Ration Facility: ಮುಂದಿನ 5 ವರ್ಷ ರೇಷನ್ ಕಾರ್ಡ್ ಇದ್ದವರು ಈ ಸೇವೆಯನ್ನು ಉಚಿತವಾಗಿ ಪಡೆಯಲಿದ್ದಾರೆ, ಕೇಂದ್ರದ ಘೋಷಣೆ

ಮುಂದಿನ ಐದು ವರ್ಷಗಳ ಕಾಲ BPL ರೇಷನ್ ಕಾರ್ಡ್ ಇದ್ದವರಿಗೆ ಉಚಿತ ಅಕ್ಕಿ ಘೋಷಣೆ

5 Years Free Ration Facility For BPL Card Holders: ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿಯೊಬ್ಬರ ಆರ್ಥಿಕ ಮಟ್ಟ ಸುಧಾರಿಸಲು  ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುತ್ತಿವೆ. ಬಡತನ ರೇಖೆಗಿಂತ ಕೆಳಗಿದ್ದರೆ ಈ ಸುದ್ದಿ ಬಹಳ ಉಪಯುಕ್ತ ಆಗಲಿದೆ.

ಸದ್ಯ ಭಾರತದಲ್ಲಿ ಸಾಕಷ್ಟು ಜನರು ಊಟಕ್ಕೆ ಇಲ್ಲದೆ ಪಷ್ಟಪಡುತ್ತಿರುವುದನ್ನ ಗಮನಿಸಿದ ಕೇಂದ್ರ ಸರ್ಕಾರ ಈಗ ಇನ್ನೊಂದು ಘೋಷಣೆ ಮಾಡಿದ್ದು ಇದು ಮಧ್ಯಮ ವರ್ಗದ ಮತ್ತು ಬಡಜನರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದ ಉಡುಗೊರೆ ಏನು ಅನ್ನುವುದರ ಬಗ್ಗೆ ತಿಳಿಯೋಣ.

ration card latest update
Image Credit: Informal news

ಕೇಂದ್ರದಿಂದ BPL ಕಾರ್ಡ್ ಇದ್ದವರಿಗೆ ಮುಂದಿನ ಐದು ವರ್ಷ ಉಚಿತ ಅಕ್ಕಿ
ಹೌದು ಕೇಂದ್ರ ಸರ್ಕಾರ ಕರೋನ ಮಹಾಮಾರಿ ದೇಶಕ್ಕೆ ಆವರಿಸಿದ ಸಮಯದಲ್ಲಿ ಉಚಿತ ಅಜ್ಜಿ ಘೋಷಣೆ ಮಾಡಿದ್ದು ಈಗ ಅದನ್ನ ಮುಂದಿನ ಐದು ವರ್ಷಗಳ ಮುಂದುವರೆಸಲು ತೀರ್ಮಾನವನ್ನ ಮಾಡಿದೆ. ಮುಂದಿನ ಐದು ವರ್ಷಗಳ ಕಾಲ BPL ಕಾರ್ಡ್ ಹೊಂದಿರುವ ದೇಶದ ಎಲ್ಲಾ ಕುಟುಂಬಗಳು ಉಚಿತವಾಗಿ ಅಕ್ಕಿಯನ್ನ ಪಡೆಯುವಬಹುದು.

ಛತ್ತೀಸ್‌ಗಢ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ಸಿಗಲಿದೆ

ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಸರ್ಕಾರ ಹೊಸ ವರ್ಷದಿಂದ ಐದು ವರ್ಷಗಳ ಕಾಲ ತನ್ನ ರಾಜ್ಯದ ಪಡಿತರ ಚೀಟಿದಾರರಿಗೆ ಉಚಿತ ಪಡಿತರವನ್ನು ನೀಡುವುದಾಗಿ ಘೋಷಿಸಿದ್ದು, ಇದರಿಂದ ಜನರ ಮುಖದಲ್ಲಿ ಸಾಕಷ್ಟು ಸಂತೋಷ ಗೋಚರಿಸುತ್ತಿದೆ. ಕೇವಲ ಅಕ್ಕಿಯ ಲಾಭವನ್ನು ಸರ್ಕಾರ ನೀಡಲಿದ್ದು, ಇದರಿಂದ ರಾಜ್ಯದ 67,92,153 ಕುಟುಂಬಗಳಿಗೆ ಅನುಕೂಲವಾಗಲಿದೆ. ಸಿಎಂ ವಿಷ್ಣು ದೇವ್ ಸಾಯಿ ಅವರ ಸೂಚನೆ ಮೇರೆಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ರಕ್ಷಣಾ ಇಲಾಖೆ ಪತ್ರ ಬರೆದು ಅಕ್ಕಿ ವಿತರಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.

Join Nadunudi News WhatsApp Group

5 Years Free Ration Facility From Chhattisgarh Government
Image Credit: divyajagran

ಬಡ ಜನರಿಗೆ ಸಹಾಯ ಆಗಲಿದೆ

ಈ ಪ್ರಯೋಜನವು ಜನವರಿ 1, 2024 ರಿಂದ ಡಿಸೆಂಬರ್ 2028 ರವರೆಗೆ ಲಭ್ಯವಿರುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯಿಂದ ಸಿಎಂ ಆಗಿದ್ದ ವಿಷ್ಣು ದೇವ್ ಸಾಯಿ ಅವರ ಈ ನಿರ್ಧಾರವನ್ನು ಮಾಸ್ಟರ್ ಸ್ಟ್ರೋಕ್ ಎಂದೇ ಪರಿಗಣಿಸಲಾಗುತ್ತಿದೆ. ಸಿಎಂ ಆದೇಶದ ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದೆ.

Join Nadunudi News WhatsApp Group