join Nadunudi News WhatsApp Group

5 Non -Taxable Income
Image Credit: The Indian Express

*ಇನ್ನು ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟಬೇಕಿಲ್ಲ. ಇನ್ನು 5 ಲಕ್ಷಕ್ಕಿಂತ ಹೆಚ್ಚಿನ VRS ನಲ್ಲಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಅಥವಾ ಪ್ರಶಸ್ತಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.

*ಇನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ವಿದ್ಯಾರ್ಥಿ ವೇತನದ ಆದಾಯಕ್ಕೆ ಯಾವುದೇ ತೆರಿಯನ್ನು ವಿಧಿಸಲಾಗುವುದಿಲ್ಲ. ಮಹಾವೀರ ಚಕ್ರ, ಪರಮ ವೀರ ಚಕ್ರ, ವೀರ ಚಕ್ರ ಮತ್ತು ಇತರ ಪಿಂಚಣಿದಾರರಂತಹ ಶೌರ್ಯ ಪ್ರಶಸ್ತಿಗಳ ವಿಜೇತರು ಪಡೆಯುವ ಪಿಂಚಣಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

Join Nadunudi News WhatsApp Group