Nuclear Battery: ಒಮ್ಮೆ ಚಾರ್ಜ್ ಮಾಡಿದರೆ 50 ವರ್ಷ ಚಾರ್ಜ್ ಮಾಡುವ ಅಗತ್ಯ ಇಲ್ಲ, ವಿಜ್ಞಾನಿಗಳ ಈ ಸಂಶೋಧನಗೆ ಅಪಾರ ಮೆಚ್ಚುಗೆ

ಒಂದೇ ಚಾರ್ಜ್ ನಲ್ಲಿ 50 ವರ್ಷ ಗಳ ಕಾಲ ಅಡೆತಡೆಯಿಲ್ಲದೆ ಕೆಲಸ ಮಾಡುವ ಹೊಸ ಬ್ಯಾಟರಿ.

50 Years Charged Battery: ಜಗತ್ತಿನಲ್ಲಿ ಸ್ಮಾರ್ಟ್ ಫೋನ್ (Smart Phone) ಬಳಕೆ ಮಾಡದವರಿಗಿಂತ, ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಾಗಲ್ಲ. ಹೌದು ಸ್ಮಾರ್ಟ್ ಫೋನ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಬಳಕೆ ಮಾಡುತ್ತಾರೆ. ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್ ನಲ್ಲಿಯೇ ಕಳೆಯುತ್ತಾರೆ.

ಈ ಸ್ಮಾರ್ಟ್ ಫೋನ್ ಬಳಕೆದಾರರ ಅತಿ ದೊಡ್ಡ ಸಮಸ್ಯೆ ಎಂದರೆ ಅದರಲ್ಲಿ ಸಣ್ಣ ಬ್ಯಾಟರಿ ಹಾಗೂ ಚಾರ್ಜ್ ನಿಲ್ಲುವುದಿಲ್ಲ ಎಂಬುದಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಚೀನಾ ವಿಜ್ಞಾನಿಗಳು ಹೊಸ ಬ್ಯಾಟರಿಯನ್ನು ಕಂಡು ಹಿಡಿದಿದ್ದಾರೆ.

50 Years Charged Battery
Image Credit: NDTV

ಒಮ್ಮೆ ಚಾರ್ಜ್ ಮಾಡಿದರೆ 50 ವರ್ಷ ಚಾರ್ಜ್ ಮಾಡುವ ಅಗತ್ಯ ಇಲ್ಲ
ಸ್ಮಾರ್ಟ್ ಫೋನ್ ನಲ್ಲಿ ಎಷ್ಟೇ ಉತ್ತಮವಾದ ಬ್ಯಾಟರಿ ಇದ್ದರು ಕೂಡ ತಡೆರಹಿತವಾಗಿ ಬಳಸಿದರೆ ಎರಡು ದಿನಕ್ಕಿಂತ ಹೆಚ್ಚು ಚಾರ್ಜ್ ಉಳಿಯುವುದಿಲ್ಲ. ಆದ್ರೆ ಈಗ ಚೀನಾ ವಿಜ್ಞಾನಿಗಳು ಒಂದೇ ಚಾರ್ಜ್ ನಲ್ಲಿ 50 ವರ್ಷ ಗಳ ಕಾಲ ಅಡೆತಡೆಯಿಲ್ಲದೆ ಕೆಲಸ ಮಾಡುವ ಹೊಸ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಹೌದು ಚೀನಾದ ಬೀಟಾವೋಲ್ಟ್ ಟೆಕ್ನಾಲಜಿ ಎಂಬ ಕಂಪನಿ 50 ವರ್ಷ ಬಾಳಿಕೆ ಬರುವ ರೇಡಿಯೋನ್ಯೂಕ್ಲೈಡ್ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಬ್ಯಾಟರಿ ಅನ್ನು ಅಳವಡಿಸಿಕೊಂಡು ಒಮ್ಮೆ ಚಾರ್ಜ್ ಮಾಡಿದರೆ ಮತ್ತೆ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಬೀಟಾವೋಲ್ಟ್ ಟೆಕ್ನಾಲಜಿ ಸ್ಮಾರ್ಟ್ ಫೋನ್ ನಲ್ಲಿ ಕಂಡುಬರುವ ಪರಮಾಣು ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಚೀನಾ ವಿಜ್ಞಾನಿಗಳ ಈ ಸಂಶೋಧನೆಗೆ ವ್ಯಾಪಕ ಮೆಚ್ಚುಗೆ ಕೇಳಿಬರುತ್ತಿದೆ
ಬಾಹ್ಯಾಕಾಶದಲ್ಲಿ ಸೂರ್ಯನಿಂದ ದೂರದಲ್ಲಿರುವ ಉಪಕರಣಗಳ ಕಾರ್ಯಕ್ಷಮತೆಗಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಪರಮಾಣು ಬ್ಯಾಟರಿಗಳ ತಯಾರಿಕೆ ಈ ಹಿಂದೆ ಬಹಳಷ್ಟು ಬಾರಿ ವಿಫಲವಾಗಿತ್ತು. ಇದಕ್ಕೆ ಕಾರಣ ಸ್ಮಾರ್ಟ್ ಫೋನ್ ಗಳಿಗೆ ಹೊಂದಿಕೊಳ್ಳುವ ಬ್ಯಾಟರಿಗಳನ್ನು ತಯಾರಿಸಲು ಅಸಮರ್ಥತೆ.

