NPS To UPS Transfer: ಸದ್ಯ ದೇಶದಲ್ಲಿ ಏಕೀಕೃತ ಪಿಂಚಣಿ ಯೋಜನೆ (Unified Pension Scheme) ಜಾರಿಗೆ ಬಂದಿದೆ. ಹೌದು, ಕೇಂದ್ರ ಸರ್ಕಾರೀ ನೌಕರರು ಇನ್ನುಮುಂದೆ ತಮ್ಮ ವೃತ್ತಿ ಜೀವನದ ಅವಧಿಗೆ ಸಂಬಂಧಿಸಿದಂತೆ ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಹಳೆಯ ನ್ಯಾಷನಲ್ ಪೆನ್ಷನ್ ಸ್ಕೀಮ್ (Pension Scheme) ಮತ್ತು ಏಕೀಕೃತ ಪಿಂಚಣಿ ಯೋಜನೆಯಲ್ಲಿ ಹಲವು ವ್ಯತ್ಯಾಸ ಇರುವುದನ್ನು ನಾವು ನೀವೆಲ್ಲ ನೋಡಬಹುದು. ಇದರ ನಡುವೆ ದೇಶದಲ್ಲಿ ಏಕೀಕೃತ ಪಿಂಚಣಿ ಯೋಜನೆ ಜಾರಿಯಾಗಿದ್ದು ಕೇಂದ್ರ ಸರ್ಕಾರೀ ನೌಕರರು ಮತ್ತು ಕೆಲವು ನೌಕರರು ಅಧಿಕ ಪ್ರಮಾಣದ ಲಾಭ ಪಡೆದುಕೊಳ್ಳಲಿದ್ದಾರೆ. ಸದ್ಯ ಸಾಕಷ್ಟು ನೌಕರರಿಗೆ NPS (National Pension Scheme) ನಿಂದ UPS ಗೆ ಹೇಗೆ ವರ್ಗಾವಣೆ ಆಗಿವುದು ಅನ್ನುವುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ NPS ನಿಂದ UPS ಗೆ ವರ್ಗಾವಣೆ ಆಗುವುದು ಹೇಗೆ ಮತ್ತು ಅದರ ಪ್ರಕ್ರಿಯೆ ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶಾದ್ಯಂತ ಏಕೀಕೃತ ಪಿಂಚಣಿ ಯೋಜನೆ ಜಾರಿ
ಕೇಂದ್ರ ಸರ್ಕಾರೀ ನೌಕರರಿಗಾಗಿ ಕೇಂದ್ರ ಸರ್ಕಾರ ಈಗ ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನು ದೇಶದಲ್ಲಿ ಏಕೀಕೃತ ಪಿಂಚಣಿ ಜಾರಿಯಾಗಿದ್ದು ಯಾವ ಯಾವ ನೌಕರರು ಏಕೀಕೃತ ಪಿಂಚಣಿ ಯೋಜನೆಯನ್ನು ಪಿಂಚಣಿ ಪಡೆದುಕೊಳ್ಳುತ್ತಾರೋ ಅವರೆಲ್ಲರೂ NPS ಗಿಂತ ಅಧಿಕ ಪಿಂಚಣಿ ಪಡೆದುಕೊಳ್ಳಲಿದ್ದಾರೆ. ಒಬ್ಬ ನೌಕರರ ಎಷ್ಟು ವರ್ಷ ಸರ್ಕಾರೀ ಸೇವೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಅನ್ನುವುದರ ಮೇಲೆ ಈ ಏಕೀಕೃತ ಪಿಂಚಣಿ ಯೋಜನೆ ನಿಗದಿಯಾಗುತ್ತದೆ. ಯಾವ ಯಾವ ನೌಕರ ಸಾಕಷ್ಟು ವರ್ಷಗಳಿಂದ ಕೇಂದ್ರ ಸರ್ಕಾರೀ ನೌಕರಿಯಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ ಅವರು ಅಧಿಕ ಪ್ರಮಾಣದ ಪಿಂಚಣಿ ಲಾಭ ಪಡೆದುಕೊಳ್ಳಬಹುದು.
