7th Pay Update: ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ಮುಂದಿನ ತಿಂಗಳು ಸಂಬಳದ ಜೊತೆಗೆ 28,450 ರೂ ಖಾತೆಗೆ ಬರಲಿದೆ.

ಮುಂದಿನ ತಿಂಗಳು ಸರ್ಕಾರೀ ನೌಕರರ ಖಾತೆಗೆ ಸಂಬಳದ ಜೊತೆ ಬರಲಿದೆ 28450 ರೂ

7th Pay Latest Update: ಸದ್ಯ ದೇಶದಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ನೌಕರರಿಗೆ ಸಾಕಷ್ಟು ಅಪ್ಡೇಟ್ ನೀಡಿದೆ. ವೇತನ ಹೆಚ್ಚಳದ ಬಗ್ಗೆ ಸರ್ಕಾರ ನಿರ್ಧರಿಸಿದೆ. ಸರ್ಕಾರೀ ನೌಕರರಿಗೆ ಮುಂದಿನ ತಿಂಗಳಿನಲ್ಲಿ 7 ನೇ ವೇತನದ ವಿಷಯವಾಗಿ ಬಿಗ್ ಅಪ್ಡೇಟ್ ಹೊರಬೀಳಲಿದೆ.

ಮಾರ್ಚ್‌ನಲ್ಲಿ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು (4% DA Hike) ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ಕೇಂದ್ರ ನೌಕರರು ಪಡೆಯುವ ತುಟ್ಟಿಭತ್ಯೆ ಶೇ.50ಕ್ಕೆ ಏರಿಕೆಯಾಗಲಿದ್ದು, ಅವರ ವೇತನದಲ್ಲಿ ಎಷ್ಟು ಹೆಚ್ಚಾಗಳಲಿದೆ ಎನ್ನುವ ಬಗ್ಗೆ ಸಂಪೂರ್ಣ ಲೆಕ್ಕಾಚಾರ ಈ ಲೇಖನದಲ್ಲಿದೆ.

Govt Employees 7th Pay Latest Update
Image Credit: India Today

ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್
ಕಳೆದ ವರ್ಷ 2023 ರ ಅಕ್ಟೋಬರ್‌ ನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಅವರ ಡಿಎಯನ್ನು 4 ಪ್ರತಿಶತದಷ್ಟು ಹೆಹೆಚ್ಚಿಸಿದೆ. ಈ ಮೂಲಕ ನೌಕರರ ತುಟ್ಟಿ ಭತ್ಯೆಯು 42 ಪ್ರತಿಶತದಿಂದ 46 ಪ್ರತಿಶತಕ್ಕೆ ಏರಿಕೆ ಮಾಡಲಾಗಿತ್ತು. ಈಗ ಈ ಬಾರಿಯೂ ಹಣದುಬ್ಬರ ದರದ ಪ್ರಕಾರ ಸರ್ಕಾರ ಮತ್ತೆ ಶೇ.4 ರಷ್ಟು ಡಿಎ ಹೆಚ್ಚಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

ಅಖಿಲ ಭಾರತ CPI-IW ಡೇಟಾದ ಆಧಾರದ ಮೇಲೆ DA-DR ಅನ್ನು ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ವರದಿಗಳ ಪ್ರಕಾರ, ಕೈಗಾರಿಕಾ ಕಾರ್ಮಿಕರ CPI-IW ನ 12 ತಿಂಗಳ ಸರಾಸರಿ 392.83 ಮತ್ತು ಅದರ ಪ್ರಕಾರ, DA ಮೂಲ ವೇತನದ 50.26 ಪ್ರತಿಶತಕ್ಕೆ ಬರುತ್ತಿದೆ. ಈ ಬಾರಿಯೂ ಡಿಎ 4% ಹೆಚ್ಚಾಗಬಹುದು ಮತ್ತು ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ತೆರಿಗೆ 50% ಆಗಿರುತ್ತದೆ.

7th Pay Commission Update
Image Credit: Yuvapatrkaar

ಮುಂದಿನ ತಿಂಗಳು ಸಂಬಳದ ಜೊತೆಗೆ 28450 ರೂ ಖಾತೆಗೆ ಬರಲಿದೆ
ಡಿಎ ಹೆಚ್ಚಳದ ನಂತರ ಕೇಂದ್ರ ಉದ್ಯೋಗಿಗಳ ವೇತನ ಹೆಚ್ಚಳದ ಲೆಕ್ಕಾಚಾರವನ್ನು ನೋಡುವುದಾದರೆ, ಕೇಂದ್ರ ಉದ್ಯೋಗಿ 18,000 ರೂ. ಮೂಲ ವೇತನವನ್ನು ಪಡೆದರೆ, ನಂತರ ನೌಕರನ ತುಟ್ಟಿ ಭತ್ಯೆಯು ಪ್ರಸ್ತುತ 46 ಶೇಕಡಾ ದರದಲ್ಲಿ 8,280 ರೂ. ಗಳಾಗಿದ್ದು, ಶೇ.4 ಹೆಚ್ಚಳದ ನಂತರ, ಶೇ.50ರ ಪ್ರಕಾರ ಲೆಕ್ಕ ಹಾಕಿದರೆ 9,000 ರೂ. ಹೆಚ್ಚಳವಾಗಲಿದೆ.  ಅಂದರೆ, ಅವರ ಸಂಬಳದಲ್ಲಿ ನೇರವಾಗಿ 720 ರೂ. ಏರಿಕೆಯಾಗುತ್ತದೆ.

Join Nadunudi News WhatsApp Group

ಇನ್ನು  ಗರಿಷ್ಠ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಿದರೆ, 56,900 ರೂಪಾಯಿಗಳನ್ನು ಪಡೆಯುವ ಉದ್ಯೋಗಿಗೆ 46 ಶೇಕಡಾ ದರದಲ್ಲಿ 26,174 ರೂಪಾಯಿಗಳ DA ಸಿಗುತ್ತದೆ.  ಶೇಕಡಾವಾರು ಹೆಚ್ಚಿಸಿದರೆ ಆ ಅಂಕಿ 28,450 ಆಗುತ್ತದೆ. ಅಂದರೆ ವೇತನದಲ್ಲಿ  2,276 ರೂ. ಹೆಚ್ಚಳವಾಗಲಿದೆ.

Join Nadunudi News WhatsApp Group