Board Exam: 5 ಮತ್ತು 8ನೇ ತರಗತಿ ಮಕ್ಕಳಿಗೆ ಹೊಸ ಪರೀಕ್ಷಾ ನಿಯಮ, ಶಿಕ್ಷಣ ಇಲಾಖೆಯ ನಿರ್ಧಾರ.

5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಎಕ್ಸಾಮ್ ಕಡ್ಡಾಯ ಎಂದು ಆದೇಶವನ್ನ ಹೊರಡಿಸಿದೆ ರಾಜ್ಯ ಶಿಕ್ಷಣ ಇಲಾಖೆ

5th And 8th Board Exam: 5 ಮತ್ತು 8 ನೇ ತರಗತಿ ವಿದಾರ್ಥಿಗಳಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಪ್ರತಿ ವರ್ಷ 10 ಮತ್ತು 12 ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಇದ್ದಿತ್ತು. ಇದೀಗ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಪ್ರತಿ ವರ್ಷ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

5th And 8th Board Exam
Image Source: Public Tv

ಶಿಕ್ಷಣ ಇಲಾಖೆಯಿಂದ ಹೊಸ ಆದೇಶ
ಈ ಭಾರಿ ಶಿಕ್ಷಣ ಇಲಾಖೆಯಿಂದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಮ್ ನಡೆಸಬೇಕು ಎಂಬ ಮಾಹಿತಿ ಹೊರ ಬಿದ್ದಿತ್ತು. ಅದೇ ರೀತಿ ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಮ್ ಬರೆದಿದ್ದಾರೆ. ಇಂದು ಏಪ್ರಿಲ್ 10 ರಂದು ಬೋರ್ಡ್ ಎಕ್ಸಾಮ್ ಬರೆದ ವಿದ್ಯಾರ್ಥಿಗಳಿಗೆ ರಿಸಲ್ಟ್ ಪ್ರಕಟವಾಗಿದೆ.

ಮೊನ್ನೆ ಅಷ್ಟೇ ಶಿಕ್ಷಣ ಇಲಾಖೆಯಿಂದ 5 ರಿಂದ 8 ತರಗತಿ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿಲ್ಲ ಎಂಬ ಆದೇಶ ಬಂದಿತ್ತು. ಇದೀಗ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಎಕ್ಸಾಮ್ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

5th And 8th Board Exam
Image Source: ETV Bharath

5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಎಕ್ಸಾಮ್
ರಾಜ್ಯದ ಎಲ್ಲ ಸರ್ಕಾರಿ ಹಾಗು ಖಾಸಗಿ ಶಾಲೆಗಳಿಗೆ 8 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಎಕ್ಸಾಮ್ ನಡೆಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರಿಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಆಧರಿಸಿ ಶಾಲೆಗಳು ಮಕ್ಕಳಿಗೆ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ವರದಿ ಆಗಿದೆ.

Join Nadunudi News WhatsApp Group

5th And 8th Board Exam
Image Source: Public Tv

Join Nadunudi News WhatsApp Group