Gold Limits At Home: ಚಿನ್ನ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಜಾಸ್ತಿ ಎಂದು ಹೇಳಬಹುದು. ಇದರ ನಡುವೆ ದೇಶದಲ್ಲಿ ಚಿನ್ನ ಖರೀದಿ ಮಾಡುವುದಕ್ಕೂ ಕೂಡ ಕೂಡ ಕೆಲವು ನಿಯಮಗಳು ಇದ್ದು ಅದನ್ನು ತಿಳಿದುಕೊಳ್ಳುವುದು ಅತೀ ಅಗತ್ಯ ಎಂದು ಹೇಳಬಹುದು. ಗುದ್ದಿದೆ ಅಂದಮಾತ್ರಕ್ಕೆ ನಮಗೆ ಬೇಕಾದಷ್ಟು ಚಿನ್ನ ಖರೀದಿ ಮಾಡುವಂತಿಲ್ಲ.
ದೇಶದಲ್ಲಿ ಚಿನ್ನ ಖರೀದಿ ಮಾಡುವುದಕ್ಕೆ ಮತ್ತು ಮನೆಯಲ್ಲಿ ಚಿನ್ನ ಶೇಖರಣೆ ಮಾಡುವುದಕ್ಕೆ ಕೆಲವು ಕಾನೂನು ನಿಯಮ ಇದ್ದು ಆ ನಿಯಮದ ಅಡಿಯಲ್ಲಿ ಚಿನ್ನ ಖರೀದಿ ಮಾಡಿ ಮನೆಯಲ್ಲಿ ಶೇಖರಣೆ ಮಾಡಿ ಇಡಬಹುದು. ಭಾರತದ ಕಾನೂನಿನ ಪ್ರಕಾರ ಮಹಿಳೆಯರು ಮತ್ತು ಪುರುಷರು ಎಷ್ಟು ಚಿನ್ನ ಖರೀದಿ ಮಾಡಬಹುದು ಅನ್ನುದಕ್ಕೆ ಸಂಬಂಧಿಸಿದಂತೆ ಕಾನೂನು ನಿಯಮ ಹೊರಡಿಸಲಾಗಿದೆ. ಹಾಗಾದರೆ ಭಾರತದ ಕಾನೂನಿನ ಪ್ರಕಾರ ಮಹಿಳೆಯರು ಮತ್ತು ಪುರುಷರು ಎಷ್ಟು ಚಿನ್ನ ಖರೀದಿಸಿ ಮನೆಯಲ್ಲಿ ಶೇಖರಣೆ ಮಾಡಿ ಇಡಬಹುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
ಹೌದು, ಕಾನೂನು ನಿಯಮಗಳ ಪ್ರಕಾರ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಶೇಖರಣೆ ಮಾಡಿ ಇಟ್ಟುಕೊಳ್ಳುವಂತಿಲ್ಲ. ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಚಿನ್ನವನ್ನು ಮನೆಯಲ್ಲಿ ಶೇಖರಣೆ ಮಾಡಿ ಇಟ್ಟುಕೊಂಡರೆ ಆದಾಯೇ ತೆರಿಗೆ ಇಲಾಖೆಯಿಂದ ನಿಮಗೆ ನೋಟೀಸ್ ಬರಬಹುದು ಅಥವಾ ಆಧಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿಮ್ಮ ಮನೆಯ ಮೇಲೆ ದಾಳಿ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ. ಪುರುಷರು ಮತ್ತು ಮಹಿಳೆಯರಿಗೆ ಚಿನ್ನ ಶೇಖರಣೆ ಮಾಡುದಕ್ಕೆ ಸಂಬಂಧಿಸಿದಂತೆ ಬೇರೆಬೇರೆ ನಿಯಮ ಇದೆ ಅನ್ನುವುದು ತಿಳಿದಿರಲಿ.