NPS ನಿಂದ UPS ವರ್ಗಾವಣೆ ಆಗುವುದು ಹೇಗೆ ನೋಡಿ
ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಏಕೀಕೃತ ಪಿಂಚಣಿ ಯೋಜನೆಗೆ ವರ್ಗಾವಣೆ ಆಗುವ ನೌಕರರು ಅಧಿಕೃತ ವೆಬ್ಸೈಟ್ ಭೇಟಿನೀಡಿ ವರ್ಗಾವಣೆ ಮಾಡಿಕೊಳ್ಳಬಹುದು ಮತ್ತು ಅದರ ವಿಧಾನ ಕೂಡ ಬಹಳ ಸುಲಭವಾಗಿದೆ. npscra.nsdl.co.in/ups.php ವೆಬ್ಸೈಟ್ ಗೆ ಭೇಟಿನೀಡಿ ನೌಕರರು ಏಕೀಕೃತ ಪಿಂಚಣಿ ಯೋಜನೆಗೆ ವರ್ಗಾವಣೆ ಆಗಬಹುದು. ವೆಬ್ಸೈಟ್ ನಲ್ಲಿ ಅಗತ್ಯ ದಾಖಲೆ ನೀಡಿ ಫಾರ್ಮ್ ಭರ್ತಿಮಾಡಿ ನೀವು ಏಕೀಕೃತ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ UPS ಅನ್ನು ಕಾರ್ಯಗತ ಮಾಡಲು ಕೆಲವು ನಿಯಮಗಳನ್ನು ಕೂಡ ದೇಶದಲ್ಲಿ ಜಾರಿಗೆ ತಂದಿದೆ. ಈ ಹಿಂದೆ NPS ಆಯ್ಕೆ ಮಾಡಿಕೊಂಡವರು ಕೂಡ UPS ಗೆ ಅರ್ಜಿ ಸಲ್ಲಿಸಬಹುದು ಮತ್ತು ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 23 ಲಕ್ಷ ಕೇಂದ್ರ ಸರ್ಕಾರೀ ನೌಕರರು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವ ಸರ್ಕಾರೀ ನೌಕರರು ಏಕೀಕೃತ ಪಿಂಚಣಿ ಯೋಜನೆ ಪಡೆಯಬಹುದು…?
* 10 -25 ವರ್ಷ ಸೇವೆ ಸಲ್ಲಿಸಿದ ನೌಕರರು ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆಯಬಹುದು. ಇನ್ನು ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿದ ನೌಕರರು ಏಕೀಕೃತ ಪಿಂಚಣಿ ಯೋಜನೆಯ ಅಧಿಯಲ್ಲಿ ಕನಿಷ್ಠ 10 ಸಾವಿರ ರೂ ಪಿಂಚಣಿ ಪಡೆಯಲಿದ್ದಾರೆ.
* ಇನ್ನು UPS ನಲ್ಲಿ ಮೂಲವೇತನ ಮತ್ತು ಸಂಬಳವನ್ನು ಲೆಕ್ಕಾಚಾರ ಮಾಡಿ ಪಿಂಚಣಿ ನಿಗದಿ ಮಾಡಲಾಗುತ್ತದೆ ಮತ್ತು ಮೂಲ ವೇತನದ ಶೇಕಡಾ 20 ರಷ್ಟು ಹಣವನ್ನು ಪಿಂಚಣಿಯಾಗಿ ಪಡೆಯಬಹುದು.
* ಏಕೀಕೃತ ಪಿಂಚಣಿ ಯೋಜನೆಯಲ್ಲಿ ನೌಕರರು ತಮ್ಮ ಹೂಡಿಕೆಗಾಗಿ ಖಾಸಗಿ ಪಿಂಚಣಿ ನಿಧಿ ವ್ಯವಸ್ಥಾಪಕರನ್ನು ಆಯ್ಕೆ ಮಾಡುವ ಅಧಿಕಾರ ಕೂಡ ಹೊಂದಿರುತ್ತಾರೆ.
* ಇನ್ನು ಏಕೀಕೃತ ಪಿಂಚಣಿ ಯೋಜನೆಯಲ್ಲಿ ನೌಕರನ ಸಂಗಾತಿಗೆ ಕೂಡ ಆರ್ಥಿಕ ನೆರವು ನೀಡಲಾಗುತ್ತದೆ. ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆಯುವ ನೌಕರ ಮರಣ ಹೊಂದಿದರೆ ಆತನ ಪತ್ನಿ ಆತನ ಪಿಂಚಣಿಯ ಶೇಕಡಾ 60 ರಷ್ಟು ಹಣವನ್ನು ಪ್ರತಿ ತಿಂಗಳು ಪಡೆಯಬಹುದು.
* ಏಪ್ರಿಲ್ 1 ನೇ ತಾರೀಕಿನಿಂದ ಅರ್ಜಿ ಆರಂಭ ಆಗಲಿದ್ದು CRA ಪೋರ್ಟಲ್ ಮೂಲಕ ನೌಕರರು UPS ಗೆ ಅರ್ಜಿ ಸಲ್ಲಿಸಬಹುದು.