7th Pay: ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿ, ಸಿದ್ದರಾಮಯ್ಯ ಮಹತ್ವದ ಘೋಷಣೆ.

ಸರ್ಕಾರೀ ನೌಕರರ 7 ನೇ ವೇತನ ಹೆಚ್ಚಳದ ಬಗ್ಗೆ ಮಹತ್ವದ ಮಾಹಿತಿ

7th Pay Commission Latest Update: ಸದ್ಯ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ 7 ನೇ ವೇತನದಡಿ ಸಂಬಳವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಘೋಷಣೆಯ ನಂತರ ರಾಜ್ಯ ಸರ್ಕಾರೀ ನೌಕರರು ತಮ್ಮ ವೇತನ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಬಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸುವುದಾಗಿ ಸಾಕಷ್ಟು ಬಾರಿ ಮಾಹಿತಿ ನೀಡಿದ್ದಾರೆ.

ಆದರೆ ವೇತನ ಹೆಚ್ಚಳದ ಬಗ್ಗೆ ಈವರೆಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ನೌಕರರು ಹಲವು ಸಮಯದಿಂದ ವೇತನ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಸದ್ಯ ರಾಜ್ಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೌಕರರ 7 ನೇ ವೇತನ ಹೆಚ್ಚಳದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

7 th Pay Commission Latest News
Image Credit: India

ಸರ್ಕಾರೀ ನೌಕರರಿಗೆ 7 ನೇ ವೇತನ ಜಾರಿ
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ 7ನೇ ವೇತನ ಆಯೋಗದ ಭರವಸೆ ಈಡೇರಿಲ್ಲ. ಇದೇ ವೇಳೆ ಸರ್ಕಾರಿ ನೌಕರರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದಾರೆ. ಈ ಬಾರಿಯಾದರೂ ರಾಜ್ಯ ಸರ್ಕಾರ 7 ನೇ ವೇತನದ ಹೆಚ್ಚಳವನ್ನು ಘೋಷಣೆ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಿದ್ದರಾಮಯ್ಯ ಮಹತ್ವದ ಘೋಷಣೆ
ಮಾರ್ಚ್ 16, 2024 ರಂದು, ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7 ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯನ್ನು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಈ ವರದಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು. 7 ನೇ ವೇತನ ಆಯೋಗವು ಈಗ ಕರ್ನಾಟಕ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇಕಡಾ 27.5 ರಷ್ಟು ಹೆಚ್ಚಳವನ್ನು ಶಿಫಾರಸು ಮಾಡಿದೆ.

ಆ ವೇಳೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆಯೂ ಮುಗಿದಿದೆ. ಇದೆಲ್ಲದರಿಂದ ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಮೂಡಿದ್ದು, ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಗುಡ್ ನ್ಯೂಸ್ ಕೊಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ದಿಢೀರ್ ವೇತನ ಪರಿಷ್ಕರಣೆ ಸರಿಯಾಗಿ ಆಗದಿದ್ದರೆ ಸರ್ಕಾರಿ ನೌಕರರು ಬೃಹತ್ ಹೋರಾಟ ನಡೆಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಅವರು ಆದಷ್ಟು ಬೇಗ ವೇತನ ಹೆಚ್ಚಳದ ಘೋಷಣೆ ಮಾಡಬಹುದು ಎನ್ನಲಾಗುತ್ತಿದೆ.

Join Nadunudi News WhatsApp Group

7th pay commission New Updates
Image Credit: Informalnewz

Join Nadunudi News WhatsApp Group