ಇನ್ನು ಭಾರತೀಯ ಕಾನೂನು ನಿಯಮದ ಪ್ರಕಾರ, ಒಬ್ಬ ವಿವಾಹಿತ ಮಹಿಳೆ ಮನೆಯಲ್ಲಿ 500 ಗ್ರಾಂ ತನಕ ಚಿನ್ನ ಇಟ್ಟುಕೊಳ್ಳಬಹುದು, ಆದರೆ ಮದುವೆಯಾಗದ ಮಹಿಳೆಯರು ಮನೆಯಲ್ಲಿ 250 ಗ್ರಾಂ ಚಿನ್ನಕ್ಕಿಂತ ಅಧಿಕ ಚಿನ್ನವನ್ನು ಇಟ್ಟುಕೊಳ್ಳುವಂತಿಲ್ಲ. ಇನ್ನು ಮದುವೆಯಾಗದ ಅಥವಾ ಮದುವೆ ಆಗಿರದ ಪುರುಷನೇ ಆಗಿರಲಿ, ಆತ ಮನೆಯಲ್ಲಿ 100 ಗ್ರಾಂ ಗಿಂತ ಅಧಿಕ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವಂತಿಲ್ಲ. ಇನ್ನು ಆದಾಯ ತೆರಿಗೆ ಇಲಾಖೆಯವರು ನಿಮ್ಮ ಮನೆಯ ಮೇಲೆ ದಾಳಿ ಮಾಡಿದರೆ ನೀವು ಮನೆಯಲ್ಲಿ ಇರುವ ಚಿನ್ನಕ್ಕೆ ಈ ಕೆಲವು ದಾಖಲೆ ನೀಡುವುದು ಕಡ್ಡಾಯವಾಗಿದೆ.
* ಆದಾಯ ತೆರಿಗೆ ಅಧಿಕಾರಿಗೆ ಚಿನ್ನ ಖರೀದಿ ಮಾಡಿದ ಬಿಲ್ ಕಡ್ಡಾಯವಾಗಿ ನೀಡಬೇಕು.
* ಯಾವ ಬ್ಯಾಂಕಿನಿಂದ ಹಣವನ್ನು ವರ್ಗಾವಣೆ ಮಾಡಲಾಗಿದೆ ಅನ್ನುವುದರ ಬಗ್ಗೆ ಮಾಹಿತಿ ನೀಡಬೇಕು.
* ಪೂರ್ವಾರ್ಜಿತ ಆಸ್ತಿ ಆಗಿದ್ದರೆ ನೀವು ಅದರ ವಿಲ್ ಅಥವಾ ಪೂರ್ವಜರು ಚಿನ್ನ ಮಾಡಿಟ್ಟಿರುವ ಬಗ್ಗೆ ಮಾಹಿತಿ ನೀಡಬೇಕು.
* ಉಡುಗೊರೆ ರೂಪದಲ್ಲಿ ಚಿನ್ನ ನಿಮಗೆ ಸಿಕ್ಕಿದ್ದರೆ ಅದಕ್ಕೆ ಕೂಡ ನೀವು ಬಿಲ್ ಪಡೆದಿರುವುದು ಕಡ್ಡಾಯವಾಗಿದೆ.
* ಇನ್ನು ನೀವು ಈ ದಾಖಲೆಯನ್ನು ತೋರಿಸದೆ ಇದ್ದರೆ ಆದಾಯ ತೆರಿಗೆ ಇಲಾಖೆಯವರು ನಿಮ್ಮ ಚಿನ್ನ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
ಇನ್ನು ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದರೆ ನಿಗದಿತ ಮಿತಿಗಿಂತ ಎಷ್ಟು ಚಿನ್ನ ನಿಮ್ಮ ಬಳಿ ಇದೆಯೋ ಆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಕಾರಣಗಳಿಂದ ನೀವು ಉಡುಗೊರೆ ಅಥವಾ ಯಾವುದೇ ಮೂಲಗಳಿಂದ ಚಿನ್ನ ಬಂದಿದ್ದರೂ ಅದಕ್ಕೆ ಸರಿಯಾದ ದಾಖಲೆ ಇಟ್ಟುಕೊಳ್ಳುವುದು ಅತೀ ಮುಖ್ಯ ಎಂದು ಹೇಳಬಹುದು. ಒಂದುವೇಳೆ ನಿಮ್ಮ ಚಿನ್ನ ಮುಟ್ಟುಗೋಲು ಹಾಕಿಕೊಳ್ಳದೆ ಇದ್ದರೆ ನೀವು ದೊಡ್ಡ ಮೊತ್ತದ ತೆರಿಗೆ ಕೂಡ ಪಾವತಿ ಮಾಡಬೇಕು.