Join Nadunudi News WhatsApp Group

ಹಾಗೆ ಪ್ಲುಟೋನಿಯಂ ನಂತಹ ವಿಕಿರಣಶೀಲ ವಸ್ತುವನ್ನು ಸ್ಮಾರ್ಟ್ ಫೋನ್ ನಲ್ಲಿ ಬಳಕೆ ಮಾಡುವ ಬಹಳ ಅಪಾಯಕಾರಿ. ಈ ಕಾರಣಕ್ಕೆ ಬೀಟಾವೋಲ್ಟ್ ಟೆಕ್ನಾಲಜಿ ಈ ಸಾರಿ ವಿಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಇದು ಸಿಂಥೆಟಿಕ್ ಡೈಮಂಡ್ ಲೇಯರ್ ಅನ್ನು ಬಳಸುವ ರೇಡಿಯೋನ್ಯೂಕ್ಲೈಡ್ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸುತ್ತಿದೆ, ಇದು ಅರೆವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ.

China Introduced 50 Years Charged Battery
Image Credit: Linkedin

ಸಾಮಾನ್ಯ ಲಿಥಿಯಂ ಬ್ಯಾಟರಿಗಳಿಗೆ ಹೋಲಿಕೆ ಮಾಡಿದರೆ ನ್ಯೂಕ್ಲಿಯರ್ ಬ್ಯಾಟರಿಗಳು 10 ಪಟ್ಟು ಶಕ್ತಿಯನ್ನು ಹೊಂದಿರುತ್ತದೆ. ನ್ಯೂಕ್ಲಿಯರ್ ಬ್ಯಾಟರಿಗಳು 1 ಗ್ರಾಂ ಬ್ಯಾಟರಿಯಲ್ಲಿ 3300 ಮೆಗಾವ್ಯಾಟ್ ಗಂಟೆಗಳನ್ನು ಸಂಗ್ರಹಿಸಬಹುದು. ಈ ಕಂಪನಿ ಈಗಾಗಲೇ BB100 ಎಂಬ ವರ್ಕಿಂಗ್ ಮಾಡೆಲ್ ಅನ್ನು ತಂದಿದೆ. ಈ ಬ್ಯಾಟರಿ 15*15*5 ಮಿಮಿ ಅಳತೆ, 100 ಮೈಕ್ರೋ ವ್ಯಾಟ್ ವಿದ್ಯುತ್ ಒದಗಿಸುತ್ತದೆ. ಈ ಬ್ಯಾಟರಿಗಳು ಲಭ್ಯವಾದರೆ, ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಪವಾಡವಾಗುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group